ಚಳ್ಳಕೆರೆ ಫೆ.22
ಹಾಡು ಹಗಲಲ್ಲೇ ಮನೆಗೆ ನುಗ್ಗಿ ಮಹಿಳೆಯ ಮೇಲಿದ್ದ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ನಗರದ ವಾಸವಿ ಕಾಲೋನಿಯ ವೆಂಕಟಚಲಮ್ ಎಂಬುವರ ಮನೆಯಲ್ಲಿ ಪತ್ನಿ ಗೀತಲಕ್ಷ್ಮಿ ಒಂಟಿ ಮಹಿಳೆಯಿದ್ದನ್ನು ಗಮನಿಸಿದ ಮೂರು ಜನ ಕದೀಮ ಕಳ್ಳರು ಬೆಳಗ್ಗೆ11-30 ರಿಂದ 12 ಗಂಟೆ ಸೂಮಾರಿನಲ್ಲಿ ಮನೆಗೆ ನುಗ್ಗಿನ್ನ ಗೀತಲಕ್ಷ್ಮಿಗೆ ಪ್ರಾಣ ಭಯ ಹಾಗೂ ಎದುರಿಸಿ 4 ಚಿನ್ನದ ಬಳೆ ಹಾಗೂ ಒಂದು ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇತ್ತೀಚೆಗೆ ದರೋಡೆ.ಕಳ್ಳತನಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ ನಗರದ ಸಾರ್ವಜನಿಕಸ್ಥಳದಲ್ಲಿ ಸಿ.ಸಿ.ಕ್ಯಾಮರ ಅಳವಡಿಸದೇ ಇರುವುದು ದರೋಡೆಕೋರರಿಗೆ ವರದಾನವಾಗಿದ್ದು ಇದರಿಂದ ನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು ಕೂಡಲೇ ನಗರದಲ್ಲಿ ಸಿ.ಸಿ.ಕ್ಯಾಮರ ಅಳವಡಿಸುವ ಜತೆಗೆ ಪೋಲಿಸ್ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರ್. ಡಿವೈಎಸ್ಪಿ ರಾಜಣ್ಣ.ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಪತ್ತೆಹಚ್ಚಲು ಪೋಲಿಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.



About The Author
Discover more from JANADHWANI NEWS
Subscribe to get the latest posts sent to your email.