December 15, 2025
IMG-20250122-WA0129.jpg

” ಚಳ್ಳಕೆರೆ:- ಸ್ವಾಮಿ ವಿವೇಕಾನಂದರ ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪು ಮತ್ತು ಜಿ.ಎಸ್ ಶಿವರುದ್ರಪ್ಪ ಅವರ ಕೊಡುಗೆ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಾತನಾಡಿದರು. ಕುವೆಂಪು ರಚಿಸಿದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ,ಅವರ ಕುರಿತ ಹಾಡುಗಳು ,ಜಿ.ಎಸ್ ಶಿವರುದ್ರಪ್ಪ ರಚಿಸಿದ ಹಾಡುಗಳು ಕನ್ನಡದ ವೇದಾಂತ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳನ್ನು ಅಧ್ಯಯನ ಮಾಡುವುದರಿಂದ ನಮಗೆ ಶಕ್ತಿ ಬರುತ್ತದೆ.ಆದ್ದರಿಂರ ಅವರು ಪ್ರತಿಪಾದಿಸಿದ ಶಕ್ತಿಯೇ ಜೀವನ-ದೌರ್ಬಲ್ಯವೇ ಮರಣ,ಏಳಿ, ಎದ್ದೇಳಿ,ಗುರಿ ಮುಟ್ಟುವವರೆಗೂ ನಿಲ್ಲದಿರಿ, ಎಲ್ಲಾ ಶಕ್ತಿಯೂ ನಿನ್ನೊಳಗೆ ಇದೆ.ಅದರಲ್ಲಿ ವಿಶ್ವಾಸವಿಡು,ನೀನು ದುರ್ಬಲನೆಂದು ಭಾವಿಸದಿರು, ನಿನ್ನೊಳಗಿರುವ ದಿವ್ಯತೆಯನ್ನು ಜಾಗೃತಗೊಳಿಸಿಕೊಳ್ಳಿ ಇತ್ಯಾದಿ ಅವರ ಗುಡುಗಿನ ಸಂದೇಶಗಳ ಅನುಸರಣಿಯಿಂದ ನಮ್ಮ ಜೀವನಕ್ಕೆ ಭರವಸೆ ಸಿಕ್ಕಿ ಶಕ್ತಿಯುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು.ಈ ಪ್ರವಚನಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸಾಮೂಹಿಕ ಭಜನಾ ಕಾರ್ಯಕ್ರಮ”, “ಶ್ರೀರಾಮಕೃಷ್ಣ ನಾಮದ 108 ಅರ್ಚನೆ”, ಶ್ರೀಶಾರದಾಶ್ರಮದ ಮಕ್ಕಳು ಮತ್ತು ಯುವಕರಿಂದ “ಸ್ವಾಮಿ ವಿವೇಕಾನಂದ ಮತ್ತು ಶರಶ್ಚಂದ್ರಗುಪ್ತ” ನಾಟಕ ಪ್ರದರ್ಶನ,ಮಕ್ಕಳಿಂದ ಸ್ವಾಮಿ ವಿವೇಕಾನಂದರ ಜೀವನ ಕಥೆಯ ನಿರೂಪಣಾ ಕಾರ್ಯಕ್ರಮ ನಡೆಯಿತು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ನೇತಾಜಿ ಪ್ರಸನ್ನ, ರಮೇಶ್, ರವಿಚಂದ್ರ,ಶ್ರೀಮತಿ ಲಕ್ಷ್ಮೀದೇವಮ್ಮ, ರತ್ನಮ್ಮ ,ಪ್ರೇಮಲೀಲಾ, ಸರಸ್ವತಮ್ಮ,ಗೀತಾ ಭಕ್ತವತ್ಸಲ, ಯತೀಶ್ ಎಂ ಸಿದ್ದಾಪುರ, ಶ್ರೀಮತಿ ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಗೀತಾ ನಾಗರಾಜ್, ಗಂಗಾಂಬಿಕೆ, ಸುಜಾತ, ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶ್, ಸಂತೋಷ ಅಗಸ್ತ್ಯ, ಚೇತನ್, ಹರ್ಷಿತಾ,ಶ್ರೇಯಸ್ಸು , ಯಶಸ್ಸು,ಮನಸಿರಿ, ವಿನತಿ, ಪ್ರಿಯಾಂಕ , ಪ್ರತೀಕ್ಷಾ,ಡಾ.ಭೂಮಿಕ, ಸೌಮ್ಯ,ಮಂಗಳ, ಶಾಂತಮ್ಮ, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading