
ಹೊಸದುರ್ಗ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೊಸದುರ್ಗ ವತಿಯಿಂದ ಸೆಪ್ಟಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕವಿಗೋಷ್ಟಿಗೆ ಚಿತ್ರದುರ್ಗ ಜಿಲ್ಲೆಯ ಕವಿಗಳಿಂದ ಕವನಗಳನ್ನ ಆಹ್ವಾನಿಸಲಾಗಿದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ಎಂ.ಆರ್.ಶಾAತಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬರುವ ಸೆಪ್ಟಂಬರ್ ೧೪ ರಂದು ಭಾನುವಾರ ಬೆಳಿಗ್ಗೆ ೧೧.೩೦ ಕ್ಕೆ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನ ನಡೆಸಲು ಉದ್ದೇಶಿಸಿದ್ದು ಭಾಗವಹಿಸಲಿಚ್ಚಿಸುವ ಜಿಲ್ಲೆಯ ಕವಿಗಳು ಸೆಪ್ಟಂಬರ್ ೫ ರೋಳಗೆ ತಾವು ವಾಚನ ಮಾಡಲಿರುವ ಒಂದು ಕವಿತೆ ಹಾಗೂ ಭಾವಚಿತ್ರದೊಂದಿಗೆ (ಪಾಸ್‌ಪೋಟೊ) ಅಧ್ಯಕ್ಷರು/ಕಾರ್ಯದರ್ಶಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಟಿ.ಬಿ.ಸರ್ಕಲ್, ಪ್ರಮುಖ ರಸ್ತೆ, ಹೊಸದುರ್ಗ-೫೭೭೫೨೭ ಚಿತ್ರದುರ್ಗ (ಜಿಲ್ಲೆ) ಇಲ್ಲಿಗೆ ಅಂಚೆ ಅಥವಾ ಕೋರಿಯರ್ ಮೂಲಕ ಕಳುಹಿಸಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದ್ದು ಹೆಚ್ಚಿನ ಮಾಹಿತಿಗೆ ನಾಗತಿಹಳ್ಳಿಮಂಜುನಾಥ್, ಉಪಾಧ್ಯಕ್ಷರು ಮೋ:೯೯೮೬೯೯೪೫೫೮, ಚಂದ್ರು ಕಲಾವಿದ, ಕಾರ್ಯದರ್ಶಿ ಮೋ:೯೯೦೨೮೫೧೩೧೯, ರಮೇಶ್‌ಮತ್ತೋಡು ಮೊ:೭೫೫೩೯೩೩೫೩೯ ಸಂಪರ್ಕಿಸಬಹುದು.
About The Author
Discover more from JANADHWANI NEWS
Subscribe to get the latest posts sent to your email.