ಚಿತ್ರದುರ್ಗಸೆ.22:
ಇಂದು ದೇಶಾದ್ಯಂತ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆಯುರ್ವೇದ ಒಂದು ಪರಿಪೂರ್ಣ ಚಿಕಿತ್ಸಾ ಪದ್ಧತಿ ಹಾಗೂ ಆರೋಗ್ಯವನ್ನು ರಕ್ಷಿಸಲು ಬೇಕಾದ ಎಲ್ಲಾ ಅಂಶಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಇಂತಹ ಆಯುರ್ವೇದ ವೈದ್ಯಕೀಯ ವಿಜ್ಞಾನವು ಇಂದು ಎಂದಿಗಿಂತಲೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ಎಸ್. ನಾಗಸಮುದ್ರ ತಿಳಿಸಿದ್ದಾರೆ.
ಆಯುರ್ವೇದ, ಯೋಗ ಮತ್ತು ಧ್ಯಾನ ಭಾರತ ಪ್ರಪಂಚಕ್ಕೆ ಕೊಟ್ಟ ಅತ್ಯಮೂಲ್ಯ ಕೊಡುಗೆಗಳು ಆಯುರ್ವೇದ ಪದ್ಧತಿ ಪುರಾತನವಾದರೂ ಇಂದಿಗೂ ಪ್ರಸ್ತುತ. ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ ಪದ್ಧತಿಗಳ ಮೂಲಕ ಚಿಕಿತ್ಸೆ ನೀಡುತ್ತಿರುವ ಇಲಾಖೆಯ ಹೆಸರು ಆಯುಷ್.
ಆಯುರ್ವೇದ ಸುಮಾರು 5000 ವರ್ಷಗಳಿಂದ ಪ್ರಚಲಿತವಿರುವ ಪುರಾತನ ಭಾರತೀಯ ಚಿಕಿತ್ಸಾ ಪದ್ಧತಿ. ಶಾರೀರಿಕ ಹಾಗೂ ಮಾನಸಿಕ ರೋಗಗಳನ್ನು ಗುಣಪಡಿಸುವ ರೋಗಗಳು ಬಾರದಂತೆ ತಡೆಗಟ್ಟಲು ದಿನಚರ್ಯೆ, ಋತುಚರ್ಯೆ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. ಈ ಪದ್ಧತಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಸಸ್ಯಜನ್ಮ ಪ್ರಾಣಿಜನ್ಮ ಹಾಗೂ ಖನಿಜ ಪದಾರ್ಥಗಳಿಂದ ತಯಾರಿಸಿದ ಔಷಧಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುವುದು.
ಚಿಕಿತ್ಸೆಗಿಂತ ಆರೋಗ್ಯ ಕಾಪಾಡಲು ಹೆಚ್ಚು ಒತ್ತು ಕೊಡುವ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವ ಮಾನಸಿಕ ಒತ್ತಡ ಸೌಲ್ಯತೆ, ಮಧುಮೇಹ ಅಧಿಕ ರಕ್ತದ ಒತ್ತಡ ಇತ್ಯಾದಿ, ಆ ಸಾಂಕ್ರಾಮಿಕ ರೋಗಗಳಿಗೆ ಸಮರ್ಥ ಚಿಕಿತ್ಸೆಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗವೇ ಬಾರದಂತೆ ಕಾಪಾಡುವ ಪಂಚಕರ್ಮ, ದಿನಾಚರ್ಯ, ಋತುಚರ್ಯ, ಆಹಾರ ಪದ್ಧತಿ, ಮಾನಸಿಕ ಚಿಕಿತ್ಸೆ ಹೀಗೆ ಕೇವಲ ಚಿಕಿತ್ಸೆ ಅಲ್ಲದೆ ಮಾನವನ ಜನನದಿಂದ ಮರಣದವರೆಗೆ ಸುಖವಾಗಿ ಹಿತವಾಗಿ ಬದುಕಲು ಅವಶ್ಯಕವಿರುವ ಎಲ್ಲಾ ತತ್ವಗಳು ಆಯುರ್ವೇದದಲ್ಲಿ ಇವೆ.
ಜಗತ್ತಿನಾದ್ಯಂತ ಇಂದು ಸಮರ್ಥ ಹಾಗೂ ಸುರಕ್ಷಿತ ವೈದ್ಯಕೀಯ ಪದ್ಧತಿಯ ಬಗ್ಗೆ ಹುಡುಕಾಟ ನಡೆದಿದೆ. ಹಾಗಾಗಿ ಆಯುರ್ವೇದ ಇಂದು ಪ್ರಪಂಚದಾದ್ಯಂತ ಮುನ್ನೆಲೆಗೆ ಬರುತ್ತಿದೆ ಆಯುರ್ವೇದ ಸಿದ್ಧಾಂತಗಳನ್ನು ಸಂಶೋಧನೆಗಳ ಮುಖಾಂತರ ದೃಢೀಕರಿಸಲಾಗುತ್ತಿದೆ. ಆಯುರ್ವೇದ ಔಷಧಿಗಳ ವಹಿವಾಟು ದಿನೇ ದಿನೇ ಹೆಚ್ಚುತ್ತಿದ್ದು, ಅದು ಇಂದು 1.2 ಟ್ರಿಲಿಯನ್ ಮುಟ್ಟಿದೆ. ಇದು ಆಯುರ್ವೇದ ಬಗ್ಗೆ ಹೆಚ್ಚಾಗುತ್ತಿರುವ ಜನಪ್ರಿಯತೆಯನ್ನು ತೋರಿಸುತ್ತದೆ.
ಇಂತಹ ಉತ್ಕøಷ್ಟ ಆಯುರ್ವೇದ ಸೇವೆಯನ್ನು ನೀಡುವ ಚಿಕಿತ್ಸಾಲಯಗಳು ಚಿತ್ರದುರ್ಗದಾದ್ಯಂತ 34 ಕಡೆ ಕರ್ತವ್ಯ ನಿರ್ವಹಿಸುತ್ತಿವೆ. ಆಯುರ್ವೇದ ಪ್ರಾಥಮಿಕ ಹಂತದ ಆಯುರ್ವೇದ ಚಿಕಿತ್ಸೆ ಲಭ್ಯವಿದ್ದು, ಆಸ್ಪತ್ರೆಗಳಲ್ಲಿ ಮುಂದುವರೆದ ಹೆಚ್ಚಿನ ಆಯುರ್ವೇದ ಸೇವೆಗಳು ಲಭ್ಯ ಇವೆ. ಸಾರ್ವಜನಿಕರು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಧನ್ವಂತರಿ ಜಯಂತಿಯ ಅಂಗವಾಗಿ ಸೆ.23ರಂದು ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಉಚಿತ ಆಯುರ್ವೇದವನ್ನು ಚಿತ್ರದುರ್ಗ ನಗರದ ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ. ಆಯುರ್ವೇದ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಧನ್ವಂತರಿಯು ಎಲ್ಲರಿಗೂ ಪರಿಪೂರ್ಣ ಆರೋಗ್ಯ ನೀಡಲಿ ಎಂದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಕೋರಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.