December 14, 2025
IMG-20250222-WA0144.jpg

ಸತ್ಯ ಧರ್ಮ ಮತ್ತು ನಿಸ್ವಾರ್ಥತೆಯ ಬದುಕು ಚಿತ್ರದುರ್ಗದ ಬುಡಕಟ್ಟು ಸಮುದಾಯದವರದ್ದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ಗಜ್ಜಗಾನಹಳ್ಳಿ ಗ್ರಾಮದ ನಲಜ ಓಬಳಸ್ವಾಮಿ ಗುಗ್ರಿ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿ ಇಲ್ಲಿಯ ಭಾಗದ ಜನರ ನಿಸ್ವಾರ್ಥತೆಯ ಬದುಕು ಸಮಾಜಕ್ಕೆ ಮಾದರಿಯಾದಂತದ್ದು ಧರ್ಮ ಉಳಿಯಬೇಕು ಸತ್ಯ ಬದುಕಬೇಕು ನಿಸ್ವಾರ್ಥದ ಬದುಕು ಸಮಾಜದಾಗಬೇಕು ಎನ್ನುವ ಮನಸ್ಥಿತಿ ಇಲ್ಲಿಯ ಬುಡಕಟ್ಟು ಸಮುದಾಯದವರದ್ದು ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಬೆಳೆದರೂ ಕೂಡ ಈ ಜನಗಳ ಧಾರ್ಮಿಕ ಭಾವನೆ ಕಿಂಚಿತ್ತು ಕಡಿಮೆ ಆಗಿಲ್ಲ ಇದು ನಮ್ಮ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾಯಕವಾಗಿದ್ದು ನಿಜಕ್ಕೂ ಅನುಕರಣೆಯ ಇಂತಹ ಕಾರ್ಯಗಳು ನಮ್ಮ ಹಿಂದೂ ರಾಷ್ಟ್ರದಲ್ಲಿ ನಿರಂತರವಾಗಿ ಮುಂದುವರಿಯಬೇಕು ಅದರಿಂದ ಸಮಾಜದಲ್ಲಿ ಸಹ ಬಾಳ್ವೆ ಸಾಮರಸ್ಯ ಮತ್ತು ಶಾಂತಿ ನೆಮ್ಮದಿ ಮನ ಮತ್ತು ಮನೆಗಳಲ್ಲಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಟೇಲ್ ಜಿ ತಿಪ್ಪೇಸ್ವಾಮಿ ಮಾತನಾಡಿ ಈ ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕೃತಿಯ ಅನಾವರಣವನ್ನು ಕಳೆದ ಐವತ್ತು ವರ್ಷದಿಂದ ನೋಡುತ್ತಿದ್ದೇನೆ ನಿರಂತರವಾಗಿ ಇವರಲ್ಲಿ ಭಕ್ತಿ ಮನೆ ಮಾಡಿದೆ ಹೃದಯದಲ್ಲಿ ಧಾರ್ಮಿಕ ಭಕ್ತಿ ಇದ್ದರೆ ಬಡತನ ಅನಕ್ಷರತೆ ಮನಸ್ಸಿನಿಂದ ದೂರವಾಗುತ್ತವೆ ಎನ್ನುವುದು ಈ ಜನಗಳ ಆಲೋಚನೆ ಇದರಿಂದಲೇ ಈ ಭಾಗದಲ್ಲಿ ಎಲ್ಲಾ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಸಹಬಾಳ್ವೆ ನೆಲೆಸಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡು ಗುಡಿ ತುಂಬುವ ಕಾರ್ಯದಲ್ಲಿ ಭಾಗವಹಿಸಲಾಯಿತು ಗ್ರಾಮಸ್ಥರಾದಂತಹ ಬೋರಣ್ಣ ಮಹಾಂತೇಶ್ ಹೋಳಿಗೆ ಓ ಭಯ್ಯ ಜೀವೋಕುಮಾರ ಮುಂತಾದವರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading