ನಾಯಕನಹಟ್ಟಿ : ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಬಿಜೆಪಿ ಮಂಡಲದ ಮುಖಂಡರು ಸಂಭ್ರಮಾಚರಣೆ ಮಾಡಿದರು.






ನಂತರ ಎಸ್ ಟಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಮಾತನಾಡಿ ಈ ದಿನ ದೇಶಕ್ಕೆ ಒಂದು ವಿಶೇಷವಾದ ದಿನ. ನಮ್ಮ ಮೆಚ್ಚಿನ ನಾಯಕ, ವಿಶ್ವ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ದೇಶದ ಜನರಿಗೆ ದಸರಾ ಹಬ್ಬದ ಕೊಡುಗೆಯನ್ನು ನೀಡಿದ್ದಾರೆ. ಜಿಎಸ್‌ಟಿ ತೆರಿಗೆಯನ್ನು ಕಡಿತಗೊಳಿಸಿ ಬಡವರು, ಮಧ್ಯಮ ವರ್ಗದ ದೇಶದ ಜನತೆಗೆ ಅನುಕೂಲವಾಗುವ ರೀತಿ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಮಲ್ಲೇಶ್ ಚನ್ನಗಾನಹಳ್ಳಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ದೇಶದ ಜನತೆಗೆ ದಸರಾ ಹಬ್ಬದ ಗಿಫ್ಟನ್ನು ನೀಡಿದ್ದಾರೆ. ಗೃಹ ಉಪಯೋಗಿ, ದಿನಬಳಕೆ ವಸ್ತುಗಳು, ಬೈಕ್ ಹಾಗೂ ಕಾರುಗಳನ್ನು ಖರೀದಿಸುವವರಿಗೆ ಜಾಕ್ ಪಾಟ್ ಧಮಾಕವನ್ನು ನೀಡಿದ್ದಾರೆ. ನೋಟ್ ಪುಸ್ತಕ, ಲೇಖನ, ಪೆನ್ಸಿಲ್, ರಬ್ಬರ್ ಹಾಗೂ ಆರೋಗ್ಯ ಮತ್ತು ಜೀವ ವಿಮೆಗಳಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿಟಿ ತಿಪ್ಪೇಸ್ವಾಮಿ ಮಾತನಾಡಿ ಭಾರತ ದೇಶದಲ್ಲಿ ದಸರಾ ಹಬ್ಬ ಒಂದು ವಿಶೇಷ ಹಬ್ಬ, ಈ ವಿಶೇಷವಾದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ದೇಶದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ದಸರಾ ಹಬ್ಬದ ಧಮಾಕವನ್ನು ಘೋಷಣೆ ಮಾಡಿದ್ದಾರೆ. ಜಿಎಸ್‌ಟಿ ತೆರಿಗೆಯನ್ನು ಕಡಿತಗೊಳಿಸಿ ದಿನಬಳಕೆ ಹಾಗೂ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ದೇಶದ ಜನತೆಗೆ ತುಂಬಾ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಎಂ ವೈ ಟಿ ಸ್ವಾಮಿ ಹಾಗೂ ಈ ರಾಮರೆಡ್ಡಿ ಮತ್ತು ಜೆಡಿಎಸ್ ಅಧ್ಯಕ್ಷ ಚನ್ನಬಸಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಮಂಡಲ ಅಧ್ಯಕ್ಷರಾದ ಎಂ ವೈ ಟಿ ಸ್ವಾಮಿ, ಈ ರಾಮರೆಡ್ಡಿ, ನಗರ ಘಟಕ ಅಧ್ಯಕ್ಷ ನಾಗರಾಜ್ ಜಾಗನೂರಹಟ್ಟಿ, ಮಂಡಲ ಕಾರ್ಯದರ್ಶಿ ಪ್ರಕಾಶ್ ರೆಡ್ಡಿ, ಮಂಡಲ ಉಪಾಧ್ಯಕ್ಷ ಎಂ ಓಬಣ್ಣ ಚನ್ನಬಸಯ್ಯನಹಟ್ಟಿ, ಮಾಜಿನಗರ ಘಟಕ ಅಧ್ಯಕ್ಷ ಮತ್ತು ಪ.ಪಂ ಸದಸ್ಯ ಮಾಂತಣ್ಣ, ಉಮೇಶ್ ಮಡಿವಾಳ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬೋಸೆರಂಗಪ್ಪ, ಗೋವಿಂದಪ್ಪ, ನಗರ ಘಟಕ ಕಾರ್ಯದರ್ಶಿ ಪ್ರಹ್ಲಾದ್ ಚನ್ನಬಸಯ್ಯನಹಟ್ಟಿ, ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಚೌಳಕೆರೆ ಬಸಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಶ್ ಗಿಣಿಯಾರ್, ಕಾರ್ಯಾಲಯ ಕಾರ್ಯದರ್ಶಿಗಳಾದ ತಿಪ್ಪೇಶ್, ಕೆ ಆರ್ ಬೋರಯ್ಯ ಇನ್ನು ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.