
ನಾಯಕನಹಟ್ಟಿ : ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಲೋಕಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದರು.



ನಂತರ ಮಾತನಾಡಿದ ಅವರು ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ನಿವೇಶನದ ಆಶ್ರಯೋಜನೆಗೆ ಒಂದುವರೆ ತಿಂಗಳ ಒಳಗಾಗಿ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕೆಂದು ತಾಲ್ಲೂಕು ಕಾರ್ಯನಿರ್ವಾಧಿಕಾರಿ ಶಶಿಧರ್ ರವರಿಗೆ ಫೋನ್ ಮೂಲಕ ಆದೇಶಿಸಿದರು.
ಒಂದು ವಾರದ ಒಳಗಡೆ ರಾಜ ಕಾಲವೇಗೆ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದರು.
ಚರಂಡಿ ಮತ್ತು ಸಮುದಾಯ ಭವನ, ಕುಡಿಯುವ ನೀರು, ಗಂಗಾ ಕಲ್ಯಾಣ ಯೋಜನೆ, ಆಸ್ಪತ್ರೆಗಳು, ರಸ್ತೆಗಳು, ಶಾಲೆಗಳು ವಿಶೇಷ ಒತ್ತು ನೀಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಯಾದರೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿ ಎಂದು ರಸ್ತೆ ಡಾಂಬರೀಕರಣದ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದರು.
ಗುತ್ತಿಗೆದಾರರು ಅಧಿಕಾರಿಗಳು ಹಾಗೂ ಗುಣಮಟ್ಟದ ಕಾಮಗಾರಿ ಮಾಡಿ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಾಲರಾಜ್, ಬ್ಯಾಂಕ್ ಸೂರ ನಾಯಕ, ಬಂಡೆ ಕೋಪಲೆ ಓಬಣ್ಣ, ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೈಲ ಮಂಜಣ್ಣ , ಉಪಾಧ್ಯಕ್ಷ ಸೋಮಣ್ಣ, ರಾಮಸಾಗರ ಮಂಜಣ್ಣ, ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್, ವಕೀಲರು ಉಮಾಪತಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಆರ್. ಶ್ರೀಕಾಂತ್, ದೇವರಹಳ್ಳಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ವರವು ಕಾಟಯ್ಯ, ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ಬಗರ್ ಹುಕುಂ ಕಮಿಟಿ ಸದಸ್ಯ ಬೋರ ನಾಯಕ, ಕಾಂಗ್ರೆಸ್ ಮುಖಂಡ ಕೆ.ಪಿ. ರುದ್ರಮುನಿ, ಸದಸ್ಯ ರೇವಣ್ಣ, ವಿಜಯಕುಮಾರ್, ಮುದಿಯಪ್ಪ, ಜಾಕಿರ್ ಹುಸೇನ್, ಕೋಡಿಕಪಿಲೇ ಸಣ್ಣ ಪಾಲಯ್ಯ, ಟಿ ಮಂಜಣ್ಣ ನಿವೃತ್ತ ಶಿಕ್ಷಕ ಶಿವಣ್ಣ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಜಿ.ವಿ. ಕರಿಯಣ್ಣ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ ಕೋಟಪ್ಪ ತಳುಕು ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶೀರೆಹಳ್ಳಿ, ಅಶೋಕ, ಪೊಲೀಸ್ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ನಾಗರಾಜ, ಶಂಕರ್ಮೂರ್ತಿ, ಪ್ರಕಾಶಪ್ಪ, ಸಿಬ್ಬಂದಿ ವರ್ಗ ಇನ್ನೂ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.