January 29, 2026
FB_IMG_1737532479505.jpg


ಚಿತ್ರದುರ್ಗಜ.22:
ಐತಿಹಾಸಿಕ ಚಿತ್ರದುರ್ಗ ನಗರಕ್ಕೆ ಹತ್ತಿರ ಇರುವ ಮಲ್ಲಾಪುರ ಕೆರೆಯನ್ನು ಅಭಿವೃದ್ಧಿ ಪಡಿಸಿ ಉತ್ತಮ ಪ್ರವಾಸಿ ತಾಣವಾಗಿಸಬಹುದು. ಆದರೆ ನಿರ್ಲಕ್ಷö್ಯದಿಂದ ಕೆರೆ ಸಂಪೂರ್ಣ ಹಾಳಾಗಿದೆ. ಕೆರೆ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತೇನೆ. ಎರಡು ತಿಂಗಳ ಒಳಗಾಗಿ ಕೆರೆ ಅಭಿವೃದ್ಧಿಯಾಗದಿದ್ದರೆ ಸಂಬAದ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ. ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ಮಲ್ಲಾಪುರ ಕೆರೆ ನಿರ್ವಹಣೆ ವೈಫಲ್ಯದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಬುಧವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಮೇಲಿನಂತೆ ತಾಕೀತು ಮಾಡಿದರು.
ಕೆರೆ ಪರಿಶೀಲನೆಗಾಗಿ ಬಂದಿದ್ದೇನೆ ಎಂದು ಅಧಿಕಾರಿಗಳು ಬೇಗೆ ಸಮಸ್ಯೆ ಪರಿಹರಿಸುವುದಾಗಿ ಬುರುಡೆ ಬಿಡುವುದು ಬೇಡ. ಕೆರೆ ಅಭಿವೃದ್ಧಿಗೆ ಬೇಕಾದಷ್ಟು ಸಮಯವನ್ನು ತಗೆದುಕೊಂಡು, ಸರಿಯಾಗಿ ಕೆಲಸ ನಿರ್ವಹಿಸಿ, ಒಂದು ವೇಳೆ ಕೆಲಸ ಮಾಡದಿದ್ದರೇ, ನಾನು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಕೆರೆ ಸಾರ್ವಜನಿಕರ ಆಸ್ತಿ. ಕೂಡಲೇ ಸ್ವಚ್ಛಗೊಳಿಸಿ ಅದರ ಪೋಟೋ ಹಾಗೂ ವಿಡಿಯೋದೊಂದಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆ ಒತ್ತುವರಿಗೆ ತೆರವಿಗೆ ನಿರ್ದೇಶನ :
ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಮಲ್ಲಾಪುರ ಕೆರೆ ಜಂಟಿ ಸಮೀಕ್ಷೆ ಕಾರ್ಯಕೈಗೊಳ್ಳಬೇಕು. ಒತ್ತುವರಿಯಾಗಿದ್ದರೆ, ಕೆರೆಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತವರಿಗೆ ಕಾನೂನಿನ ಪ್ರಕಾರ ನೋಟಿಸ್ ಹಾಗೂ ಕಾಲವಕಾಶ ನೀಡಿ ಒತ್ತುವರಿ ತೆರವುಗೊಳಿಸುವಂತೆ ನ್ಯಾ.ಫಣೀಂದ್ರ ನಿರ್ದೇಶನ ನೀಡಿದರು.
ಈಗಾಗಲೇ ಗುರುತಿಸಿರುವ ಒತ್ತುವರಿಯನ್ನು ತೆರವುಗೊಳಿಸಿ ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಕೆರೆ ಸುತ್ತಲೂ ಮಣ್ಣಿನ ಏರಿ ಹಾಕಿ, ಪುಟ್ ಪಾತ್ ನಿರ್ಮಿಸಬೇಕು. ಐತಿಹಾಸಿಕ ತಾಣವಾಗಿರುವ ಚಿತ್ರದುರ್ಗದಲ್ಲಿ ಇಲ್ಲಿಯೂ ಕೂಡ ಪ್ರವಾಸಿ ತಾಣ ಮಾಡಲು ಉತ್ತಮ ಅವಕಾಶವಿದೆ ಎಂದರು.
ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಕಲುಷಿತ ನೀರನ್ನು ಸ್ವಚ್ಛಗೊಳಿಸಿ ಕೆರೆಗೆ ಬಿಡಬೇಕು. ಕೆರೆಯಲ್ಲಿ ಬೆಳೆದಿರುವ ಅಂತರಗAಗೆಯನ್ನು (ಕಳೆ ಬಳ್ಳಿ) ತೆರವುಗೊಳಿಸಬೇಕು. ಕೆರೆಯ ಹೂಳು ಎತ್ತಿ, ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು. ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಜಲತಜ್ಞರ ಅಭಿಪ್ರಾಯ ಪಡೆದು ನಗರದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದೇ ಮಾದರಿಯಲ್ಲಿ ಮಲ್ಲಾಪುರ ಕೆರೆ ಕುರಿತು ಜಲತಜ್ಞರ ವರದಿ ಪಡೆದು ಅಭಿವೃದ್ಧಿಗೆ ಮುಂದಾಗುವAತೆ ನ್ಯಾ.ಫಣೀಂದ್ರ ಹೇಳಿದರು.
ಕೋಡಿ ನಾಲಾ ಸರಿಪಡಿಸಲು ಸೂಚನೆ:
ಮಲ್ಲಾಪುರ ಕೆರೆ ಸಂಪರ್ಕಿಸುವ ಹಾಗೂ ಕೆರೆಯಿಂದ ಹೊರಹೋಗುವ ನಾಲಾ ವ್ಯವಸ್ಥೆಯನ್ನು ಸರಿಪಡಿಸಬೇಕು. ಕೆರೆಯ ಸುತ್ತಮುತ್ತಲಿನ ಶಾಲೆಗಳಿಗೆ ನೀರು ನುಗ್ಗಿ ಮಕ್ಕಳಿಗೆ ತೊಂದರೆಯಾಗಿದೆ. ಶಾಲಾ ಪಕ್ಕದಲ್ಲಿರುವ ಚರಂಡಿಯನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ ಸೇರಿದಂತೆ ಇತರೆ ಕ್ರಿಮಿಕೀಟಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕೆರೆಯ ಸುತ್ತಲೂ ಸಾರ್ವಜನಿಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆಯ ಏರಿ ಪಕ್ಕದಲ್ಲಿ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಸುರಿಯುವರಿಗೆ ದಂಡ ವಿಧಿಸಬೇಕು. ದಂಡಕ್ಕೂ ಮಣಿಯದಿದ್ದರೆ, ಪೊಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲಿಸಬೇಕು. ಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು. ಕೆರೆ ನೀರು ಶುದ್ಧವಾದರೆ ಅದನ್ನು ರೈತರಿಗೆ ವ್ಯವಸಾಯಕ್ಕೆ ನೀಡಬಹುದು. ಇದರಿಂದ ಸರ್ಕಾರಕ್ಕೆ ಆದಾಯವು ಬರುತ್ತದೆ ಎಂದು ನ್ಯಾ.ಫಣೀಂದ್ರ ತಿಳಿಸಿದರು.
ಎನ್.ಹೆಚ್.13 ನೂತನ ಹೈವೆ ನಿರ್ಮಾಣದ ವೇಳೆ ಮಲ್ಲಾಪುರ ಕೆರೆ ಟೂಬಿನಿಂದ ನೀರು ಹೊರಬಿಡಲು ಕಲ್ಪಿಸಿದ್ದ ನಾಲಾ ವ್ಯವಸ್ಥೆ ಮುಚ್ಚಿ ಹೋಗಿದೆ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ, ಮೊದಲಿನ ಹಾಗೆ ಕೆರೆ ಟೂಬಿನಿಂದ ನೀರು ಹೊರಬಿಡಲು ನಾಲಾ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ವಿವರಿಸಿದರು.
ಈ ವೇಳೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ವಾಸುದೇವರಾಮ್, ತಹಶೀಲ್ದಾರ್ ಡಾ.ನಾಗವೇಣಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಂತ ಕುಮಾರ್, ನಗರಸಭೆ ಆಯುಕ್ತೆ ರೇಣುಕಾ.ಎಂ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading