March 17, 2026
IMG-20250922-WA0222.jpg

ಚಳ್ಳಕೆರೆ: ಮಾದಿಗ ಸಮುದಾಯದ ರಾಜಕಾರಣಿಗಳು ತಮ್ಮ ಪಕ್ಷಗಳ ಪ್ರಮುಖ ನಾಯಕರ ಮೆಚ್ಚಿಸಲು ಸದಾ ಮುಂದಾಗಿರುವುದರಿಂದ ಮಾದಿಗ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅನ್ಯಾಯಕ್ಕೆ ಒಳಾಗುತ್ತಿದ್ದು ಇದನ್ನು ಮಾದಿಗ ಸಮುದಾಯ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ನಿವೃತ್ತ ತಹಸಿಲ್ದಾರ್ ಮಲ್ಲಿಕಾರ್ಜುನಪ್ಪ ಖಂಡಿಸಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 35 ವರ್ಷಗಳಿಂದ ಮಾದಿಗ ಸಮುದಾಯವು ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ ಪರಿಣಾಮ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿ ವರದಿ ಪಡೆದ ನಂತರ ಮೊನ್ನೆಯಷ್ಟೇ ಒಳ ಮೀಸಲಾತಿ ಪಡೆಯುವಲ್ಲಿ ನಮ್ಮ ಸಮುದಾಯ ಸಫಲವಾಗಿತ್ತು ಆದರೆ ಸರ್ಕಾರ ಈ ವರದಿ ಅನ್ವಯ ಮೀಸಲಾತಿಯನ್ನು ಜಾರಿಗೊಳಿಸದೆ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಸರ್ಕಾರ ವರದಿಯಲ್ಲಿನ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳನ್ನು ಎಂಬ ಸಮಾನ ಅಂಶವುಳ್ಳ ಐದು ಗುಂಪುಗಳನ್ನಾಗಿ ವಿಂಗಡಿಸಿ 17% ಮೀಸಲಾತಿ ಹಂಚಿಕೆ ಮಾಡಿ ಕೈ ತೊಳೆದುಕೊಂಡಿದೆ ಇದರಿಂದ ಈ ಹಿಂದೆ 17% ಮೀಸಲಾತಿ ಪಡೆಯುತ್ತಿದ್ದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದ್ದು ಸರ್ಕಾರದ ನಡೆಯನ್ನು ವಿರೋಧಿಸುತ್ತೇವೆ ಆದರೆ ನಮ್ಮ ಮಾದಿಗ ಸಮುದಾಯದ ರಾಜಕೀಯ ಮುಖಂಡರು ಸರ್ಕಾರದ ನಡೆಯನ್ನು ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಸಮುದಾಯಕ್ಕೆ ಮಾಡಿದ ದ್ರೋಹ ಎಂದು ಕಿಡಿ ಕಾರಿದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಸಿಕೆ ಮಹೇಶ್ವರಪ್ಪ ಮಾತನಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಮಾಧಾನಕರ ರೀತಿಯಲ್ಲಿ ಒಪ್ಪಿಗೆಯಾಗಿತ್ತು ಸರ್ಕಾರ ಶಿಫಾರಸ್ಸನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ಪ್ರವರ್ಗ ಎ ಪ್ರವರ್ಗ ಬಿ ಪ್ರವರ್ಗ ಸ ಎಂಬ ಮೂರು ಗುಂಪುಗಳಾಗಿ ವಿಂಗಡಿಸಿ ಮಾದಿಗ ಸಂಬಂಧಿತ ಜಾತಿಗಳಿಗೆ ಪ್ರವರ್ಗ ಎ ಗೆ 6% ಹೊಲೆಯ ಸಂಬಂಧಿತ ಪ್ರವರ್ಗ ಬಿ ಗೆ 6% ಸ್ಪರ್ಶ ಕುಲಂಬಗಳಿಗೆ ಮತ್ತು ಅಲೆಮಾರಿಗಳಿಗೆ ಸೇರಿ ಪ್ರವರ್ಗದಲ್ಲಿ  5% ನೀಡಿ ಮಾದಿಗ ಸಮುದಾಯಕ್ಕೆ ದೊರೆಯುತ್ತಿದ್ದ ಮೂಲ 17% ಮೀಸಲಾತಿಯಲ್ಲಿ ಕಡಿತಗೊಳಿಸಿದ್ದು ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದ ಹಣ ಅಧಿಕಾರ ಪ್ರಭಾವ ಇರುವವರು ಮಾತ್ರ ಮೀಸಲಾತಿಯ ಬಹುಪಾಲನ್ನು ಕಬಳಿಸಲು ಮುಂದಾಗಲಿದ್ದು ಸಮುದಾಯದ ತುಳಿತಕ್ಕೆ ಒಳಗಾದ ಜನರಿಗೆ ಇದರಿಂದ ಯಾವುದೇ ಲಾಭವಿಲ್ಲ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಸಮುದಾಯದ ಜನರೊಂದಿಗೆ ಚರ್ಚಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಬುದ್ಧ ದಮ್ಮಲ ಎಂದು ಬರೆಸಿ: ಸರ್ಕಾರ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಜಾತಿಗಣತಿಯಲ್ಲಿ ಬುದ್ಧ ಧರ್ಮಕ್ಕೆ ಸೇರ್ಪಡೆಯಾಗಿರುವ ಮಾದಿಗ ಸಮುದಾಯದ ಜನರು ಸಮೀಕ್ಷೆ ಜಾತಿ ಕಾಲಂನಲ್ಲಿ ಹಿಂದೂ ಸಮುದಾಯದ ಮಾದಿಗ ಎಂದು ಬರಸದೆ ಬುದ್ಧ ದಮ್ಮಲ ಎಂದು ಬರೆಸಿ ಬುದ್ಧ ಧರ್ಮವನ್ನು ಪಾಲಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ ಕುಮಾರ್ ಚಿಕ್ಕಣ್ಣ ಸಿಪಿ ಸುಧಾಕರ್ ಉಪಸ್ಥಿತರಿದ್ದರು. 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading