
ಹಿರಿಯೂರು:
ತಾಲ್ಲೂಕಿನ ಹಿಂಡಸಕಟ್ಟೆ ಮತ್ತು ಭರಮಗಿರಿ 66/11ಕೆ.ವಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ನವಂಬರ್ 22 ರಂದು ಬೆಳಿಗ್ಗೆ 10.00ರಿಂದ ಸಂಜೆ 4.00ರವರೆಗೆ ಹಿಂಡಸಕಟ್ಟೆ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬುದಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕೇಂದ್ರಗಳಲ್ಲಿ ವಿದ್ಯುತ್ ಪಡೆದುಕೊಂಡ ಈ ಕೆಳಕಾಣಿಸಿರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.ಗೋಕುಲನಗರ, ಅರಿಶಿಣಗುಂಡಿ, ಹಾಲ್ ಮಾದೇನಹಳ್ಳಿ, ಶೇಷಪ್ಪನಹಳ್ಳಿ, ಯಲ್ಲದ ಕೆರೆ, ಬಡಗೊಲ್ಲರಹಟ್ಟಿ, ಚಿಗಲಿಕಟ್ಟೆ, ವೀರನಾಗತಿಹಳ್ಳಿ, ನಾಯಕರಕೊಟ್ಟಿಗೆ, ಸೀಗೆಹಟ್ಟಿ, ಪಿಲಾಜನಹಳ್ಳಿ, ಕಾತ್ರಿಕೇನಹಳ್ಳಿ, ಪರಮೇನಹಳ್ಳಿ, ಉಡುವಳ್ಳಿ, ರಂಗಾಪುರ, ಮಾಳಗೊಂಡನಹಳ್ಳಿ, ಮಾಧೆನಹಳ್ಳಿ, ಮುಸ್ಲಿಂಕಾಲೋನಿ, ಗೌಡನಹಳ್ಳಿ, ದಿಂಡಾವರ, ಲಾಯರ್ ದಾಸರಹಳ್ಳಿ, ಮಾವಿನಮಡು, ಎ.ವಿ.ಕೊಟ್ಟಿಗೆ, ಗೌನಹಳ್ಳಿ, ಗೂಗುದ್ದು, ಭೂತಯ್ಯನಹಟ್ಟಿ, ಭರಂಗಿರಿ, ಕುರುಬರಹಳ್ಳಿ, ಕಕ್ಕಯ್ಯನಹಟ್ಟಿ, ವಿವಿಪುರ, ತಳವಾರ ಹಟ್ಟಿ, ಅಮ್ಮನಹಟ್ಟಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.