ನಾಯಕನಹಟ್ಟಿ-: ಉತ್ತಮ ಆರೋಗ್ಯವಂತರಾಗಿರಲು ರಕ್ತದಾನ ಮಾಡಿ ಎಂದು ಟೆಕ್ನಿಕಲ್ ಸೂಪರ್ ವೈಸರ್ ಟಿ.ಎಸ್. ರಾಕೇಶ್ ಕುಮಾರ್ ಹೇಳಿದರು.
ಗುರುವಾರ ಪಟ್ಟಣದ ಪಾದಗಟ್ಟೆ ಹತ್ತಿರದ ರವಿ ಮೆಡಿಕಲ್ಸ್ ಆವರಣದಲ್ಲಿ ಆಯೋಜಿಸಿದ
ಪೋರ್ಟ್ ಲಯನ್ಸ್ ಬ್ಲಡ್ ಸೆಂಟರ್ ಸಂಘ ಮಿತ್ರ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಚಿತ್ರದುರ್ಗ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚಿತ್ರದುರ್ಗದಲ್ಲಿ ಸಂಚಾರಿ ರಕ್ತದಾನ ಘಟಕ ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು ಆರೋಗ್ಯವಾಗಿ ಇರುವಂತವರು 18 ವರ್ಷದಿಂದ 60 ವರ್ಷದ ಹೊರಗಿನವರು ರಕ್ತದಾನ ಮಾಡಬಹುದು ಗಂಡು ಮಕ್ಕಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಹೆಣ್ಣು ಮಕ್ಕಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ರವಿ ಮೆಡಿಕಲ್ಸ್ ಮಾಲೀಕ ಬಿ.ಟಿ. ರವಿಕುಮಾರ್ ,
ಡಾ. ಎಸ್ ಜಯಂತ್, ಸ್ಟಾಪ್ ನರ್ಸ್ ಆರ್ ಜ್ಯೋತಿ, ಟೆಕ್ನಿಷಿಯನ್ ಆರ್ ಓಂ ಪ್ರಕಾಶ್, ಎಸ್.ಶಶಾಂಕ್, ಟೆಕ್ನಿಕಲ್ ಸೂಪರ್ ವೈಸರ್ ಜಿಎಸ್ ರಾಕೇಶ್ ಕುಮಾರ್ ಸರಿದಂತೆ ರಕ್ತದಾನ ದಾನಿಗಳು ಇದ್ದರು

About The Author
Discover more from JANADHWANI NEWS
Subscribe to get the latest posts sent to your email.