
ಹಿರಿಯೂರು:
ತಾಲ್ಲೂಕಿನ ಕಲ್ವಳಿ ಭಾಗದ ದಿಂಡಾವರ ಗ್ರಾಮದಲ್ಲಿ ಭೂತೇಶ್ವರ ಜಾತ್ರೆಯ ಪ್ರಯುಕ್ತ ನೀರಿನ ಆಹಾಕಾರ ಎದ್ದಾಗ ಆ ಭಾಗದ ಜನತೆ ನೀರು ನಿಮ್ಮದು ಊಟ ನಮ್ಮದು ಎನ್ನುವ ವಾಕ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲಾ ಮಾಧ್ಯಮಗಳು ಅದನ್ನು ಬಿತ್ತರಿಸಿದ್ದವು.
ಮಾಧ್ಯಮಗಳ ವರದಿಯ ಆಧಾರದ ಮೇಲೆ ಸಚಿವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಮುಕ್ತಾಯಗೊಳ್ಳಬೇಕೆಂದು ಆದೇಶಿಸಿದ್ದರು. ಅದರ ಪ್ರಯುಕ್ತ ಕಲ್ವಳ್ಳಿ ಭಾಗದ ದಿಂಡಾವರ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ದಿಂಡಾವರ ಭಾಗದ ಜನತೆ ಇದೇ ವೇಗದಲ್ಲಿ ಮುಗಿಸಿ ನಮಗೆ ಮಳೆಯ ಕೊರತೆಯಾಗಿದೆ.
ಕಲ್ವಳ್ಳಿ ಭಾಗದ ಯಾವೊಂದು ಕೆರೆಯು ತುಂಬಿಲ್ಲ. ಆದುದರಿಂದ ಬರುವ ಜನವರಿ ಮತ್ತು ಫೆಬ್ರವರಿ ಒಳಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನಮಗೆ ನೀರಿನ ಪೂರೈಕೆ ಮಾಡಬೇಕು ಎಂಬುದಾಗಿ ಕಲ್ವಳ್ಳಿ ಗ್ರಾಮದ ಗ್ರಾಮಸ್ಥರು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರನ್ನು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.