September 14, 2025
d21-tm2.jpg

ನಾಗತಿಹಳ್ಳಿ ಮಂಜುನಾಥ್ ಹೊಸದುರ್ಗ

ಹೊಸದುರ್ಗ: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಇನ್ನೂ ಕೂಡ ಮುಂದೆ ಬಾರದೆ ಹಿಂದೆ ಉಳಿದಿದ್ದಾರೆ, ಪ್ರತಿಯೊಬ್ಬ ಮಹಿಳೆಯರಲ್ಲೂ ಸಹಾ ಆತ್ಮ ಸ್ಧೆöÊರ್ಯವಿರಬೇಕು ಮಹಿಳೆಯರು ಸ್ವಾವಲಂಭಿಗಳಾಗಿ ಮುಂದೆ ಬಂದು ಜೀವನ ನಡೆಸಬೇಕು ಎಂದು ನಿಸರ್ಗ ಸಂಸ್ಥೆಯ ಸ್ಥಾಂಸ್ಧಾಪಕಿ ಒಂದನೇ ಸಿಸ್ಟರ್ ಮರಿಯಾ ಪ್ರಿಂಟ್ ಕರೆ ನೀಡಿದರು.
ಪಟ್ಟಣದ ನಿಸರ್ಗ ಸ್ವಶಕ್ತಿ ಸೌಹಾರ್ದ ಸ್ವಸಹಾಯ ಸಹಕಾರಿ ಸಂWದಲ್ಲಿ ಆಯೋಜಿಸಲಾಗಿದ್ದ À ೨೨ ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ಮಹಿಳೆಯರ ಸಬಲೀಕರಣ ಕುರಿತಂತೆ ಕಾರ್ಯಾಗಾರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಂಘ ಸಂಸ್ಥೆ ಸಹಕಾರಿ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆದಾಯ ಉತ್ಪನ್ನ ಚಟುವಟಿಕೆಗಳ ಮುಖಾಂತರ ಜೀವನದಲ್ಲಿ ಮುಂದೆ ಬರಬೇಕು ತಮ್ಮ ಗುರಿಯನ್ನು ಸಾಧಿಸುವ ಬಗ್ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಚಿಂತನೆ ಮಾಡಬೇಕು ಎಂದರು.
ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕಿ ಜೆ ಕಾವ್ಯ ಮಾತನಾಡಿ ಮಹಿಳೆಯರು ಮಹಿಳೆಯರಿಗಾಗಿ ಮಹಿಳೆಯರಿಗೊಸ್ಕರ ನಡೆಸುತ್ತಿರುವ ಈ ಒಂದು ಸಹಕಾರಿ ಹಾಗೂ ಈ ಸಂಸ್ಥೆಯು ತುಂಬಾ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದರು
ನಿಸರ್ಗ ಮಹಿಳಾ ಮಹಾ ಒಕ್ಕೂಟದ ಅಧ್ಯಕ್ಷೆ ಎಂ ಶೈಲಜಾ ಮಹಿಳಾ ಆರ್ಥಿಕ ಸಬಲೀಕರಣ ಕುರಿತಂತೆ ಮಹಿಳೆಯರನ್ನು ಉದ್ದೇಶಿಸಿ ವಿಷಯ ಮಂಡಿಸಿದರು
ಕಾರ್ಯಕ್ರಮದಲ್ಲಿ ನಿಸರ್ಗ ಸಂಸ್ಥೆಯ ಸುಪೇರಿಯರ್ ಒಂದನೇ ಸಿಸ್ಟರ್ ಮೋಕ್ಷ, ಸಹಕಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಪ್ರಕಾಶ್, ಎಸ್ ಮಂಜುಳಾ, ಜಿ.ಆರ್ ನೀಲಮ್ಮ, ಶಿವಮ್ಮ, ವಿಶಾಲ,ಜಯಮ್ಮ ಸೇರಿದಂತೆ ಸಂಘದ ಸದಸ್ಯರುಗಳು ಮಹಿಳೆಯರು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading