ಚಿತ್ರದುರ್ಗ ಅ. 21 : ಚಿತ್ರದುರ್ಗ ತಾಲ್ಲೂಕು ನೂತನ ಕಸಾಪ ಅಧ್ಯಕ್ಷರ ಪದ ಗ್ರಹಣ ಮತ್ತು ‘ಕೋಟೆ ನಾಡಿನ ಕೋಗಿಲೆಗಳು – ಸೀಸನ್ 1 ಕಾರ್ಯಕ್ರಮವನ್ನು ಅಕ್ಟೋಬರ್ 27 ರಂದು ಭಾನುವಾರ ಅಂಬೇಡ್ಕರ್ ಸರ್ಕಲ್‍ನಲ್ಲಿರುವ ಚಿತ್ರದುರ್ಗ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.ಚಿತ್ರದುರ್ಗ ಜಿಲ್ಲೆಯ ಉತ್ತಮ ಹಾಡುಗಾರರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮ ಇದಾಗಿದೆ. ಮೊದಲ ಹಂತದಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಿಂದ ಆಯ್ದ 30 ಗಾಯಕರಿಗೆ ಮಾತ್ರ ಅವಕಾಶ. ಹಾಡುಗಳು ಕನ್ನಡದ ನಾಡು,ನುಡಿ,ಸಾಹಿತ್ಯ ಮತ್ತು ಸಂಸ್ಕøತಿಯನ್ನು ಬಿಂಬಿಸುವಂತಿರಬೇಕು. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶ. ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಗುವುದು. ಉತ್ತಮ ಗಾಯಕರಿಗೆ ವಿಶೇಷ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 7892006495, 9449510078 ಸಂಪರ್ಕಿಸಲು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.