December 15, 2025
FB_IMG_1729522874485.jpg


ಹಿರಿಯೂರು :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ 2024-29ರ ಚುನಾವಣೆಯ ಒಟ್ಟು 34 ನಿರ್ದೇಶಕರ ಸ್ಥಾನಕ್ಕೆ 19 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಚುನಾವಣಾ ಅಧಿಕಾರಿ ಈ.ತಿಪ್ಪೇರುದ್ರಪ್ಪ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಆರ್.ಟಿ.ಎಸ್.ಶ್ರೀನಿವಾಸ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಕೆ.ಚಂದ್ರಶೇಖರ್, ಕಂದಾಯ ಇಲಾಖೆ ತಾಲ್ಲೂಕು ಕಚೇರಿ ಕೆ.ಬಿ.ತಿಪ್ಪೇಸ್ವಾಮಿ, ಪಂಚಾಯತ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಸ್.ಅವಿನಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿ ಪಿ.ನಟರಾಜ್, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಆರ್.ಅನಿಲ್ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳು- ಬೋಧಕೇತರು ಪಿ.ಎನ್ ನರಸಿಂಹಮೂರ್ತಿರವರು ಹಾಗೂ ಅರಣ್ಯ ಇಲಾಖೆ ಕೆ.ಕಾಂತರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಆರ್.ಲಕ್ಷ್ಮೀದೇವಿ, ತೋಟಗಾರಿಕೆ ಇಲಾಖೆ ಎನ್.ಮಂಜುನಾಥಸ್ವಾಮಿ, ಖಜಾನೆ ಇಲಾಖೆ ಎಂ.ಪ್ರೇಮಲತಾ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಕೆಂಪಣ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯಿತಿ ಕಚೇರಿ ಸೈಯದ್ ಇಮ್ರಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಸ್.ಕುಮಾರಸ್ವಾಮಿ ಸೇರಿದಂತೆ,
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮೀನುಗಾರಿಕೆ, ತೂಕ ಮತ್ತು ಅಳತೆ ಹಾಗೂ ಸಾರಿಗೆ ಇಲಾಖೆ ಎಸ್.ಲಿಂಗರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಆರ್.ಮೇನಕಾ ಜ್ಯೋತಿ, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಎಸ್.ಸತೀಶ, ನಗರಾಭಿವೃದ್ಧಿ ಮತ್ತು ಪೌರಾಡಳಿತ ಕೆ.ರಾಜು, ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ ಇಲಾಖೆ ಎನ್.ಶಿವರಾಜ, ಸಮಾಜ ಕಲ್ಯಾಣ ಇಲಾಖೆ ಟಿ.ತಿಪ್ಪೇಸ್ವಾಮಿ, ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಇದೇ ತಿಂಗಳು 28 ರಂದು ಇನ್ನುಳಿದ 9 ಮತಕ್ಷೇತ್ರಗಳಲ್ಲಿ 15 ಸ್ಥಾನಗಳ ಆಯ್ಕೆಗಾಗಿ 30ಜನರಿಗೆ ಚುನಾವಣೆ ನಡೆಯಲಿದೆ ಎಂಬುದಾಗಿ ಚುನಾವಣಾ ಅಧಿಕಾರಿ ಈ.ತಿಪ್ಪೇರುದ್ರಪ್ಪ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಆರ್.ಟಿ.ಎಸ್.ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading