July 24, 2025
IMG-20250721-WA0202.jpg

ಚಳ್ಳಕೆರೆ ಜು.21

ಬಾಲ್ಯ ವಿವಾಹ ಈ ಸಮಾಜದ ಅನಿಷ್ಟ ಪದ್ಧತಿ. ಅದನ್ನು ತೊಲಗಿಸಲು ಎಲ್ಲೆಡೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಕ್ಷೇತ್ರಶಿಕ್ಷಣಾಧಿಮಾರಿ ಕೆ.ಎಸ್ ಸುರೇಶ್ ಹೇಳಿದರು.
ತಾಲೂಕಿನ‌ ಟಿ ಎನ್ ಕೋಟೆ ಗ್ರಾಮದ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿ ಗಳಿಗೆ ಶಿಕ್ಷಣ ಇಲಾಖೆ.ಶಿಶುಅಭಿವೃದ್ಧಿ. ಕಾರ್ಮಿಕ ಇಲಾಖೆ ಹಾಗೂ ಗ್ರಾಮಪಂಚಾಯಿತಿವತಿಯಿಂದ ಆಯೋಜಿಸಿ ಬಾಲ್ಯವಿವಾಹ ನಿಷೇಧ ಅರುವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒತ್ತಡಕ್ಕೆ ಸಿಲುಕಿ 18 ವರ್ಷಕ್ಕೆ ಮೊದಲೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮದುವೆ ನಂತರ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಾಲ್ಯ ವಿವಾಹ ತಡೆಗೆ ಕಾನೂನು ಜಾರಿಯಲ್ಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ಅರಿವು ಮೂಡಿಸಬೇಕಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಯಾರಿಗೂ ಅಂಜದೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು.

ಸಮಾಜ ಕಾರ್ಯಕರ್ತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರೇಖಾ. ಎನ್ ಮಾತನಾಡಿ ಹುಡುಗಿಗೆ 18 ವರ್ಷದೊಳಗೆ ಹಾಗೂ ಹುಡುಗನಿಗೆ 21 ವರ್ಷದೊಳಗೆ ವಿವಾಹ ಮಾಡುವುದು ಕಾನೂನು ಶಿಕ್ಷರ್ಹ ಅಪರಾಧವಾಗಿದ್ದು ಬಾಲ್ಯವಿವಾಹದಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಹಾಗೂ pocso ಕಾಯ್ದೆ ಕುರಿತು ಶಿಕ್ಷೆ ಬಗ್ಗೆ ತಿಳಿಸಿದರು.
ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಆಪ್ತ ಸಮಾಲೋಚನೆ, ಪೊಲೀಸ್ ಸೇವೆ, ಕಾನೂನು ಸೇವೆ ಹಾಗೂ ವೈದ್ಯಕೀಯ ಸೇವೆಯೂ ಸಖಿ ಒನ್ ಸ್ಟಾಪ್ ಸೆಂಟರ್ ಚಿತ್ರದುರ್ಗ ಇಲ್ಲಿ ಸಿಗುವ ಸೌಲಭ್ಯ ದ ಬಗ್ಗೆ ತಿಳಿಸಿದರು.
ಮಹಿಳಾ ಸಬಲೀಕರಣ ಸಂಯೋಜಕ ವಿನಯ್
ಮಾತನಾಡಿ ಮಕ್ಕಳ ಪೌಷ್ಟಿಕತೆಯ ಅಪೌಷ್ಟಿಕತೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಚಕ ರಂಗಣ್ಣ, ಪ್ರಾಚಾರ್ಯ ದೇವರಾಜ್, ಗ್ರಾಪಂ ಅಧ್ಯಕ್ಷ ಒಬಳೇಶಪ್ಪ ಅಂಗನವಾಡಿ ಮೇಲ್ವಿಚಾರಕಿ ಸುಮಿತ್ರಾ, ಮಂಜುನಾಥ್, ಜಯಮ್ಮ ಶಿಕ್ಷಕಿ, ಅಶ್ರಿತ ಕೇಂದ್ರದ ದೇವಿರಮ್ಮ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading