ವರದಿ: ಕೆ ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:
ಸರ್ಕಾರ ಬಡಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಯೋಜನೆಗಳ ಮೂಲಕ ಸೌಲಭ್ಯ ನೀಡುತ್ತದೆ, ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಗುರುವಾರ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯ್ತುಕಾಶ್ರಯದಲ್ಲಿ ಪ್ರಣತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವತಿಯಿಂದ ಸಾಮಾಜಿಕ ಸೇರ್ಪಡೆ ಆದೋಲನ ಮತ್ತು ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳೆಗುವ ಮೂಲಕ ಉದ್ಘಾಟಿಸಿ ಮಾತಾನಾಡಿದರು.
ಕಾಯಿಲೆಗಳು ಬಡ ಶ್ರೀಮಂತ ಎಂದು ಕೇಳಿ ಬರುವುದಿಲ್ಲ ಇತ್ತಿಚ್ಚಿನ ದಿನಗಳಲ್ಲಿ 30 ವರ್ಷ ದಾಟಿದರೆ ಸಾಕು ಪ್ರತಿಯೊಬ್ಬರಲ್ಲಿ ಬಿಪಿ ಶುಗರ್ ಕಾಣಿಸಿಕೊಳ್ಳುತ್ತದೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವಂತೆ ಪ್ರತಿಯೊಬ್ಬರು ಪೌಷಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು ದಿನಕ್ಕೆ ಒಂದು ಮೊಟ್ಟೆ, ತರಕಾರಿ, ಹಣ್ಣು, ಸೇವನೆ ಮಾಡಿದಾಗ ಮಾತ್ರ ಯಾವುದೇ ರೋಗಿಗಳಿಗೆ ತುತ್ತಾಗುವ ಪರಿಸ್ಥಿತಿ ಬರುವುದಿಲ್ಲ. ಮಹಿಳೆಯರನ್ನು ಗೌರವಿಸಬೇಕು. ಗಂಡು ಹೆಣ್ಣು ಎಂಬ ತಾರತಮ್ಯ ಇರಬಾರದು ಎಂದರು.
ಅಬ್ಬೇನಹಳ್ಳಿ ಪಶು ವೈಧ್ಯಾಧಿಕಾರಿ ನವೀನ್ ಮಾತಾನಾಡಿ ಪಶು ಇಲಾಖೆಯಲ್ಲಿ ಅನೇಕ ಯೋಜನೆಗಳು ಇವೆ ಬಡ ಜನರು ಸೌಲಭ್ಯವನ್ನು ಪಡೆದುಕೊಳ್ಳಬೇಕು ಒಂದು ಕುರಿ ಸಾವನ್ನಪ್ಪಿದರೆ 7500 ಸರ್ಕಾರ ಪರಿಹಾರ ನೀಡುತ್ತದೆ, ಹಸು ಎಮ್ಮೆ ಸಾವನ್ನಪ್ಪಿದರೆ 15000 ಪರಿಹಾರ ನೀಡುತ್ತದೆ, ಕಾಲುಬಾಯಿ ಲಸಿಕೆ ಸೇರಿದಂತೆ ಪಶುಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಸ್ಠಲಗುಮ್ಮಿ ಶಿಕ್ಷಕ ಉಮೇಶ ಮಾತಾನಾಡಿ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕು, ಆಧುನಿಕ ಯುಗದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಗ್ಗೆಲ್ಲದೆ ನಡೆಯುತ್ತಿವೆ, ಪೋಷಕರು ಮಕ್ಕಳಲ್ಲಿ ಮನವರಿಕೆ ಮಾಡಬೇಕು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುರುಸ್ವಾಮಿ, ತಾಲೂಕು ವ್ಯವಸ್ಥಾಪಕ ತಾಲೂಕು ಪಂಚಾಯಿತಿ ಜಿ ತಿಪ್ಪೇಸ್ವಾಮಿ. ಪ್ರಣತಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಕಾರ್ಯದರ್ಶಿ ತಿಪ್ಪಮ್ಮ, ಸದಸ್ಯರಾದ ಎಂ.ಬಿ.ಕೆ. ವಿ ಶೈಲಮ್ಮ, ಎಲ್ ಸಿ ಆರ್ ಪಿ ಜಯಮ್ಮ,ಎಂ. ಎನ್, ಚೈತ್ರಾ ಮಲ್ಲೇಬೋರನಹಟ್ಟಿ ಪಶುಸಖಿ ಕಮಲಮ್ಮ. ಕೃಷಿಸಖಿ ಜಿ.ಎಂ. ಲಕ್ಷ್ಮಿ, ಬಿಸಿಸಖಿ ಹರ್ಷಿತಾ ಸೇರಿದಂತೆ ಅಂಗನವಾಡಿ , ಗ್ರಾಮಸ್ಥರು ಉಪಸ್ಥಿತರಿದ್ದರು.








About The Author
Discover more from JANADHWANI NEWS
Subscribe to get the latest posts sent to your email.