ನಾಯಕನಹಟ್ಟಿ: ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಮಾರ್ಚ್ 23 ರಿಂದ 2 ದಿನಗಳ ಕಾಲ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಕಳಸಾರೋಹಣ ಹಾಗೂ ಗುಗ್ಗರಿ ಹಬ್ಬವನ್ನು ಆಚರಿಸಲಾಗುವುದು ಎಂದು ಶ್ರೀ ಗಾದ್ರಿಪಾಲ ನಾಯಕ ದೇವರ ಗುಡಿ ಕಟ್ಟಿನವರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು , ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ
ಮ್ಯಾಸನಾಯಕ ಬುಡಕಟ್ಟು ಗಟ್ಟಿಮುತ್ತಿನಾಯಕರ ಮೂಲಪುರುಷ ಸಾಂಸ್ಕೃತಿಕ ವೀರ ಹಾಗೂ ಮನೆ ದೇವರಾದ ಶ್ರೀ ಗಾದ್ರಿಮಲೆ ಹೆಬ್ಬುಲಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ನೂತನ ದೇವಸ್ಥಾನದ ಲೋಕಾರ್ಪಣೆ ಕಳಸಾರೋಹಣ ಹಾಗೂ ಗುಗ್ಗರಿ ಹಬ್ಬ ದಿನಾಂಕ 23-03-2025ರಿಂದ 25-03-2025ವರಗೆ ನಡೆಯಲಿದ್ದು, ಈ ಕಾರ್ಯಕ್ರಮವು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ಎತ್ತುಗಳ ಸನ್ನಿಧಾನದಲ್ಲಿ ನಡೆಯಲಿದೆ.
ನಮ್ಮ ಮ್ಯಾಸಮಂಡಲದ ಸಮಸ್ತ ಸದ್ಭಕ್ತರು ಹಾಗೂ ಬಂಧು ಮಿತ್ರರು ಭಾಗವಹಿಸಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಕೃಪಾಆಶೀರ್ವಾಗಳಿಗೆ ಪಾತ್ರರಾಗಲು ಕೋರಿರುತ್ತೇವೆ ಶ್ರೀ ಗಾದ್ರಿಪಾಲ ನಾಯಕ ದೇವರ ಗುಡಿ ಕಟ್ಟಿನ ಗುರು- ಹಿರಿಯರು ಅಣ್ಣತಮ್ಮಂದಿರು ಸಮಸ್ತ ಭಕ್ತಾದಿಗಳು, ಸರ್ಕಲ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ಕುದಾಪುರ ಶುಭ ಕೋರಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.