July 24, 2025
IMG20250721113833_01.jpg

ಚಳ್ಳಕೆರೆ: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಯೋಗವು ಸರ್ಕಾರಕ್ಕೆ ಸಲ್ಲಿಸುವ ಶಿಫಾರಸ್ಸಿನಲ್ಲಿ ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ಕೆಲವು ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್ ಮಾರಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಜಕೀಯ ಆರ್ಥಿಕ ಶೈಕ್ಷಣಿಕ ರಾಜ್ಯದ ಉದ್ಯೋಗಗಳಲ್ಲಿ ಸೂಕ್ತ ಪ್ರತಿನಿದ್ಯ ಹೊಂದಿರದ ಕಾರಣಗಳಿಂದ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದವರೆಂದು ಮಾದಿಗ ಸಮುದಾಯಗಳನ್ನು ಪರಿಗಣಿಸಬೇಕು ಇವರ ಜನಸಂಖ್ಯೆ ಶೇಕಡವಾರು ಎಷ್ಟೇ ನಿಗದಿ ಗೊಳಿಸಿದ್ದರು ಅದಕ್ಕೆ ಶೇಕಡ ಒಂದರಷ್ಟು ತೂಕಾಂಶವನ್ನು ನೀಡಿ ಒಟ್ಟು ಒಳ ಮೀಸಲಾತಿ ನಿಗದಿಗೊಳಿಸಲು ಶಿಫಾರಸು ಮಾಡಬೇಕು ಎಕೆ ಎಡಿ ಎ ಎ ಎಂಬ ಜಾತಿ ಪದಗಳನ್ನು ಬಿಟ್ಟು ಮೂಲ ಜಾತಿ ನಮೂದಿಸಲು ಆಯೋಗ ತಿಳಿಸಿದಾಗಲೂ ರಾಜ್ಯದಲ್ಲಿ ಮತ್ತೆ ಎಕೆ ಎಡಿ ಎ ಎ ಜಾತಿ ಪದಗಳನ್ನು ಮತ್ತೆ ಬಳಸಿ ಸಮೀಕ್ಷೆ ನಡೆಸಿದ್ದು ದಟ್ಟ ಅನುಮಾನಗಳಿಗೆ ಕಾರಣವಾಗಿದೆ ಇದಕ್ಕೆ ಆಯೋಗದ ನಿರ್ದೇಶನವೇ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದರು. 

ಸಂಘಟನೆಯ ಪ್ರಧಾನ ಸಂಚಾಲಕ ಸಿ ಕೆ ಮಹೇಶ್ ಮಾತನಾಡಿ ಆಯೋಗದ ನಿರ್ದೇಶನದಂತೆ ಮೂಲ ಜಾತಿ ದಾಖಲಿಸಲು ಆಗದೆ ಇದ್ದಾಗ ಜಾತಿ ಪದಗಳಲ್ಲಿ ದಾಖಲಿಸಬಹುದು ಎಂದು ತಿಳಿಸಿದ್ದರಿಂದ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವವರು ತಮ್ಮ ಜಾತಿಯನ್ನು ಬಹಿರಂಗ ಪಡಿಸದಿರುವ ಕಾರಣಕ್ಕೆ ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಆದ್ದರಿಂದ ಎಕೆ ಎಡಿ ಎಎ ಸಂಖ್ಯೆಯನ್ನು ಪರಿಗಣಿಸಬಾರದು ಜಾತಿವಾರು ಹಂಚಿಕೆ ಮಾಡುವ ಉದ್ದೇಶದಿಂದ ಸರ್ಕಾರದ ಜಾಲತಾಣದಲ್ಲಿ ಬಿಡುಗಡೆ ಮಾಡಬೇಕು ಈ ಕಾರ್ಯ ಆಯೋಗವು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮುಂಚೆ ಆಗಬೇಕು ಎಂದು ಆಗ್ರಹಿಸಿದರು 

ಸಂಘಟನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನಯ್ಯ ಮಾತನಾಡಿ ಸಾಮಾಜಿಕ ತಾರತಮ್ಯ ಸಮಸ್ಯೆಗೆ ಸಂಬಂಧಿಸಿದಂತೆ ಗಣತಿದಾರರು ಸಮೀಕ್ಷೆಯಲ್ಲಿ ಸರಿಯಾದ ರೀತಿ ಪ್ರಶ್ನೆಗಳನ್ನು ಕೇಳಿಲ್ಲ ಆದ್ದರಿಂದ ಅಸ್ಕೃಶ್ಯತೆ ಸಾರ್ವತ್ರಿಕವಾಗಿ ಆಚರಣೆಯಲ್ಲಿದೆ, ಮಾದಿಗ ಸಮುದಾಯಗಳಲ್ಲಿ ದೇವದಾಸಿ ಪೌರಕಾರ್ಮಿಕರು ವಿಧವೆಯರು ಸಾಮಾಜಿಕ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಅತ್ಯಂತ ಕೆಳಸ್ತರದ ವರ್ಗಗಳಾಗಿವೆ, ಮಾದಿಗ ಸಮುದಾಯಕ್ಕೆ ನಿಗದಿಪಡಿಸಿದ ಒಳ ಮೀಸಲಾತಿಯಲ್ಲಿ ದೇವದಾಸಿ ಪೌರಕಾರ್ಮಿಕ ವಿಧವೆಯರಿಗೆ ಕನಿಷ್ಠ ಎರಡು ತಲೆ ಮಾರುಗಳ ವರೆಗೆ ಒಳ ಮೀಸಲಾತಿ ಕಲ್ಪಿಸಬೇಕು ಪರಿಶಿಷ್ಟ ಜಾತಿಗಳಲ್ಲಿ ಯಾವುದೇ ಮಾದಿಗ ಗುಂಪಿನ ಅವರ ಮಕ್ಕಳಿಗೆ ಅನುಕೂಲವಾಗುವಂತೆ ಒಳ ಮೀಸಲಾತಿ ಒದಗಿಸಬೇಕು ಅದರಲ್ಲೂ ಮಾದಿಗ ಸಮುದಾಯದ ನಿರುದ್ಯೋಗ ಪದವೀಧರರಿಗೆ ಆರ್ಥಿಕ ಯೋಜನೆಗಳನ್ನು ನೀಡಲು ಶಿಫಾರಸು ಮಾಡಬೇಕು ಸೇರಿದಂತೆ ಬೇಡಿಕೆ ಪತ್ರದಲ್ಲಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಯ್ಯ ಎಸ್ ಮಾರಪ್ಪ ಸಿ ಕೆ ಮಹೇಶ್ ವೆಂಕಟೇಶ್ ಸಿ ಎಚ್ ಚಿಕ್ಕಣ್ಣ ದಯಾನಂದ ವೀರಭದ್ರಪ್ಪ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading