September 14, 2025
1755785545082.jpg


ಚಿತ್ರದುರ್ಗ ಆಗಸ್ಟ್.21:
ಎನ್.ಡಿ.ಪಿ.ಎಸ್ (ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಫಿಕ್ ಸಬ್ಸ್‍ಟೆನ್ಸ್ ಆಕ್ಟ್) ಕಾಯ್ದೆ ಪ್ರಕಾರ ಮಾದಕ ವಸ್ತುಗಳ ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದು ಅಬಕಾರಿ ಉಪ ಆಯುಕ್ತೆ ಡಾ.ಕೆ.ಆಶಾಲತಾ ಎಚ್ಚರಿಸಿದರು.
ಅಬಕಾರಿ ಇಲಾಖೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ಬಸವೇಶ್ವರ ವೈದ್ಯಕೀಯ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾದಕ ವ್ಯಸನಿ ಸಮಾಜಕ್ಕೂ ಕಂಟಕನಾಗುತ್ತನೆ. ಮಾದಕ ವಸ್ತುಗಳ ಉತ್ಪಾದನೆ, ಶೇಖರಣೆ ಸಾಗಣಿಕೆ ಮಾರಾಟ ಮತ್ತು ಸೇವನೆಯ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಒಮ್ಮೆ ಕಾಯ್ದೆಯಡಿ ಬಂಧನವಾದರೆ ವಿದ್ಯಾರ್ಥಿ ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅಬಕಾರಿ ಉಪ ಆಯುಕ್ತೆ ಡಾ.ಆಶಾಲತಾ.ಕೆ ಹೇಳಿದರು.
ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಅಥವಾ ಇನ್ನಿತರೆ ಒತ್ತಡಕ್ಕಾಗಿ ದುಶ್ಚಟಗಳಿಗೆ ಮಾರು ಹೋಗಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಅಧೀಕ್ಷಕ ಡಿ.ಎನ್.ಕಿರಣ್, ಅಬಕಾರಿ ನಿರೀಕ್ಷಕಿ ಎ.ವನಿತಾ ಸೇರಿದಂತೆ ಅಬಕಾರಿ ಪೇದೆಗಳಾದ ಕೆ.ರಮೇಶ್ ನಾಯ್ಕ್, ಬಸವರಾಜ, ಸುರೇಶ ಹೆಗಡಿ, ನಾಗರಾಜ ತೊಳಮಟ್ಟಿ, ಕಾಲೇಜು ವ್ಯವಸ್ಥಾಪಕ ಸತ್ಯನಾರಾಯಣ, ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ರೂಪ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading