February 22, 2026
IMG-20260222-WA0021.jpg

ಚಳ್ಳಕೆರೆ: ಶ್ರೀ ಬೋರದೇವರ ಸ್ವಾಮಿಯ ಜಾತ್ರೆ ಸಂಭ್ರಮ
Chitradurga ಜಿಲ್ಲೆಯ Challakere ತಾಲೂಕಿನ ಚಿಕ್ಕ ಉಳ್ಳಾರ್ತಿ ಕಾವಲಿನಲ್ಲಿ ನೆಲೆಸಿರುವ ಶ್ರೀ ಬೋರದೇವರ ಸನ್ನಿಧಿಯಲ್ಲಿ ಜಾತ್ರೆ ಸಂಭ್ರಮ ಭಕ್ತಿಭಾವದಿಂದ ನಡೆಯಲಿದೆ.

ಮ್ಯಾಸ ನಾಯಕ ಬುಡಕಟ್ಟು ಜನಾಂಗವು ರಾಜ್ಯದಲ್ಲಿ ವಿಶಿಷ್ಟ ಸಂಸ್ಕೃತಿ–ಸಂಪ್ರದಾಯಗಳನ್ನು ಹೊಂದಿರುವ ಜನಾಂಗವಾಗಿದ್ದು, ತಮ್ಮ ದೈವಿಕ ಆಚರಣೆಗಳನ್ನು ಪಾವಿತ್ರ್ಯದಿಂದ ಕಾಪಾಡಿಕೊಂಡು ಇಂದಿಗೂ ಹಬ್ಬ–ಹರಿದಿನಗಳನ್ನು ಆಚರಿಸುತ್ತಿದ್ದಾರೆ. ಚಳ್ಳಕೆರೆಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಿಕ್ಕ ಉಳ್ಳಾರ್ತಿ ಕಾವಲಿನ ಶ್ರೀ ಬೋರದೇವರ ಸನ್ನಿಧಿಗೆ ಪ್ರತಿ ಭಾನುವಾರ ಭಕ್ತರು ಭೇಟಿ ನೀಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಮನೋಭಿಲಾಷೆಗಳು ಈಡೇರಿದ ಅನುಭವಗಳನ್ನು ಭಕ್ತರು ಹಂಚಿಕೊಳ್ಳುತ್ತಾರೆ.
ಓಬಯ್ಯನಹಟ್ಟಿ ಬುಡಕಟ್ಟುಗೆ ಸೇರಿದ ಅಣ್ಣ–ತಮ್ಮಂದಿರು ಐದು ವರ್ಷಗಳಿಗೊಮ್ಮೆ ಎರಡು ದಿನಗಳ ಕಾಲ ಇಲ್ಲಿ ತಂಗಿ, ಬುಡಕಟ್ಟು ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗಳನ್ನು ನೆರವೇರಿಸುತ್ತಾರೆ.
ಜಾತ್ರೆ ಕಾರ್ಯಕ್ರಮಗಳ ವಿವರ:
ಶನಿವಾರ ಸಂಜೆ 5:30 – ಶ್ರೀ ಬೋರದೇವರ ಸೇವಾಸಮಿತಿ ವತಿಯಿಂದ ಅನ್ನಸಂತರ್ಪಣೆ
ಭಾನುವಾರ ಬೆಳಗ್ಗೆ 4:00 – ಬೋರದೇವರಿಗೆ ವಿಶೇಷ ಪೂಜೆ
ನಂತರ – ವಾಸು ಕಾರ್ಯಕ್ರಮ
ಬೆಳಗ್ಗೆ 9:00 – ಜವಳ ಕಾರ್ಯಕ್ರಮ
ಮಧ್ಯಾಹ್ನ 2:00 – “ಮುಕ್ತಿ ಭಾವುಟ” ಹರಾಜು
ಮಧ್ಯಾಹ್ನ 3:00 – ದೇವರ ಎತ್ತುಗಳನ್ನು ಓಡಿಸುವುದು
ಮಧ್ಯಾಹ್ನ 3:30 – ಸಮಾರೋಪ ಸಮಾರಂಭ ಹಾಗೂ ಪ್ರೋತ್ಸಾಹಕರಿಗೆ ಸನ್ಮಾನ
ರಾತ್ರಿ 9:00 – ಚಿಕ್ಕ ಉಳ್ಳಾರ್ತಿ ಗೌಡರಹಟ್ಟಿ ಕಲಾವಿದರಿಂದ “ಒಲವಿನ ಪ್ರೇಮ ಮಂದಿರ” ಸಾಮಾಜಿಕ ನಾಟಕ ಪ್ರದರ್ಶನ
ಸೋಮವಾರ:
ಬೆಳಗ್ಗೆ ಫಲ–ಪುಷ್ಟ–ಪ್ರಸಾದ ಸ್ವೀಕರಿಸಿದ ನಂತರ ಭಕ್ತರು ತಮ್ಮ ತಮ್ಮ ಊರುಗಳಿಗೆ ಮರಳುವರು.
ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಸಂಗಮವಾಗಿರುವ ಶ್ರೀ ಬೋರದೇವರ ಜಾತ್ರೆ ಪ್ರತಿವರ್ಷವೂ ಭಕ್ತರ ಮನಸೆಳೆಯುವ ಪವಿತ್ರ ಸಮಾರಂಭವಾಗಿ ಕಂಗೊಳಿಸುತ್ತಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading