February 22, 2026
IMG-20260222-WA0224.jpg

ನಾಯಕನಹಟ್ಟಿ: ನಾಯಕನಹಟ್ಟಿ ಯೋಜನಾ ಕಚೇರಿಯ ಉಳ್ಳಾರ್ತಿ ವಲಯದ ದುರ್ಗಾವರ ಕಾರ್ಯಕ್ಷೇತ್ರದಲ್ಲಿ ಭಕ್ತಿಭಾವದಿಂದ ಸಾಮೂಹಿಕ ಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಪ್ರಗತಿಬಂಧುಗಳ ಉಪಸ್ಥಿತಿಯಿಂದ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತ್ತು.
ಸಭೆಯ ಅಧ್ಯಕ್ಷತೆಯನ್ನು ತಿಪ್ಪೇಸ್ವಾಮಿ ವಹಿಸಿಕೊಂಡರೆ, ಗೌರವಾಧ್ಯಕ್ಷತೆಯನ್ನು ಗಿಡ್ಡ ರಂಗಪ್ಪ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಜಗಳೂರು ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಸರ್, ಚಳ್ಳಕೆರೆಯ ನಾಗರಾಜ್ ಕೆ.ಎಂ (ವಕೀಲರು), ಸಿದ್ದಾಪುರದ ಸಮಾಜಸೇವಕ ಯತೀಶ್ ಎಂ., ಚಳ್ಳಕೆರೆಯ ಶ್ರೀ ಶಾರದಾಶ್ರಮದ ಸದ್ಭಕ್ತರು ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಜಯಂತ್ ಸರ್ ಭಾಗವಹಿಸಿದರು.
ಇದೇ ವೇಳೆ ಸಮಿತಿಯ ಸದಸ್ಯರಾದ ವಿಶಾಲಾಕ್ಷಮ್ಮ, ಮಂಜುಳಾ, ಬೈರವಿ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಗೋವಿಂದಪ್ಪ ಹಾಗೂ ವಲಯ ಮೇಲ್ವಿಚಾರಕರಾದ ಗಿರಿಜಾ ಉಪಸ್ಥಿತರಿದ್ದರು. ಆರು ಕಾರ್ಯಕ್ಷೇತ್ರಗಳ ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘ ಹಾಗೂ ಪ್ರಗತಿಬಂಧು ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಸರ್ ಅವರು ಸಂಸ್ಥೆಯ ಸ್ಥಾಪನೆಯ ಹಿನ್ನೆಲೆ, ಬೆಳವಣಿಗೆ ಹಾದಿ ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಯತೀಶ್ ಅವರು ಧಾರ್ಮಿಕ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ನಾಗರಾಜ್ ಕೆ.ಎಂ ಅವರು ಸ್ವಸಹಾಯ ಸಂಘಗಳ ಬೆಳವಣಿಗೆ, ಸದಸ್ಯರ ಹೊಂದಾಣಿಕೆ ಮತ್ತು ಗ್ರಾಮೀಣ ಜನರ ಜೀವನಶೈಲಿಯ ಕುರಿತು ಮಾತನಾಡಿ, ಸಂಘಟಿತ ಶಕ್ತಿ ಸಮಾಜದ ಅಭಿವೃದ್ಧಿಗೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಪೂಜೆ, ಆಶೀರ್ವಚನ ಹಾಗೂ ಉಪನ್ಯಾಸಗಳೊಂದಿಗೆ ಭಕ್ತಿಪೂರ್ಣವಾಗಿ ನೆರವೇರಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading