
‘
.ನಾಯಕನಹಟ್ಟಿ: ಗ್ರಾಮದ ಪ್ರತಿಯೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ ಆದರ್ಶಗಳನ್ನ ರೂಡಿಸಿಕೊಳ್ಳಬೇಕು ಎಂದು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.




ಸೋಮವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ವಿಶ್ವ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘ (ರಿ) ಶಿವಶರಣ ಬಸವಮೂರ್ತಿ ಮಾದಾರ ಚನ್ನಯ್ಯ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ : ಡಾ. ಬಿ.ಆರ್.ಅಂಬೇಡ್ಕರ್ ರವರ 134 ನೇ ಹಾಗೂ ಬಾಬು ಜಗಜೀವನ್ ರಾಮ್ 118ನೇ ಜನ್ಮದಿನಾಚರಣೆ ಸಮಾರಂಭ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು
ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನವನ್ನು ಬರೆದು ಕೊಟ್ಟ ಮಹಾನ್ ಮೇಧಾವಿ.ನಮ್ಮ ದೇಶದಲ್ಲಿ ಬರಿ ಎಸ್ಸಿ-ಎಸ್ಪಿ ಜನರಿಗೆ ಮಾತ್ರ ಮೀಸಲಾತಿ ಕೊಟ್ಟಿಲ್ಲ.ದೇಶದ ಎಲ್ಲಾ ಆರ್ಥಿಕ ವಾಗಿ ಹಿಂದುಳಿದ ಸಮಾಜಗಳಿಗೆ ಮೀಸಲಾತಿಯನ್ನು ಕೊಟ್ಟದ್ದು ಬಾಬಾ ಸಾಹೇಬರು, ಭಾರತದ ಇಂದಿನ ಯುವಕರು ಬಾಬಾಸಾಹೇಬರ ತತ್ವ, ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡಾಗ ಮಾತ್ರ, ಅವರ ಆಶಯಗಳಿಗೆ ಮಹತ್ವ ಸಿಗುತ್ತದೆ ಎಂದು ಹೇಳಿದರು.
ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಮಾತನಾಡಿದರು ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವಮಾನವರು ಇಂತಹ ಮಹಾನ್ ನಾಯಕರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾವ್ ರವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು ಡಾ ಬಿ.ಆರ್. ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದು ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನೀಡಿ ಜಗತ್ತಿಗೆ ಜ್ಞಾನದ ಸಂಕೇತವಾಗಿದ್ದಾರೆ ಇಂತಹ ಮಹಾತ್ಮರನ್ನು ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಸೂರನಹಳ್ಳಿ ಶ್ರೀನಿವಾಸ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಪಟೇಲ್ ಬಿ.ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜಮ್ಮ ದುರುಗೇಶ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ರಾಧಮ್ಮ ಎ.ಪಿ. ರೇವಣ್ಣ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್ ತಿಪ್ಪೇಸ್ವಾಮಿ ಜೆಸಿಬಿ, ಕೆ.ಟಿ. ಮಲ್ಲಿಕಾರ್ಜುನ್, ದಾನಸಾಲಮ್ಮ, ಪಟ್ಟಣ ಪಂಚಾಯತಿ ಸದಸ್ಯ ಎಂ ಟಿ ಮಂಜುನಾಥ್, ವಕೀಲ ಹಿರೇಹಳ್ಳಿ ಮಲ್ಲೇಶ್, ಕುದಾಪುರ ತಿಪ್ಪೇಸ್ವಾಮಿ, ಆರ್ ಬಸವರಾಜ್, ಮಧು, ಊರಿನ ಮುಖಂಡರಾದ ಮೀಸೆ ಓಬಯ್ಯ, ಗೋಚಿಗಾರ್ ಪಾಲಯ್ಯ, ವಕೀಲ ವೈ, ಮಲ್ಲೇಶ್, ಬೂಟ್ ತಿಪ್ಪೇಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ ಎಸ್ ಸಿದ್ದಲಿಂಗಪ್ಪ, ಶಿಕ್ಷಕ ಎನ್ ಮಹಾಂತೇಶ್, ಅಬ್ಬೇನಹಳ್ಳಿ ಬಿಲ್ ಕಲೆಕ್ಟರ್ ಎಸ್. ಶಿವತಿಪ್ಪೇಸ್ವಾಮಿ, ಟಿ. ಬೋರಯ್ಯ, ಹೊಸ ಕಪಿಲೆ ಬೋರಯ್ಯ, ಹಟ್ಟಿ ಯಜಮಾನರಾದ ಎ.ಕೆ. ಭೀಮಪ್ಪ, ದುರುಗೇಶ್, ಸಣ್ಣಪ್ಪ, ನರಸಿಂಹ, ಸೇರಿದಂತೆ
ಗುಂತಕೋಲಮ್ಮನಹಳ್ಳಿ ವಿಶ್ವ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸಮಸ್ತ ಗುಂತಕೋಲಮ್ಮನಹಳ್ಳಿ ಊರಿನ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.