ಹಿರಿಯೂರು:
ಹಾಲುಮತ ಸಮಾಜ ಬಹಳ ಪವಿತ್ರವಾದ ಸಮಾಜ ಎಲ್ಲಾ ಸಮುದಾಯದವರನ್ನು ಪ್ರೀತಿಯಿಂದ ಗೌರವದಿಂದ ಮಾತನಾಡಿಸುವ ಗುಣ ಈ ಸಮಾಜಕ್ಕಿದೆ ಎಂಬುದಾಗಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠ ಅಧ್ಯಕ್ಷರಾದ ಶ್ರೀಈಶ್ವರಾನಂದ ಪುರಿ ಸ್ವಾಮೀಜಿಯವರು ಹೇಳಿದರು.
ತಾಲ್ಲೂಕಿನ ಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿದ ಕನಕ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು.ಅವರು ಬಂದಿಲ್ಲದಿರುವುದು ಸ್ವಲ್ಪ ಬೇಸರ ತಂದಿದೆ. ಸಮಾಜ ಅಭಿವೃದ್ಧಿಯಾಗಬೇಕೆಂದರೆ ಎಲ್ಲರೂ ಒಗ್ಗಟ್ಟಿನಿಂದ ಸಹಬಾಳ್ವೆಯಿಂದ ಪ್ರೀತಿಯಿಂದ ಬದುಕಬೇಕು. ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಜಾತ್ಯಾತೀತ ನಾಯಕರು ಎಂಬುದಾಗಿ ಅವರು ಅಭಿಪ್ರಾಯಪಟ್ಟರು.
ಎಲ್ಲಾ ಸಮುದಾಯಗಳಿಗೆ ಸ್ಪಂದಿಸುವವರು ನಾಯಕರಾಗುತ್ತಾರೆ. ಅವರು ಒಂದು ಜಾತಿಯ ನಾಯಕರಲ್ಲ. ಸಮಸಮಾಜದ ಸಾಮಾಜಿಕ ನ್ಯಾಯದ ಹರಿಕಾರ.ಎಲ್ಲಾ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಕಾಂಗ್ರೆಸ್ ವಕ್ತಾರ ನಿಖಿತ್ ಮೌರ್ಯ ಮಾತನಾಡಿ ಸಮಾಜ ಬೆಳೆಯಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಮಠಕ್ಕೂ ಸಮಾಜಕ್ಕೂ ಅವಿನಾಭಾವ ಸಂಬಂಧವಿರಬೇಕು. ಮನುಷ್ಯ ಉಸಿರಿದ್ದರೆ ಬದುಕು ಇಲ್ಲದಿದ್ದರೆ ನಶ್ವರ ಎಂಬುದಾಗಿ 15 ನೇ ಶತಮಾನದಲ್ಲಿ ಕನಕದಾಸರು ಹೇಳಿದ್ದಾರೆ. ನಾವೆಲ್ಲರೂ ಪ್ರೀತಿಯಿಂದ ಸಂತೋಷದಿಂದ ಬಾಳಬೇಕು ಯಾವುದು ಶಾಶ್ವತವಲ್ಲ ಎಂಬುದಾಗಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಸುರೇಶ್ ಬಾಬು ರವರು ಮಾತನಾಡುತ್ತಾ ಸಮುದಾಯ ಭವನ ನಿರ್ಮಾಣಕ್ಕೆ ಸಚಿವರು 25 ಲಕ್ಷರೂ.ಅನುದಾನ ನೀಡಿದ್ದಾರೆ.ಈ ಸಮುದಾಯ ಭವನ ಸಾಂಸ್ಕೃತಿಕ ಭವನವಾಗಿ ಬೆಳಕೆಯಾಗಬೇಕು. ಸಮಾಜದ ಎಲ್ಲಾ ಕಾರ್ಯಕ್ರಮಗಳಿಗೆ ಬಳಸಿಕೊಂಡು ದೇವಸ್ಥಾನದ ಅಭಿವೃದ್ಧಿಗೆ ಸಮಿತಿಯವರು ಶ್ರಮಿಸುತ್ತಿದ್ದಾರೆ.
ಭಕ್ತರು ಭಕ್ತಿಯ ಪ್ರತೀಕ ನಾನು ಈ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಸುಮಾರು 22 ಬಸ್ ನಿಲ್ದಾಣ ಶಾಲೆಗಳಿಗೆ ಶೌಚಾಲಯ ಕುಡಿಯುವ ನೀರು ಹೀಗೆ ಅನೇಕ ಕೆಲಸಗಳನ್ನು ಮಾಡಿಸಿದ್ದೇನೆ ಎಂದರಲ್ಲದೆ,
ಮಕ್ಕಳಲ್ಲಿ ಸಹನೆ, ತಾಳ್ಮೆ, ಪ್ರೀತಿಯ ಗುಣಗಳನ್ನು ಬೆಳೆಸಬೇಕು. ಪುಸ್ತಕದ ಹುಳುಗಳಾಗದೆ, ಮಸ್ತಕದ ಹುಳುಗಳಾಗಬೇಕು. ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರ ಉಳಿಸಲು ಶಿಕ್ಷಣ ಒಂದೇ ದಾರಿದೀಪ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೊಸದುರ್ಗ ಶಿಕ್ಷಣ ಸಂಸ್ಥೆಯ ಕೃಷ್ಣಮೂರ್ತಿ, ಡಾ.ಶ್ರೀನಿವಾಸ್, ಮಧುಗಿರಿ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ಬಿ.ಕೆ.ಮಂಜುನಾಥ್, ಜಯರಾಮ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸುಜಾತ ಶಿವಮೂರ್ತಿ, ಉಪಾಧ್ಯಕ್ಷರಾದ ಮಣಿಮೇಘಾಲಯ ಸದಸ್ಯರಾದ ಶ್ರೀಮತಿ ಮಂಜುಳಾ ವೀರೇಶ್, ಮಾಜಿ ಅಧ್ಯಕ್ಷರಾದ ಸುಜಾತ ಶಿಮೂರ್ತಿ, ಉಪಾಧ್ಯಕ್ಷರಾದ ಮಣಿ ಮೇಘಾಲಯ, ಸದಸ್ಯರಾದ ಮಂಜುಳಾ ವೀರೇಶ್, ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಲಕ್ಷ್ಮೀದೇವಿ ಟ್ರಸ್ಟ್ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್.ನಿಜಲಿಂಗಪ್ಪ, ಖಜಾಂಚಿ ಎಸ್.ವೀರಣ್ಣ, ಉಪಾಧ್ಯಕ್ಷ ಸಿದ್ಧಯ್ಯ, ಕಾಂಗ್ರೆಸ್ ಮುಖಂಡರುಗಳಾದ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಮಾಜಿ ಸೈನಿಕ ಮುದ್ದುಲಿಂಗಪ್ಪ, ಟ್ರಸ್ಟ್ ಸಹಕಾರ್ಯದರ್ಶಿ ಹೆಚ್.ಆನಂದ್, ಕೋಡಿಹಳ್ಳಿ ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.