March 15, 2026
IMG-20250222-WA0105.jpg

ಚಳ್ಳಕೆರೆ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ವಿತರಣೆಯಲ್ಲಿ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ ಮಾಡಿ

ರಾತ್ರಿ ವೇಳೆ ಹಳ್ಳಿಗಳನ್ನು ಕತ್ತಲಲ್ಲಿ

ಇಟ್ಟಿರುವುದನ್ನು ಮತ್ತು ಪಂಪ್‌ಸೆಟ್‌ಗಳಿಗೆ ಯದ್ವಾತದ್ವಾ ವಿದ್ಯುತ್ ನೀಡುತ್ತಿರುವುದನ್ನು ಪ್ರತಿಭಟಿಸಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.ಎ.-150, ಗರಣಿ ಕ್ರಾಸ್ (ಜಿ.ತಿಪ್ಪೇಸ್ವಾಮಿ ತೋಟದ ಮುಂಭಾಗ)

ದಲ್ಲಿ ರೈತರ ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ರಸ್ತೆ ತಡೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ

ಶಾಖೆ ಚಳ್ಳಕೆರೆ ಮತ್ತು ಮೊಳಕಾಲ್ಕುರು ತಾಲ್ಲೂಕು ರೈತ ಸಂಘಗಳ ಒಕ್ಕೂಟದಿಂದ ನೂರಾರು ರೈತರ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಆದೇಶ ನೀಡಬೇಕೆಂದು ಈ ಚಳುವಳಿಯು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮೀಣ ರೈತರ ಬದುಕನ್ನ ಮೂರಾಬಟ್ಟೆ ಮಾಡಿ ತೋಟದ ಮನೆಗಳಲ್ಲಿ ವಾಸ ಮಾಡುತ್ತಿರುವ ರೈತ ಕುಟುಂಬಗಳ ಬದುಕನ್ನೆ

ಹಾಳು ಮಾಡಿ, ಮಕ್ಕಳ ವಿದ್ಯಾಭ್ಯಾಸ ಕತ್ತಲಲ್ಲಿ ಹಾವು ಚೇಳು, ಕಾಡು ಪ್ರಾಣಿಗಳ ಹಾವಳಿ, ಪಂಪ್‌ಸೆಟ್‌ಗಳಿಗೆ ವೊಲ್ವೇಜ್ ಇಲ್ಲದ

ವಿದ್ಯುತ್ ಸರಬರಾಜುಗಳಿಂದ ಪಂಪ್‌ಸೆಟ್ ಸುಟ್ಟು ಬೆಳೆ ನಷ್ಟದಿಂದ ಸಾಲದ ಹೊರೆ, ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟೀಸ್

ನೀಡಿ ಕಿರುಕುಳ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಆಸ್ತಿ ಹರಾಜು, ಕಳ್ಳತನಗಳು ಸೇರಿದಂತೆ ಜನರು ಸಮಸ್ಯೆಗಳ (ಅಧಿಕಾರಿಗಳಿಂದ ಕೃತಕ

ಸೃಷ್ಟಿ) ಸುಳಿಗೆ ಸಿಲುಕಿ ಸಾವು ಬದುಕಿನ ಜೊತೆ ಹೋರಾಡುತ್ತಿದ್ದು ಜಿಲ್ಲಾಡಳಿತ ಹಳ್ಳಿಗಳನ್ನು ರಕ್ಷಿಸಲು ಸರ್ಕಾರದ ಅನುದಾನವನ್ನು

ರೈತರಿಗೆ, ಕೂಲಿಕಾರರಿಗೆ ತಲುಪಿಸಲು ನೇರವಾಗಿ ಚಳುವಳಿ ಸ್ಥಳಕ್ಕೆ ಬಂದು ಹಳ್ಳಿಯ ಜನರ ಬದುಕಿಗೆ ಶಕ್ತಿ ತುಂಬಬೇಕೆಂದು ನಿಷ್ಕ್ರಿಯ

ಭ್ರಷ್ಟ ಅಧಿಕಾರಿಗಳಿಂದ ಅಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.

ರೈತರಿಗೆ ಇಲಾಖೆಗಳಿಂದ ಆಗುತ್ತಿರುವ ಕಿರುಕುಳಗಳು:

1) ರೈತರ ಪಂಪ್‌ಸೆಟ್‌ಗಳಿಗೆ ಕೊಡಬೇಕಾದ 7 ಗಂಟೆ ತ್ರಿಪೇಸ್‌ವಿದ್ಯುತ್‌ನ್ನು ಕಡಿತ ಮಾಡಿ ಅವರಿಗೆ ಮನಃ ಬಂದಂತೆ ಕೊಡುತ್ತಿದ್ದು

ಇದರಿಂದ ಬೆಳೆಗಳು ಒಣಗುತ್ತಿವೆ, ವೋಲ್ವೆಜ್ ಇಲ್ಲದ ವಿದ್ಯುತ್‌ನಿಂದ ಮೋಟಾರ್‌ಗಳು ಸುಡುತ್ತಿವೆ ರಾಷ್ಟ್ರೀಯ ಹೆದ್ದಾರಿಯಲ್ಲಿ

ದೀಪ ಬೆಳಗುತ್ತಿವೆ, ರಾತ್ರಿ ತೋಟದ ಮನೆಗಳನ್ನು ಕತ್ತಲೆಯಲ್ಲಿಟ್ಟಿದ್ದಾರೆ.

2) ರೈತರ ಸಾವಿರಾರು ಕುಟುಂಬಗಳು ಹೊಲದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆವಿಗೂ ವಿದ್ಯುತ್ ಸರಬರಾಜು ಮಾಡದೇ ಕತ್ತಲಲ್ಲಿ ಕಳೆಯುವಂತೆ ಬೆಸ್ಕಾಂನವರು ಮಾಡಿದ್ದು ಇದರಿಂದ ಅನೇಕ ಸಮಸ್ಯೆಗಳು ಸೇರಿದಂತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುತ್ತದೆ, ವಿದ್ಯಾರ್ಥಿಗಳು ಪರೀಕ್ಷೆಯ ಆತಂಕದಲ್ಲಿದ್ದಾರೆ.

3) ವಿದ್ಯುತ್‌ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳಲ್ಲಿ ಮರ-ಗಿಡ-ಬಳ್ಳಿ ಬೆಳೆದಿವೆ, ಲೈನ್‌ಗಳು ನೆಲಕ್ಕೆ ತಾಗಿವೆ, ಕಂಬಗಳು

ಶಿಥಿಲಗೊಂಡು ಸಂಪೂರ್ಣ ವಿದ್ಯುತ್ ಸರಬರಾಜಿನಲ್ಲಿ ಆಡಚಣೆಯಾಗುತ್ತಿದ್ದರೂ ಅನೇಕ ವರ್ಷಗಳಿಂದ ಗಮನಕ್ಕೆ ತಂದಿದ್ದರೂ

ಕ್ರಮವಾಗಿಲ್ಲ ಇದರಿಂದ ಟಿ.ಸಿ., ಪಂಪ್‌ಸೆಟ್‌ಗಳು ಸುಟ್ಟು ಸರ್ಕಾರಕ್ಕೂ, ರೈತರಿಗೂ ನಷ್ಟವಾಗುತ್ತಿದೆ.

ಕೆಲವು ಸಿಬ್ಬಂದಿ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬೆಸ್ಕಾಂ ಸಿಬ್ಬಂದಿ ಆನೇಕರು ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ.

ತಮ್ಮ ಕರ್ತವ್ಯ ಮರೆತು ಇಲಾಖೆಗೆ ಹಾಗೂ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ, ಇವರ ಕರ್ತವ್ಯ ಲೋಪದಿಂದ ಆತೀ ಹೆಚ್ಚುವಿದ್ಯುತ್‌ ಸಮಸ್ಯೆಯಾಗಿದೆ, ಆದರೆ ಇಲಾಖೆ ನಿರ್ಲಕ್ಷವೇ ಕಾರಣವಾಗಿರುತ್ತದೆ, ಇವರನ್ನು ಅಮಾನತ್ತಿನಲ್ಲಿಟ್ಟು ತನಿಕೆ ಮಾಡಬೇಕು.

5) ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ಹಗಲು ವಿದ್ಯುತ್‌ ದೀಪ ಉರಿಯುತ್ತಿದ್ದುದನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಡಿವಾಣ ಹಾಕಿ ಆ ವಿದ್ಯುತ್‌ನ್ನು ರೈತರ ಪಂಪ್‌ಸೆಟ್‌ಗಳಿಗೆ ಉಳಿಸಿ ಕೊಡಿ, ಸರ್ಕಾರಕ್ಕೆ ಆಗುವ ನಷ್ಟವನ್ನು ತಡೆಯಬೇಕೆಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಕಳೆದ ವರ್ಷಗಳ ಹಿಂದಿನಿಂದಲೂ ಲಿಖಿತವಾಗಿ ತಿಳಿಸಿದ್ದು, ಹಗಲು ವಿದ್ಯುತ್‌ಗೆ ತಿಳಿಸಿದ್ದರೂ ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟವಾಗುತ್ತಿದೆ. ಚಳ್ಳಕೆರೆ ತಾಲ್ಲೂಕು

ಪಂಚಾಯ್ತಿ ಇಓ ರವರು ಉಡಾಫೆ ಉತ್ತರ ನೀಡುತ್ತಾರೆ, ಗ್ರಾಮೀಣ ನೈರ್ಮಲ್ಯದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ

6) ಜಿಲ್ಲೆಯಲ್ಲಿ ಎಲ್ಲಾರಾಷ್ಟ್ರೀಕೃತ ಬ್ಯಾಂಕ್‌ಗಳು (ಗ್ರಾಮೀಣ ಬ್ಯಾಂಕ್, ಕೆನರಾ, ಮೈಸೂರುಗಳಂತ) ರೈತರಿಗೆ ಕೇಂದ್ರ ಮತ್ತು ರಾಜ್ಯ

ಮನೆ, ಎತ್ತು, ಎಮ್ಮೆಗಳು, ಕುರಿ ಮೇಲೆ ಶೆಡ್‌ಗಳಿಗೆ ಕೊಡುವ ಸಬ್ಸಿಡಿ ಹಣ ಇನ್ನು ಮುಂತಾದ ಸಬ್ಸಿಡಿ ಹಣವನ್ನು ಬ್ಯಾಂಕ್‌ಗಳು ಸರ್ಕಾರಗಳು ಅಪತ್ಕಾಲಕ್ಕೆ ನೆರವಿಗೆ ಕೊಡುತ್ತಿರುವ ಹಣ, ಬೆಳೆ ಪರಿಹಾರ, ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ, ಬೆಳೆವಿಮೆ,ಸಾಲಕ್ಕೆ ಜಮಾ ಮಾಡಿದ್ದಾರೆ, ಇದು ಕಾನೂನು ಬಾಹಿರವಾಗಿದ್ದು ಸಬ್ಸಿಡಿ ಹಣವನ್ನು ರೈತರಿಗೆ ನೇರವಾಗಿ ಕೊಡಬೇಕು ಸಾಲಕ್ಕೆ ಜಮಾ ಮಾಡಬಾರದೆಂದು ಲೀಡ್‌ಬ್ಯಾಂಕ್ ಆದೇಶವಿದ್ದರೂ ಬ್ಯಾಂಕ್‌ಗಳು ರೈತರಿಗೆ ಕಾನೂನು ಉಲ್ಲಂಘಿಸಿ ಸಾಲಕ್ಕೆ ಜಮಾ ಮಾಡಿದ್ದು ಇಂತಹ ಬ್ಯಾಂಕ್‌ ಮ್ಯಾನೇಜರ್‌ಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರೂ ಜಿಲ್ಲಾಧಿಕಾರಿಗಳು ಕ್ರಮ ವಹಿಸಿಲ್ಲ, ಜಮಾ ಮಾಡಿಕೊಂಡಿರುವ ಹಣ ರೈತರ ಖಾತೆಗೆ ವಾಪಾಸ್‌ ಹಾಕಿಲ್ಲ, ಬ್ಯಾಂಕ್‌ ಮ್ಯಾನೇಜರ್‌ಗಳ ಮೇಲೆ ಕ್ರಮ ತೆಗೆದು ಕೊಂಡಿಲ್ಲ.

7) ಜಿಲ್ಲೆಯ ಗ್ರಾಮ, ಬೆಸ್ಕಾಂ, ಕಂದಾಯ, ಪೋಲಿಸ್, ಸರ್ವೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಂತ ಆಯಕಟ್ಟಿನ ಕಛೇರಿಗಳಲ್ಲಿ

ಹತ್ತಾರು ವರ್ಷ ಒ೦ದೇ ಕಡೆ ವರ್ಗಾವಣೆ ಆಗದೆ ಬೇರೂರಿದ್ದು ಇಂತಹವರನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ವರ್ಗಾವಣೆ

ಮಾಡುವ ಮೂಲಕ ಆಡಳಿತಕ್ಕೆ ವೇಗ ನೀಡಬೇಕು.

8) ಅಕ್ರಮ-ಸಕ್ರಮ ಯೋಜನೆ ಹಿಂದಿನಂತೆ ಪಂಪ್‌ಸೆಟ್‌ಗಳಿಗೆ ಟಿ.ಸಿ. ಕಂಬ, ವೈರ್ ಕೊಡಬೇಕು, ಬೆಸ್ಕಾಂ, ಮೊಳಕಾಲ್ಮುರು

ಮತ್ತು ಚಳ್ಳಕೆರೆ ಉಪ ವಿಭಾಗಕ್ಕೆ ಲಾರಿ ಕೊಡಬೇಕು.

ಈ ಮೇಲ್ಕಂಡ ಸಮಸ್ಯೆಗಳ ಒತ್ತಡಕ್ಕೆ ಸಿಲುಕಿ ಅನೇಕ ಜನರು ಮಾನಕ್ಕೆ ಅಂಜಿ ಸಾಲಕ್ಕೆ ಹೆದರಿ ಸಾಯುತ್ತಿದ್ದಾರೆ, ಬೆಳಕಿಗೆ ಪ್ರಕರಣಗಳು ಬ೦ದಿಲ್ಲ, ಇನ್ನು ಅನೇಕರು ಸಾವಿನ ಯೋಚನೆ ಮಾಡುವ ಹಂತಕ್ಕೆ ಬಂದಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಬದುಕುವ ಹಕ್ಕು ನೀಡಿದ್ದರೂ ನಿರ್ಲಕ್ಷ್ಯ ಅಧಿಕಾರಿ, ಭ್ರಷ್ಟಚಾರದ ನೌಕರರಿಂದ ಅನೇಕ ಕುಟುಂಬಗಳು ಹಾಳಾಗುತ್ತಿದ್ದು

ಇವರನ್ನು ರಕ್ಷಣೆ ಮಾಡಿಕೊಳ್ಳುವ ಹಕ್ಕು, ಬದುಕುಕಟ್ಟಿಕೊಳ್ಳುವಂತೆ ಸರ್ಕಾರದ ಸೌಲಭ್ಯ ಕೊಡಿಸುವ ಮನುಷ್ಯರನ್ನು

ಮನುಷ್ಯರಂತೆ ನೋಡಿ ಕಾಪಾಡಿ ಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತಕ್ಕೂ ಹಾಗೂ ಸಾರ್ವಜನಿಕರಿಗೂ ಇದ್ದು ಈ ಸಮಸ್ಯೆಗಳನ್ನು

ಪರಿಹರಿಸಲು ಜಿಲ್ಲಾಡಳಿತ ಚಳುವಳಿಯ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು, ಇಲ್ಲವಾದಲ್ಲಿ ಮುಂದೆ ಆಗ ಬಹುದಾದ

ಅನಾಹುತಕ್ಕೆ ಜಿಲ್ಲಾಡಳಿತವೆ ಹೊಣೆಯೆಂದು ತಿಳಿಯ ಪಡಿಸುತ್ತೇವೆ.

ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ರೈತರು, ಸ್ವ-ಸಹಾಯಸಂಘಗಳು, ರೈತಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಈ ಸ್ವಾಭಿಮಾನ ಚಳುವಳಿಗೆ ಟ್ರ್ಯಾಕ್ಟರ್, ಎತ್ತಿನಗಾಡಿ,

ಬೈಸಿಕಲ್‌ಗಳು ಸೇರಿದ೦ತೆ ನೂರಾರು ವಾಹನಗಳಲ್ಲಿ ಸಾವಿರಾರು ಜನ ಸೇರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading