
.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಏ.22. ನಾಯಕನಹಟ್ಟಿ ಹೋಬಳಿಯ: ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಎಂ. ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.



ಒಟ್ಟು 18 ಸದಸ್ಯರ ಬಲವುಳ್ಳ ಈ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಿತ್ತು. ಹಿಂದಿನ ಉಪಾಧ್ಯಕ್ಷ ಎಂ .ತಿಪ್ಪೇಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ್ ಮತ್ತು ಸೋಮಶೇಖರ್ ಇಬ್ಬರು ನಾಮ ಪತ್ರ ಸಲ್ಲಿಸಿದ ಕಾರಣದಿಂದ ಚುನಾವಣೆ ಪ್ರಕ್ರಿಯೆಯಲ್ಲಿ ವಿಜಯಕುಮಾರ್ 7 ಮತಗಳನ್ನು ಪಡೆದು ಪ್ರಭಾವಗೊಂಡರು ಎಂ. ಸೋಮಶೇಖರ್ ಇವರನ್ನು ಅವಿರೋಧವಾಗಿ ನೂತನ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಎಂದು ತಾಲೂಕು ಪಂಚಾಯಿತಿ ಇಒ ವೈ. ರವಿಕುಮಾರ್, ತಿಳಿಸಿದರು.
ಇದೆ ವೇಳೆ ನೂತನ ಉಪಾಧ್ಯಕ್ಷ ಎಂ. ಸೋಮಶೇಖರ್ ಮಾತನಾಡಿದರು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸಹಕಾರ ನೀಡಿ ಮತ ಹಾಕಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಸರ್ವ ಸದಸ್ಯರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯುವ ಸೌಲತ್ತನ್ನು ನೀಡಲಾಗುವುದು ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ 17 ಜನ ಸದಸ್ಯರು ಹಾಜ- ರಿದ್ದರು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಇ.ಒ. ವೈ ರವಿಕುಮಾರ್, ಎಂ ತಿಪ್ಪೇಸ್ವಾಮಿ ವ್ಯವಸ್ಥಾಪಕರು ತಾಲೂಕು ಪಂಚಾಯಿತಿ ಚಳ್ಳಕೆರೆ ,ವೈ.ಬಿ. ಬೋಸಯ್ಯ ವಿಷಯ ನಿರ್ವಾಹಕರು ತಾಲೂಕು ಪಂಚಾಯಿತಿ ಚಳ್ಳಕೆರೆ .
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್, ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ ತಿಪ್ಪೇಸ್ವಾಮಿ, ಜಿ. ವಿ. ಕರಿಯಣ್ಣ, ಬಿ.ಎಸ್. ಪ್ರಕಾಶ್, ಪಿ.ಎಂ. ಮಹಾದೇವಣ್ಣ, ದಳವಾಯಿ ಪಾಲಜ್ಜ, ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ, ಶೈಲಾ ಮಂಜಣ್ಣ, ಸದಸ್ಯರಾದ ಬಂಡೆ ಕಪಿಲೆ ಓಬಣ್ಣ, ಎಂ. ತಿಪ್ಪೇಸ್ವಾಮಿ, ಟಿ ಅಶೋಕ್, ಡಿ. ರೇವಣ್ಣ, ಎಸ್. ಅನಿತಾ ರವಿಕುಮಾರ್, ಜಿ.ಎಸ್. ವಿಜಯಕುಮಾರ್, ಕೆ ಎಸ್ ಮಂಜಣ್ಣ, ಕೆ. ತಿಪ್ಪೇಸ್ವಾಮಿ, ಶಾಂತಮ್ಮ, ಪ್ರೇಮಲತಾ ಶಂಕರ್ ಮೂರ್ತಿ, ಪಾಲಮ್ಮ ಜಿ. ಬೋರಯ್ಯ, ಬಸಕ್ಕ ತಿಪ್ಪೇಸ್ವಾಮಿ, ಲಕ್ಷ್ಮಿ ಮಹಾದೇವಣ್ಣ, ಮಲ್ಲಮ್ಮ, ಗೀತಮ್ಮ ಸಿ ಕುಮಾರ್, ಹಾಗೂ ಗಿಡ್ಡಾಪುರ ರುದ್ರಮುನಿ, ಮಾಳಜ್ಜಯ್ಯ, ರವಿಕುಮಾರ್, ರಾಮಸಾಗರ ಮಂಜಣ್ಣ,ಗಜ್ಜುಗಾನಹಳ್ಳಿ ಜಿ.ಎಸ್. ತಿಪ್ಪೇಸ್ವಾಮಿ, ಪಿ.ಪಿ. ಮಹಾಂತೇಶ್, ಸಿ.ಎಂ. ಪಾಲಯ್ಯ, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ನಾಗರಾಜ್, ಗಣಕಯಂತ್ರ ನಿರ್ವಾಹಕ ಸಂತೋಷ್, ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ಕಾಯಕ ಮಿತ್ರ ಉಮಾ,
ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.