” ಚಳ್ಳಕೆರೆ:-ಕ್ಷಯ ಮುಕ್ತ ಭಾರತ ನಮ್ಮ ಗುರಿಯಾಗಿದೆ ಎಂದು ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಸಿ.ವಸಂತಮ್ಮ ತಿಳಿಸಿದರು.ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀದುರ್ಗಾಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಕ್ಷಯ ಮುಕ್ತ 100 ದಿನಗಳ ಅಭಿಯಾನದ ಜನಜಾಗೃತಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ಕ್ಷಯ ರೋಗವು “ಮೈಕೋಬ್ಯಾಕ್ಟೀಯಂ ಟ್ಯುಬರ್ ಕ್ಯುಲೋಸಿಸ್” ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ.ಇದರ ಪ್ರಮುಖ ಲಕ್ಷಣಗಳೆಂದರೆ ‘ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಇರುವುದು,ಕೆಮ್ಮಿದಾಗ ಕಾಫ ಬರುವುದು,ಕಾಫದಲ್ಲಿ ರಕ್ತ ಬರುವುದು,ಸಂಜೆ ಹೊತ್ತು ಜ್ವರ ಬರುವುದು, ಜಾಸ್ತಿ ಬೆವರುವುದು,ತೂಕ ಕಡಿಮೆಯಾಗುವುದು,ಹಸಿವಾಗದಿರುವುದಾಗಿದೆ,ಈ ಮೇಲಿನ ಲಕ್ಷಣಗಳು ಕಂಡು ಬಂದರೆ ಸ್ಥಳೀಯ ಆಶಾ ಕಾರ್ಯಕರ್ತೆಯ ಗಮನಕ್ಕೆ ತಂದು ಕಾಫ ಪರೀಕ್ಷೆ ಮಾಡಿಸಿ ರೋಗ ಪತ್ತೆಯಾದರೆ ಸರ್ಕಾರದಿಂದ ಆರು ತಿಂಗಳ ಕಾಲ ಉಚಿತ ಚಿಕಿತ್ಸೆ ಮತ್ತು ಪ್ರತಿ ತಿಂಗಳು ರೋಗಿಯ ಖಾತೆಗೆ ಸಹಾಯಧನವು ಸಿಗುತ್ತದೆ.ಆದ್ದರಿಂದ ಈ ರೋಗದ ಬಗ್ಗೆ ಜನರು ಭಯ ಪಡದೆ ಸೂಕ್ತ ಚಿಕಿತ್ಸೆ ಪಡೆದರೆ ಶಾಶ್ವತವಾಗಿ ಕ್ಷಯ ಮುಕ್ತರಾಗಿ ಉತ್ತಮ ಜೀವನ ನಡೆಸಬಹುದು ಇದರಿಂದ ನಾವೆಲ್ಲರೂ ಸೇರಿ ಗ್ರಾಮ-ನಗರ-ಜಿಲ್ಲೆ-ಭಾರತವನ್ನು ಕ್ಷಯ ಮುಕ್ತವಾಗಿ ಮಾಡಬಹುದು ಹೇಳಿದರು. ಈ ಜನಜಾಗೃತಿ ಕಾರ್ಯಕ್ರಮದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಸಿದ್ದಾಪುರ ಗ್ರಾಮದ ಮಹಿಳಾ ಸಂಘದ ಮುಖ್ಯಸ್ಥೆ ಕಮಲಮ್ಮ ರಾಮಣ್ಣ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಎಸ್ ಎನ್ ಗಂಗಮ್ಮ, ಡಿ.ಗುರುಶಾಂತಮ್ಮ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಗ್ರಾಮಸ್ಥರಾದ ದ್ಯಾಮಣ್ಣ, ಪುಟ್ಟಕ್ಕ,ರವಿ, ವೆಂಕಟೇಶ್, ಲಕ್ಷ್ಮೀದೇವಿ, ತಿಪ್ಪೀರಮ್ಮ,ಮಾರುತಿ, ತಿಮ್ಮಜ್ಜ,ಶಿವಣ್ಣ, ಮಾರಣ್ಣ,ಅಜಯ, ನಾಗ, ತಿಪ್ಪೇಸ್ವಾಮಿ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.


About The Author
Discover more from JANADHWANI NEWS
Subscribe to get the latest posts sent to your email.