ಚಳ್ಳಕೆರೆ :ಕಾಂಗ್ರೆಸ್ ನೇತೃತ್ವದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ರಾಜ್ಯ ಸರಕಾರ ಬಡಜನರ ಹಿತ ದೃಷ್ಟಿಯಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಯಾವುದೇ ಫಲಾನುಭವಿಗಳು ಈ ಯೋಜನೆ ಯಿಂದ ವಂಚಿತರಾಗಬಾರದು ಎಂದು ಗ್ಯಾರಂಟಿ ಯೋಜನೆಯ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಅಭಿಪ್ರಾಯ ಪಟ್ಟರು.
ಅವರು ನಗರದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಯಿಂದ ಯಾರು ಕೂಡ ಹೊರಗುಳಿಯಬಾರದು ಅನಿವಾರ್ಯ ಕಾರಣಗಳಿಂದ ದಾಖಲಾತಿಗಳು ಏರುಪೇರು ಗಳಿಂದ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳಿಗೆ ಸೂಕ್ತ ದಾಖಲಾತಿ ಪಡೆದು ಯೋಜನೆ ಸಿಗುವಂತೆ ಮಾಡಬೇಕು , ಗೃಹಲಕ್ಷ್ಮಿ ಯೋಜನೆ ಹಣ ಎಷ್ಟು ಫಲಾನುಭವಿಗಳಿಗೆ ಬಂದಿದೆ ಎಷ್ಟು ಜನರು ಹೊರಗಿದ್ದಾರೆ, ಎಂಬ ಮಾಹಿತಿ ಸಭೆಗೆ ನೀಡಬೇಕು,
ಇನ್ನು ಶಕ್ತಿ ಯೋಜನೆ ಅಡಿ ತಾಲೂಕಿನಲ್ಲಿ ಪ್ರಯಾಣ ಬೆಳೆಸಿದ ಫಲಾನುಭವಿಗಳ ಸಂಖ್ಯೆ ಸಂಬಂಧಿಸಿದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಸಭೆ ಗಮನಕ್ಕೆ ನೀಡಬೇಕು ಎಂದಾಗ ಕೆಎಸ್ಆರ್ಟಿಸಿ ವ್ಯವಸ್ಥಾಪಕರಾದ ಪ್ರಭು ಮಾತನಾಡಿ, ಶಕ್ತಿ ಯೋಜನೆ ಪ್ರಾರಂಭದ ದಿನದಿಂದ ಫೆಬ್ರವರಿ ಇಲ್ಲಿಯ ತನಕ ಸುಮಾರು 72 ಲಕ್ಷದ 92 ಸಾ. ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ, ಇದರಿಂದ ಶಕ್ತಿ ಯೋಜನೆ,ಮಹಿಳೆಯರಿಗೆ ವರದಾನವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ದಾರರು ಕಂಪ್ಯೂಟರ್ ತಂತ್ರಾಂಶದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಬಿಪಿಎಲ್ ಕುಟುಂಬದವರಿಗೆ ಜಿ ಎಸ್ ಟಿ ತೆರಿಗೆ ಎಂದು ತಂತ್ರಾಂಶದ ಎಡವಟ್ಟಿನಿಂದ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆಯಿಂದ ಹೊರಗುಳಿದಿದ್ದಾರೆ ಎಂಬ ದೂರುಗಳು ಬರುತ್ತವೆ.
ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಿ ತಾಲೂಕಿನಲ್ಲಿರುವಂತಹ ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳ ಸೂಕ್ತ ದಾಖಲಾತಿಗಳನ್ನು ಪಡೆದು ಅವರಿಗೆ ಅನ್ನಭಾಗ್ಯ ಯೋಜನೆ ಸಿಗುವಂತೆ ಮಾಡಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದರು.
ಇನ್ನು ತಾಲೂಕಿನಲ್ಲಿ ಒಟ್ಟು ರೇಷನ್ ಕಾರ್ಡ್ ಗಳ ಸಂಖ್ಯೆ 54019 ಇವೆ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡ 53’795 ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೋಂದಾವಣೆಯಾಗದೆ ಬಾಕಿ ಉಳಿದ ಫಲಾನುಭೋಗಗಳ ಸಂಖ್ಯೆ 224 ಉಳಿದಿವೆ, ಇವರಿಗೆಲ್ಲ ಸೂಕ್ತ ದಾಖಲಾತಿ ಪಡೆದು ಜಾರಿ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಆಂಜನೇಯ ಅಧಿಕಾರಿಗಳಿಗೆ ಸೂಚಿಸಿದರು..ಪದವಿ ಹಾಗೂ ಡಿಪ್ಲೋಮಾ ಪೂರೈಸಿದ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಚಳ್ಳಕೆರೆ ತಾಲೂಕಿನಲ್ಲಿ ಯೋಜನೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಯುವನಿಧಿ ಯೋಜನೆಗೆ ನೊಂದವಾಣಿಮಾಡಿಕೊಂಡ ಫಲಾನುಭವಿಗಳು ಸು.1206 ಇವರಿಗೆ ರಾಜ್ಯ ಸರಕಾರ ಪಾವತಿಸಿದ ಒಟ್ಟು ಮೊತ್ತ 20 9,14,500 ರೂ. ಹಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಶಶಿಧರ್ ಹೇಳಿದರು.
ಇದೇ ಸಂಧರ್ಭದಲ್ಲಿ ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಶಶಿಧರ್, ಕಛೇರಿ ಅಧಿಕ್ಷಕ ತಿಪ್ಪೇಸ್ವಾಮಿ,ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸದಸ್ಯ ಆಂಜನೇಯ, ಅನಿಲ್ ಕುಮಾರ್,ತಿಪ್ಪೇಸ್ವಾಮಿ, ಉಮೇಶ್, ಕವಿತಾ, ಹಾಗೂ ಇತರರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.