(ವರದಿ:ನಾಗತಿಹಳ್ಳಿಮಂಜುನಾಥ್)
ಹೊಸದುರ್ಗ: ಹೆಚ್ಚಿನ ಪ್ರಾಮಾಣದಲ್ಲಿ ಆರೋಗ್ಯ ಹಾನಿಯುಂಟು ಮಾಡುವಂತಹ ಆಹಾರ ಸೇವಿಸಬೇಡಿ. ತುಸು ತಿಂದರೂ ಪರವಾಗಿಲ್ಲ, ಸತ್ವಯುತ ಆಹಾರ ಸೇವಿಸಬೇಕು. ತಿನ್ನುವುದಕ್ಕಾಗಿ ಬದುಕಬೇಡಿ, ಬದುಕಲು ತಿನ್ನಿ. ಆಹಾರ ವ್ಯರ್ಥ ಮಾಡಬೇಡಿ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ಹೆಜ್ಜೆಸಾಲು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೋ.ತಿಪ್ಪೇಶ್ ನೇತೃತ್ವದಲ್ಲಿ ಆಯೋಜಿಸಿದ್ದ ‘ಕವಿ ಎಸ್.ಜಿ. ಸಿದ್ಧರಾಮಯ್ಯನವರ ಬರಹ ಚಿಂತನಾ ಕುರಿತು ಕವಿ ಕಾವ್ಯ ಸಂವಾದ ‘ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓದಿನ ಮೂಲಕ ಅಂತರAಗ ಕೆದಕುವ ಕಾರ್ಯವಾಗಬೇಕು. ನಾವು ಹಾಕಿದ ಕಸವನ್ನು ನಾವೇ ಎತ್ತುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಎಚ್ಚರ ಬಂದರೆ ಯಾವ ಸಂಸ್ಕೃತಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಆಗ ಸಮಾಜ, ನಾಡು ಸುಂದರವಾಗಿರುತ್ತದೆ. ಮತ್ತೊಬ್ಬರನ್ನು ತಿದ್ದುವ ಅರ್ಹತೆ, ಯೋಗ್ಯತೆ ಇದ್ದರೆ ಮಾತ್ರ ತಿದ್ದಬೇಕು. ಆ ನೈತಿಕತೆ ಇರಬೇಕು. ಮೊದಲು ನಾವು ಬದಲಾಗಬೇಕು ಆಗ ಸಮಾಜ ಸುಂದರವಾಗಿರುತ್ತದೆ ಎಂದು ಹೇಳಿದರು.
ಚಿಂತಕ ಮಂಜುನಾಥ್ ಮಾಗೋದಿ ಮಾತನಾಡಿ ‘ಪುರಾತನರೆಂದರೆ ಪರಂಪರೆಯ ವಕ್ತಾರರು. ಬುದ್ಧನ ನಗು ಅರಿತವರು ಜಗತ್ತಿನಲ್ಲಿ ಪ್ರಜ್ವಲಿಸುವರು. ಮೊದಲು ನಿಮ್ಮ ನಡೆ ರೂಪಿಸಿಕೊಳ್ಳಬೇಕು ಆಗ ಜಗತ್ತನ್ನು ರೂಪಿಸುವ ಶಕ್ತಿ ಮೂಡುತ್ತದೆ. ಹಲವು ಧರ್ಮಗಳಿಗೆ ಜನ್ಮ ಭೂಮಿ ಭಾರತ. ಇಲ್ಲಿ ಆಯಾ ಧರ್ಮದ ತತ್ವಾನುಸಾರವಾಗಿ ಧಾರ್ಮಿಕ ಆಚರಣೆಗಳು ನಡೆದಿವೆ. ತಾರತಮ್ಯದ ಬೇಧ ನೀತಿಯನ್ನು ನೇರವಾಗಿ ಪ್ರಶ್ನಿಸಿದ್ದು ಶರಣ ಧರ್ಮದ ಮಾತ್ರ. ಗುಲಾಮಗಿರಿಯಿಂದ ಮುಕ್ತಗೊಳಿಸಲು ಶ್ರಮಿಸಿದ್ದು ಶರಣಧರ್ಮ ಎಂದು ಕವಿ ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.’
ಸಾಣೇಹಳ್ಳಿ ಮಠ ಸಂಸ್ಕೃತಿ, ಸಾಹಿತ್ಯ, ಆಧ್ಯಾತ್ಮದ ಕೇಂದ್ರವಾಗಿದ್ದು, ನಾಡಿನಾದ್ಯಂತ ಗುರುತಿಸಿಕೊಂಡಿದೆ.ವಚನ ಸಾಹಿತ್ಯದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿರುವ ವ್ಯಕ್ತಿ ಎಸ್.ಜಿ ಸಿದ್ಧರಾಮಯ್ಯ ಅವರು ಎಂದು ಅಭಿಮಾನ ವ್ಯಕ್ತಪಡಿಸಿದರು.’
ಕವಿ ಚಂದ್ರಶೇಖರ್ ತಾಳ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಶ್ವತ್ ಯಾದವ್ ಜಿ.ಎಸ್, ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗೋ.ತಿಪ್ಪೇಶ್, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಸಾಹಿತಿಗಳಾದ ನಿಸ್ಸಾರ್ ಅಹಮದ್, ನಾಗತಿಹಳ್ಳಿಮಂಜುನಾಥ್ ಸೇರಿದಂತೆ ಹಲವರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.