
ವಿವಿಸಾಗರ ಪ್ರವಾಸಿ ಮಂದಿರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ.. ಕಸವನಹಳ್ಳಿ ರಮೇಶ್. ಅಧ್ಯಕ್ಷರು ವಿವಿಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣ ಸಮಿತಿ.
ಮಧ್ಯ ಕರ್ನಾಟಕದ ಏಕೈಕ, 120 ವರ್ಷಗಳ ಹಳೆಯದಾದ ವಿವಿಸಾಗರ ಜಲಾಶಯದ ವೈಭವವನ್ನು ವೀಕ್ಷಿಸಲು ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಾರೆ. ಆದರೆ ಅವರಿಗೆ ಮೂಲ ಸೌಲಭ್ಯ ಕಲ್ಪಿಸದೆ ನಿರಾಶೆ ಮಾಡಲಾಗುತ್ತಿದೆ. ಹೊಸದುರ್ಗ ರಸ್ತೆಯ ಮೀನುಗಾರಿಕೆ ಇಲಾಖೆ ಎದುರಿನ ಪ್ರವಾಸಿ ಮಂದಿರದ ಗೇಟಿಗೆ ಯಾವಾಗಲೂ ಬೀಗ ಹಾಕಿರುತ್ತಾರೆ. ಬರುವ ಪ್ರವಾಸಿಗರು ತರುವ ಊಟ ತಿನಿಸುಗಳನ್ನು ತಿನ್ನಲು ಕುಳಿತು ವಿಶ್ರಾಂತಿ ಪಡೆಯಲು ಸಿಮೆಂಟ್ ಬೆಂಚುಗಳನ್ನು ಹಾಕಿಸಬೇಕು ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಅದನ್ನು ಬಿಟ್ಟು ಇರುವ ವಿಶಾಲವಾದ ಜಾಗಕ್ಕೆ ಕಾಂಪೌಂಡ್ ಕಟ್ಟಿ ಬೀಗ ಹಾಕಿ ಜನರನ್ನು ಬಿಸಿಲಿನಲ್ಲಿ ನಿಂತುಕೊಂಡು ಬೇಗ ಹೋಗುವ ಹಾಗೇ ಮಾಡುತ್ತಾರೆ. ಸರ್ಕಾರದ ಹಣ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇರುವ ಪ್ರವಾಸಿ ಮಂದಿರವನ್ನು ಸ್ವಚ್ಛಗೊಳಿಸಿ ಮರ-ಗಿಡಗಳನ್ನು ಬೆಳೆಸಿ ದ್ದಾರೆ. ಆದರೆ ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸದೆ ಕೆಲವೇ ಕೆಲವು ಇಲಾಖೆಯ, ರಾಜಕಾರಣಿಗಳ ಹಿಂಬಾಲಕರಿಗೆ ಅವರಿಂದ ಫೋನ್ ಮಾಡಿಸಿದವರಿಗೆ ಮಾತ್ರ ಗುಪ್ತವಾಗಿ ಕೊಡುತ್ತಾರೆ. ಈ ಹಿಂದೆ ಇದನ್ನು ಜೂಜು ಕೇಂದ್ರ ಮಾಡಿಕೊಂಡಿದ್ದರು .ಆದರೆ ಈಗ ಕಾರಿನಲ್ಲಿ ಬರುವ ಉಳ್ಳವರು ಒಳಗಡೆ ಜೂಜಾಡುತ್ತಾರೋ ಅಥವಾ ಮದ್ಯ ಮಾಂಸ ಸೇವನೆ ಮಾಡಿ ಮಜಾ ಮಾಡುತ್ತಾರೆಯೋ ಯಾರಿಗೆ ಗೊತ್ತು ?.. ಆದರೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸದೆ ಪ್ರವಾಸಿ ಕೇಂದ್ರವನ್ನು ನಿರ್ಲಕ್ಷಿಸಿರುವುದು ಖಂಡನೀಯ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಸುಧಾಕರ್ ಅವರು ಹಾಗೂ ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ನವೀನ್ ಅವರು ಹಾಗೂ ಡಿಟಿ ಶ್ರೀನಿವಾಸ್ ಅವರು ಗಮನ ಹರಿಸಿ ಪ್ರವಾಸಿ ಕೇಂದ್ರವನ್ನು ಇನ್ನು ಹೆಚ್ಚಿನ ಆಕರ್ಷಣೆ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಕಸವನಹಳ್ಳಿ ಸಹ ಬೇಸರ ವ್ಯಕ್ತಪಡಿಸಿದರು ಸ್ಥಳೀಯ ಅಂಗಡಿ ಮುಂಗಟ್ಟುಗಳು, ಹೋಟಲ್ಗಳನ್ನು ಇಟ್ಟುಕೊಂಡಿರುವವರು ಸಹ ಈ ಬಗ್ಗೆ ನೋವನ್ನು ತೋಡಿಕೊಂಡರು.
About The Author
Discover more from JANADHWANI NEWS
Subscribe to get the latest posts sent to your email.