
ಚಳ್ಳಕೆರೆ:
ಚಳ್ಳಕೆರೆ ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕ ಟಿ. ರಘುಮೂರ್ತಿ ಅವರ ಕೊಡುಗೆ ಅಪಾರವಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ಗುರುವಾರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್, ಡಿಎಂಎಫ್ ಯೋಜನೆಯಡಿ ಸುಮಾರು ಮೂವತ್ತು ಲಕ್ಷ ವೆಚ್ಚದ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ನಡೆದ ಭೂಮಿ ಪೂಜಾ ಕಾರ್ಯದಲ್ಲಿ ಮಾತನಾಡಿದರು.
ತಾಲೂಕಿನ ಗಡಿಭಾಗದ ಗ್ರಾಮಗಳ ಶಾಲಾ ವ್ಯವಸ್ಥೆಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಸುಮಾರು 88 ವಿದ್ಯಾರ್ಥಿಗಳು ಕಲಿಯುತ್ತಿರುವ ಗ್ರಾಮದಲ್ಲಿ ಶಾಲಾ ಕೊಠಡಿಗಳ ಕೊರತೆ ಇತ್ತು. ತುರ್ತಾಗಿ ಕ್ರಮ ವಹಿಸಿರುವ ಶಾಸಕರು, ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುಕೂಲ ಮಾಡಲಾಗಿದೆ. ಜೊತೆಗೆ, ಕಾಮಗಾರಿ ನಿರ್ವಹಿಸುವ ಕೆಆರ್ ಡಿಎಲ್ ನಿಗಮಕ್ಕೆ ಮೂರು ತಿಂಗಳೊಳಗೆ ಗುಣಮಟ್ಟವಾಗಿ ನಿರ್ಮಿಸಲು ಸೂಚಿಸಿದ್ದಾರೆ. ಅದರಂತೆ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳಿಗೆ ಅನುಕೂಲ ಆಗುವ ರೀತಿ ಸುಸಜ್ಜಿತವಾಗಿ ಕಾಮಗಾರಿ ನಡೆಯಬೇಕಿದೆ. ಈ ಭಾಗದ ಹತ್ತಾರು ಹಳ್ಳಿಗಳ ಮಕ್ಕಳ ಶಿಕ್ಷಣ ವ್ಯವಸ್ಥೆಗಾಗಿ, ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿರುವಂತೆ ಕೊರ್ಲಕುಂಟೆ ಗ್ರಾಮದಲ್ಲಿ ಪಿಯು ಕಾಲೇಜು ಮತ್ತು ವಿದ್ಯಾರ್ಥಿ ನಿಲಯ ಸ್ಥಾಪನೆ ಆಗಬೇಕಿದೆ ಎಂದರು.
ಗ್ರಾಮದ ಕೆ.ಆರ್. ಮಂಜುನಾಥ್ ಮಾತನಾಡಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನಿಯೋಜನೆ ಆಗಬೇಕು. ಶಾಲಾ ಆರಂಭ ದಲ್ಲೇ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಗ್ರಾಮದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವಂತೆ ಶಿಕ್ಷಕರೊಂದಿಗೆ, ಪಾಲಕರ ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.ಭೂದಾನ ಕುಟುಂಬಸ್ಥರಾದ ಶಾರದಮ್ಮ ಅಶೋಕ್, ಸಂತೋಷ್, ನಂದೀಶ್,
ಗ್ರಾಪಂ ಮಾಜಿ ಸದಸ್ಯರಾದ ಪಿ. ಕೆಂಗಪ್ಪ, ಡಿ. ಸಿರಿಯಣ್ಣ,ಶಾಲಾ ಸಮಿತಿ ಅಧ್ಯಕ್ಷ ಶಿವಾನಂದ,ಎಂ. ಮಾರಣ್ಣ ಕೆ. ಅನಂತ, ಮಹಾಲಿಂಗಪ್ಪ, ಜೆ.ಎಚ್. ಮಂಜುನಾಥ, ಶಿವಶಂಕರ್, ರಾಮದಾಸ್, ಬಸವರಾಜ್, ಡಿ. ಮಂಜಣ್ಣ, ಕೆ.ಎಚ್. ಆನಂದ್ ಮತ್ತಿತರರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.