
ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಲಂಚಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ.
ಪುರಸಭೆ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 25 ಸಾವಿರ ಲಂಚ ಪಡೆಯುುತ್ತಿದ್ದ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.ಶಂಕರಪ್ಪ ಅವರು ಡಿ.ಹೆಚ್.ಎ. ಕುಮಾರ್ ಎನ್ನುವವರ ಖಾಲಿಜಾಗದಲ್ಲಿ ನಂದೀಶ್ವರ ಬಂಬೂ ಡಿಪೋವನ್ನು ಇಟ್ಟುಕೊಂಡಿರುತ್ತಾರೆ.
ಅವರ ಆಸ್ತಿಗಳಲ್ಲಿ ಕೆಲವು ಆಸ್ತಿಗಳನ್ನು ಇ-ಸ್ವತ್ತು ಮಾಡಿಸಲು
ಡಿ.ಹೆಚ್.ಎ. ಕುಮಾರ್ ಇವರ ಮುಖಾಂತರ ಸಲ್ಲಿಸಿದ್ದಾರೆ. ಈ ವೇಳೆ ಹೊಸದುರ್ಗ ಪುರಸಭೆಯ ಮುಖ್ಯಾಧಿಕಾರಿ ತಿಮ್ಮರಾಜು ಅವರು ಆಸ್ತಿಗಳ ಇ-ಸ್ವತ್ತುಗಳು ಮಾಡಿಕೊಡಲು ರೂ. 50 ಸಾವಿರ ರೂಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿರುತ್ತಾರೆ. ಕೊನೆಗೆ ರೂ.25 ರೂಂ ಗಳಿಗೆ ಒಪ್ಪಿಕೊಂಡಿರುತ್ತಾರೆ. ಅವರು ಲಂಚದ ಹಣಕ್ಕೆ ಬೇಡಿಕೆಯಿಟ್ಟ ಸಮಯದಲ್ಲಿ ನಡೆದ ಸಂಭಾಷಣೆಗಳನ್ನು ಕೌನ್ಸಿಲರ್ ಎನ್. ಶಂಕರಪ್ಪ ಅವರು ತನಿಖಾಧಿಕಾರಿಗಳಾದ ಎನ್. ಮೃತ್ಯುಂಜಯ, ಪೊಲೀಸ್ ಉಪಾಧೀಕ್ಷಕರು, ಕ.ಲೋ, ಚಿತ್ರದುರ್ಗ ಇವರಿಗೆ ದೂರು ನೀಡಿರುತ್ತಾರೆ.ಈ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹೊಸದುರ್ಗ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ತಿಮ್ಮರಾಜು ಅವರು
ಎನ್. ಶಂಕರಪ್ಪ ಇವರಿಂದ ರೂ. 25,000/-ಗಳ ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಪ್ರಸ್ತುತ ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.