ಚಳ್ಳಕೆರೆ ಅ.21 ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಆರ್ಶೀವಚನ ನೀಡಿದರು.
ಹಾಸನಕಡೆಯಿಂದ ಬಳ್ಳಾರಿ ಮಾರ್ಗವಾಗಿ ತೆರಳುವಾಗ ಸಾಣೀಕೆರೆ ಗ್ರಾಮದ ಗುತ್ತಿಗೆದಾರ ತಿಪ್ಪೇಸ್ವಾಮಿ ಮನೆಗೆ ಭೇಟಿ ನೀಡಿದ್ದರು.
ಗುತ್ತಿದಾರ ತಿಪ್ಪೇಸ್ವಾಮಿ ಮಾತನಾಡಿ ಕೋಡಿಮಠಶ್ರೀಗಳು ಬಹಳ ವರ್ಷಗಳಿಂದ ಚಿರಪರಿತರು ಈ ಭಾಗದ ಯಾವುದೇ ಕಡೆ ಹೋದರೂ ನಮ್ಮ ಮನೆಗೆ ಭೇಡಿ ನೀಡಿ ಹೋಗುತ್ತಾರೆ ಈ ದಿನವೂ ಸಹ ಕೋಡಿ ಶ್ರೀಗಳು ಬಳ್ಳಾರಿ ಹೊಸಪೇಟೆಗೆ ಹೋಗುವಾಗ ನಮ್ಮ ಮನೆಗೆ ಭೇಟಿ ನೀಡಿದರು ಆದ್ದರಿಂದ ಕುಟುಂಬಸಮೇತವಾಗಿ ಶ್ರೀಗಳಿಗೆ ಪಾದಪೂಜ ನೆರವೇರಿಸಿ ಆರ್ಶೀವಾದ ಪಡೆದವು ನಂತರ ಅವರು ಬಳ್ಳಾರಿಯತ್ತ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ನಿವೃತ್ತ ಬಿಇಒ ರಾಮಯ್ಯ ಹಾಗು ಕುಟುಂಬಸ್ಥರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.