December 14, 2025
FB_IMG_1734785421509.jpg


ಹಿರಿಯೂರು:
ನಗರದ ನಾಗರೀಕರು ತಮ್ಮ ಮನೆ ಕಟ್ಟಡಗಳ ಅಂಗಡಿ ಮುಗ್ಗಟ್ಟುಗಳ ಉದ್ದಿಮೆಗಳ ಕಂದಾಯ ಕಟ್ಟಲು ನಗರದ ಬ್ಯಾಂಕ್ ಗಳಿಗೆ ಹೋದರೆ ಬಹಳ ಕಿಕ್ಕಿರಿದ ಜನಸಂದಣಿಯಿದ್ದು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಾಯಬೇಕಾಗುತ್ತದೆ ಎಂಬ ದೃಷ್ಠಿಯಲ್ಲಿ ನಗರದ ಜನರಿಗೆ ಅನುಕೂಲವಾಗುವಂತೆ ನಗರಸಭೆಯಲ್ಲಿಯೇ ಬ್ಯಾಂಕ್ ಆಫ್ ಬರೋಡದ ಕೌಂಟರ್ ತೆರೆಯಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ನಗರಸಭೆಯಲ್ಲಿ ನಗರದ ಜನರಿಗೆ ಅನುಕೂಲವಾಗುವಂತೆ ನಗರಸಭೆಯಲ್ಲಿಯೇ ಬ್ಯಾಂಕ್ ಆಫ್ ಬರೋಡದ ಕೌಂಟರ್ ಒಂದನ್ನು ಪ್ರಾರಂಭಿಸಿ ಅವರು ಮಾತನಾಡಿದರು.
ಈ ಬಗ್ಗೆ ಬ್ಯಾಂಕ್ ಆಫ್ ಬರೋಡಾದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿದಾಗ ಅವರು ಬಹಳ ಸಂತೋಷದಿಂದ ನಗರಸಭೆಯಲ್ಲಿ ತಮ್ಮ ಬ್ಯಾಂಕಿನ ಕೌಂಟರ್ ತೆರೆಯಲು ಒಪ್ಪಿಕೊಂಡರು.ಅದಕ್ಕಾಗಿ ಅವರುಗಳಿಗೆ ನಗರದ ಜನತೆಯ ಹಾಗೂ ನಗರಸಭೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಸಚಿವರು ಹೇಳಿದರು.
ನಗರದ ನಾಗರೀಕರು ಈ ಕೌಂಟರ್ ಮೂಲಕ ಹಣ ಕಟ್ಟುವುದರಿಂದ ಅವರ ಅಮೂಲ್ಯವಾದ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ.ಆದ್ದರಿಂದ ಈ ಕೌಂಟರ್ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳಬೇಕು ಎಂದರಲ್ಲದೆ, ನಗರದ ಜನತೆ ಕಂದಾಯ ಕಟ್ಟಿದರೆ ಮಾತ್ರ ನಗರದಅಭಿವೃದ್ಧಿ ಸಾಧ್ಯ ಆದ್ದರಿಂದ ನಾಗರೀಕರು ತಮ್ಮ ಮನೆ, ಕಟ್ಟಡ, ಉದ್ದಿಮೆಗಳ ಕಂದಾಯವನ್ನು ಕಟ್ಟುವ ಮೂಲಕ ನಗರದಅಭಿವೃದ್ಧಿಗೆ ಸಹಕರಿಸಬೇಕು ಎಂಬುದಾಗಿ ಸಚಿವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾಆರಾಧ್ಯ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ವ್ಯವಸ್ಥಾಪಕಿ ಶ್ರೀಮತಿ ಮಂಜುಳಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಎಂ.ಡಿ.ಸಣ್ಣಪ್ಪ, ಗುಂಡೇಶ್ ಕುಮಾರ್, ಶಿವಕುಮಾರ್, ರಮೇಶ್ ಬಾಬು, ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ಗೀತಾಗಂಗಾಧರ್ ಸೇರಿದಂತೆ ಶ್ರೀಮತಿ ಸಂಧ್ಯಾ, ಶ್ರೀಮತಿ ಮೀನಾಕ್ಷಿ, ಲೆಕ್ಕಅಧೀಕ್ಷಕರಾದ ಗೋವಿಂದರಾಜು, ಜನಾರ್ಧನ್ ಕರಡಿ, ಸೇರಿದಂತೆ ನಗರಸಭೆ ನೌಕರರು ಹಾಗೂ ಸಿಬ್ಬಂದಿ, ನಗರದ ನಾಗರೀಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading