September 16, 2025
IMG-20241121-WA0176.jpg


ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.
ಮುಂಜಾನೆ ಸಮೀಪದ ವೇದಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕುಂಭಗಳಲ್ಲಿ ಗಂಗಾ ಜಲವನ್ನ ತರಿಸಿ ವಾಲ್ಮೀಕಿ ವಿಗ್ರಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಲ್ಮೀಕಿ ವಿಗ್ರಹ ಲೋಕಾರ್ಪಣೆಯಾಯಿತು.
ಬಳಿಕ ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ತಹಶೀಲ್ದಾರ್ ರಘುಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು, ವರ್ತಮಾನದಲ್ಲಿ ವಾಲ್ಮೀಕಿಯನ್ನು ಮಹರ್ಷಿ, ಆದಿಕವಿ, ಆಧ್ಯಾತ್ಮಿಕ ಚಿಂತಕರಾಗಿ ನೋಡುವುದಕ್ಕಿಂತ ಹೆಚ್ಚಾಗಿ, ಅವರು ಬರೆದ ರಾಮಾಯಣವನ್ನು ನೈತಿಕ ಪಾಠವಾಗಿ ನೋಡುವ ತುರ್ತಿದೆ. ವಾಲ್ಮೀಕಿ ರಚಿಸಿದ ರಾಮಾಯಣದ ರಾಮ ಮಹಾತ್ಮ ಗಾಂಧಿಗೂ ಮಾದರಿಯಾಗಿದ್ದರು. ವರ್ತಮಾನದಲ್ಲಿ ಯುವ ತಲೆಮಾರು ವಾಲ್ಮೀಕಿಯ ಮೂಲಕ ರಾಮಾಯಣ ನೋಡಬೇಕಿದೆ. ವಾಲ್ಮೀಕಿ ಮೂಲಕ ರಾಮಾಯಣ ಮರುವ್ಯಾಖ್ಯಾನಿಸುವ, ವಾಲ್ಮೀಕಿಯ ಕಣ್ಣಿನಿಂದ ರಾಮಾಯಣದ ಪಾತ್ರಗಳನ್ನು ಮರು ವಿಶ್ಲೇಷಣೆಗೆ ಒಳಪಡಿಸುವಂಥ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಆಗ ಮಾತ್ರವೇ ವಾಲ್ಮೀಕಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ’ ಎಂದರು.

ರೈತ ಮುಖಂಡ ಕೆ ಪಿ ಭೂತಯ್ಯ ಮಾತನಾಡಿ, ವೃತ್ತಿಯಲ್ಲಿ ಬೇಟೆಗಾರನಾಗಿ, ಕಳ್ಳನೆಂಬ ಅಪಕೀರ್ತಿ ಗಳಿಸಿ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿ ಜಾಗತಿಕ ಮನ್ನಣೆಗೆ ಸ್ಫೂರ್ತಿಯಾದ ವಾಲ್ಮೀಕಿ ಮಹರ್ಷಿಯಂತಹ ಆದಿಕವಿಗಳ ಇತಿಹಾಸ ಮತ್ತೊಮ್ಮೆ ಚಿಮ್ಮಲಿ ಎಂದರು.

ಪಿಡಿಒ ನಾಗರಾಜ್ ಮಾತನಾಡಿ, ಸೂರ್ಯ ಚಂದ್ರ ಭೂಮಿ ಇರುವರೆಗೂ ಶ್ರೀ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಅಜರಾಮರವಾಗಿರುತ್ತದೆ. ಇಂತಹ ಮೇರು ಕೃತಿಯನ್ನು ಬರೆದ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು. ಸರ್ವ ಜನಾಂಗಗಳು ಮಹರ್ಷಿ ವಾಲ್ಮೀಕಿಯನ್ನು ಪೂಜಿಸುವಂತಹ ಆಗಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ಕುಣಿತದ ಆಚರಣೆಗೆ ಸೀಮಿತವಾಗಬಾರದು. ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣದಿಂದ ಶ್ರೀ ರಾಮನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಯುವಕ ಸಂಘದ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ನಾಗಣ್ಣ, ಚನ್ನವೀರಪ್ಪ, ಗೌಡ್ರು ಬಸವರಾಜಪ್ಪ,
ಗ್ರಾಮ ಪಂಚಾಯಿತಿ ಸದಸ್ಯರಾದ ಜಯಲಕ್ಷ್ಮಿ, ವೆಂಕಟೇಶ್, ಶಾಂತಮ್ಮ, ಪಾಲಯ್ಯ, ಮಾಜಿ ಗ್ರಾಪಂ ಸದಸ್ಯ ಕೆ ಪಿ ತಿಪ್ಪೇಸ್ವಾಮಿ, ಈರಣ್ಣ, ಮಂಜುನಾಥ್ ಯಾದವ್, ವಾಲ್ಮೀಕಿ ಯುವಕ ಸಂಘದ ನಾಗರಾಜ್ ಪ್ರಹ್ಲಾದ್, ಮಂಜುನಾಥ್ ರಮೇಶ್, ವೆಂಕಟೇಶ್, ನಾಗೇಶ್, ವಿರೇಶ್, ಮಚ್ಚಪ್ಪ, ನರಸಿಂಹಪ್ಪ, ತಿಪ್ಪೇಶ್, ಗುರುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ರಾಮುಲು ಆಪ್ತ ಸಹಾಯಕ ಪಾಪೇಶ್ ಪುಷ್ಪ ನಮನ ಸಲ್ಲಿಸಿದರು. ಅನ್ನ ಸಂತರ್ಪಣೆ ಕಾರ್ಯಕ್ರಮವು ಬಾಲ್ಯದ ಗೆಳೆಯರ ಸಾಹಕಾರದಿಂದ ಅಚ್ಚುಕಟ್ಟಾಗಿ ನಡೆಯಿತು. ಉಪನ್ಯಾಸಕ ಪ್ರಭಾಕರ್ ಸ್ವಾಗತಿಸಿದರು. ಮೈಲನಹಳ್ಳಿ ದಿನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading