ಚಳ್ಳಕೆರೆ ಅ.21
ಶಾಸಕ ಟಿ.ರಘುಮೂರ್ತಿ ಪುತ್ರಿ ವಿವಾಹ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ಊಟ ಸವಿದು ಫಲತಾಂಬೂಲ ಸ್ವೀಕರಿದ ಜನರು.
ಹೌದು ಇದು ಚಳ್ಳಕೆರೆ ನಗರದ ಚಿತ್ತದುರ್ಗ ರಸ್ತೆಯ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ನಡೆದ ಶಾಸಕ ಟಿ .ರಘುಮೂರ್ತಿ ಪುತ್ರಿ ಡಾ.ಸುಚಿತ್ರ .ಡಾ.ವರಣ್ ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿವಿಹಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದಾರಾಮಯ್ಯ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರದ ಸಚಿವರಾದ ಸತೀಶ್ ಜಾರಕಿವಳಿ.ರಾಮಲಿಂಗರೆಡ್ಡಿ.ಡಿ.ಸುಧಾಕರ್.ಕೆ.ಎನ್.ರಾಜಣ್ಣ ಮಾಜಿ ಸಚಿವರಾದ ಆಂಜನೇಯ.ರಮೇಶ್ ಜಾರಕಿವಳಿ.ಶ್ರೀರಾಮುಲು ಸೇರಿಂದೆ ಸಂಸದರು.ಶಾಸಕರು ಅನೇಕ ಗಣ್ಯರು. ಅಧಿಕಾರಿಗಳು ಸೇರಿದಂತೆ ನಗರ .ಗ್ರಾಮೀಣ ಭಾಗದ ಜನರು ದೇವಸ್ಥಾನದ ಅದ್ದೂರಿ ಸೆಟ್ ನೋಡಿ ಕಣ್ಣುತುಂಬಿಸಿಕೊಳ್ಳುಔಜತೆಗೆ ಊಟ ಸವಿದು ಫಲತಾಂಬೂಲ ಸ್ವೀಕರಿಸಿ ಹೋಗುತ್ತಿದ್ದರು.
ಶಾಸಕ ಟಿ.ರಘುಮೂರ್ತಿ ಅಭಿಮಾನಿ ಬಳಗದ ಸದಸ್ಯರು ಜವಾಬ್ದಾರಿಂದ ಮದುವೆಗೆ ಬಂದ ಜನರನ್ನು ಊಟ ತಿಂಡಿಗೆ ಕರೆದು ಬಡಿಸುತ್ತಿದ್ದರು ಊಟ ತಿಂಡಿ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು .
ಶಾಸಕ ಪುತ್ರಿ ವಿವಾಹಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಭಾಗವಹಿಸಿದ್ದರು.

































































About The Author
Discover more from JANADHWANI NEWS
Subscribe to get the latest posts sent to your email.