December 14, 2025
IMG-20250222-WA0196.jpg

ಚಳ್ಳಕೆರೆ:ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯವನ್ನು ಹೊಂದಿದ್ದಾನೆ.ನಮಗೆ ಯಾವ ರೀತಿಯಲ್ಲಿ ಬೇಕಾದರೂ ಬದುಕು ರೂಪಿಸಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಎಂದು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ

.ಹೇಮ ಎಚ್ ಆರ್  ತಿಳಿಸಿದರು.

ನಗರದ ಹೆಗ್ಗರೆತಾಯಮ್ಮ ತಿಪ್ಪೇಸ್ವಾಮಿ ಬಾಲಕಿಯರ  ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ. ತಾಲೂಕು ವಕೀಲರ ಸಂಘ ಹಾಗೂ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯ ರಾಷ್ಟ್ರೀಯ ಸ್ವಯಂ  ಇವರ ವತಿಯಿಂದ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ . ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾಲೇಜು ಅಭ್ಯಾಸಕ್ಕೆ ಕಾಲಿಡುತ್ತಿದ್ದು, ಅವರಿಗೆ ನಮ್ಮ ದೇಶದ ಕಾನೂನಿನ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅವಶ್ಯಕತೆ

ಇದೆ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ ಇಂತಹ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು .

ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ ಮಾತನಾಡಿ, ಕಾನೂನು ಹೆಚ್ಚು ಬಳಕೆಯಿಂದ ಶಾಂತಿ ನೆಲೆಸುತ್ತದೆ ಎಂಬುವುದರಲ್ಲಿ ಅನುಮಾನವೇ ಇಲ್ಲ. ಯಾವುದೇ ರೀತಿಯ ತೊಡಕು ಬಂದರು ಕಾನೂನಿನಲ್ಲಿ ಪರಿಹಾರವಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲಿಯಬೇಕಾಗುತ್ತದೆ. ಸಂಸ್ಕಾರ ಅಂದರೆ ಒಳ್ಳೆ ಗುಣ ಒಳ್ಳೆ ನಡತೆ , ಮುಂದಿನ ಜೀವನ ಕ್ಕೆ ದಾರಿಯಾಗುತ್ತದೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು

ವಕೀಲ ಸಂಘದ ತಾಲೂಕು ಅಧ್ಯಕ್ಷ  ಎಂ.ನಾಗರಾಜು ಮಾತನಾಡಿ, ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರಲ್ಲೂ ಕಾನೂನು ಪರಿಪಾಲನೆ ಬಗ್ಗೆ ಜಾಗೃತಿಮೂಡಿಸಲಾಗುತ್ತಿದೆ. ಯಾವುದೇ ಸಮಸ್ಯೆ ಉಂಟಾದರೂ ಅದನ್ನು ನಿವಾರಿಸುವ ಶಕ್ತಿ ಕಾನೂನಿಗೆ ಮಾತ್ರ ಇದೆ. ಪ್ರೀತಿ, ವಿಶ್ವಾಸ ಪರಸ್ಪರ ಗೌರವದಿಂದಲೂ ಸಹ ನಾವು ಸಮಸ್ಯೆ ಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾದ ಎಲ್ಲಾಪೂರಕ ಅಂಶಗಳು ಕಾನೂನಿನಲ್ಲಿವೆ. ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮೂಲಕ ನಾವೆಲ್ಲರೂ ಕಾನೂನು ಪರಿಪಾಲನೆ ಮೂಲಕ ಸಮಾಜದಲ್ಲಿ ಶಾಂತಿ ಭದ್ರವಾಗಿ ನೆಲೆಯೂರಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎ.ಈರಣ್ಣ, ಶಿಕ್ಷಕರಾದ ಬಿ.ರಾಜಕುಮಾರ್, ರಾಷ್ಟ್ರೀಯ ಸ್ವಯಂಸೇವಾ ಶಿಕ್ಷಕಿಯಾದ ಗಂಗೂಬಾಯಿ ಹಿರೇಮಠ, ಪ್ರಾಣೇಶ, ಪೂರ್ಣಿಮಾ, ಉಮಾ ವಕೀಲರ ಸಂಘದ ಕಾರ್ಯದರ್ಶಿ ಸಿದ್ದರಾಜು, ಹಾಗೂ ದೊರೆ ನಾಗರಾಜ್ ಸೇರಿದಂತೆ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾ
ವಿದ್ಯಾರ್ಥಿಗಳು ಕಾನೂನಿನ ಅರಿವು ತಿಳಿದುಕೊಳ್ಳುವುದು ಅತ್ಯಗತ್ಯ: ನ್ಯಾ. ಎಚ್ಆರ್ ಹೇಮ

ಉದಯ ಕಾಲ ನ್ಯೂಸ್
ಚಳ್ಳಕೆರೆ:ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯವನ್ನು ಹೊಂದಿದ್ದಾನೆ.ನಮಗೆ ಯಾವ ರೀತಿಯಲ್ಲಿ ಬೇಕಾದರೂ ಬದುಕು ರೂಪಿಸಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಎಂದು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ
.ಹೇಮ ಎಚ್ ಆರ್ ತಿಳಿಸಿದರು.
ನಗರದ ಹೆಗ್ಗರೆತಾಯಮ್ಮ ತಿಪ್ಪೇಸ್ವಾಮಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ. ತಾಲೂಕು ವಕೀಲರ ಸಂಘ ಹಾಗೂ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯ ರಾಷ್ಟ್ರೀಯ ಸ್ವಯಂ ಇವರ ವತಿಯಿಂದ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ . ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾಲೇಜು ಅಭ್ಯಾಸಕ್ಕೆ ಕಾಲಿಡುತ್ತಿದ್ದು, ಅವರಿಗೆ ನಮ್ಮ ದೇಶದ ಕಾನೂನಿನ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅವಶ್ಯಕತೆ
ಇದೆ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ ಇಂತಹ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು .
ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ ಮಾತನಾಡಿ, ಕಾನೂನು ಹೆಚ್ಚು ಬಳಕೆಯಿಂದ ಶಾಂತಿ ನೆಲೆಸುತ್ತದೆ ಎಂಬುವುದರಲ್ಲಿ ಅನುಮಾನವೇ ಇಲ್ಲ. ಯಾವುದೇ ರೀತಿಯ ತೊಡಕು ಬಂದರು ಕಾನೂನಿನಲ್ಲಿ ಪರಿಹಾರವಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲಿಯಬೇಕಾಗುತ್ತದೆ. ಸಂಸ್ಕಾರ ಅಂದರೆ ಒಳ್ಳೆ ಗುಣ ಒಳ್ಳೆ ನಡತೆ , ಮುಂದಿನ ಜೀವನ ಕ್ಕೆ ದಾರಿಯಾಗುತ್ತದೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು
ವಕೀಲ ಸಂಘದ ತಾಲೂಕು ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರಲ್ಲೂ ಕಾನೂನು ಪರಿಪಾಲನೆ ಬಗ್ಗೆ ಜಾಗೃತಿಮೂಡಿಸಲಾಗುತ್ತಿದೆ. ಯಾವುದೇ ಸಮಸ್ಯೆ ಉಂಟಾದರೂ ಅದನ್ನು ನಿವಾರಿಸುವ ಶಕ್ತಿ ಕಾನೂನಿಗೆ ಮಾತ್ರ ಇದೆ. ಪ್ರೀತಿ, ವಿಶ್ವಾಸ ಪರಸ್ಪರ ಗೌರವದಿಂದಲೂ ಸಹ ನಾವು ಸಮಸ್ಯೆ ಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾದ ಎಲ್ಲಾಪೂರಕ ಅಂಶಗಳು ಕಾನೂನಿನಲ್ಲಿವೆ. ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮೂಲಕ ನಾವೆಲ್ಲರೂ ಕಾನೂನು ಪರಿಪಾಲನೆ ಮೂಲಕ ಸಮಾಜದಲ್ಲಿ ಶಾಂತಿ ಭದ್ರವಾಗಿ ನೆಲೆಯೂರಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎ.ಈರಣ್ಣ, ಶಿಕ್ಷಕರಾದ ಬಿ.ರಾಜಕುಮಾರ್, ರಾಷ್ಟ್ರೀಯ ಸ್ವಯಂಸೇವಾ ಶಿಕ್ಷಕಿಯಾದ ಗಂಗೂಬಾಯಿ ಹಿರೇಮಠ, ಪ್ರಾಣೇಶ, ಪೂರ್ಣಿಮಾ, ಉಮಾ ವಕೀಲರ ಸಂಘದ ಕಾರ್ಯದರ್ಶಿ ಸಿದ್ದರಾಜು, ಹಾಗೂ ದೊರೆ ನಾಗರಾಜ್ ಸೇರಿದಂತೆ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಇದ್ದರು.

About The Author

Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading