September 14, 2025
IMG-20250421-WA0125.jpg

ಚಳ್ಳಕೆರೆ ಏ21

ಜನಧ್ವನಿ ನ್ಯೂಸ್ ವರದಿ ಎಫೆಕ್ಟ್  ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ   ಲಕ್ಷ್ಮಿ ಈರನಾಗಮ್ಮ ಹಾಗೂ ಎಂಬುವವರು ದಿನಾಂಕ 21-2-2024 ರಂದು   ಹೆಸರಿಗೆ ಖಾತೆ ಸಂಖ್ಯೆ419ಇರುವ ನಿವೇಶನವನ್ನು ಮಗ ವಿಕಲ ಚೇತನ ಯಶೋಧರ ಕಂದಾಯ ಕಟ್ಟಿ ಈ ಸ್ವತ್ತಿಗೆ ಬೇಕಾದ ಅಗತ್ಯ ದಾಖಲೆಗಳನ್ನು ನೀಡಿ ವರ್ಷ ಕಳೆದರೂ ಇ ಸ್ವತ್ತು ನೀಡಿದೆ ಗ್ರಾಪಂ ಕಚೇರಿ ಹಾಗೂ ಚಳ್ಳಕೆರೆ ನಗರದ ಖಾಸಗಿ ಕಂಪ್ಯೂಟರ್ ಸೆಂಟರ್ ಗೆ ಅಲೆದಾಟ ನಡೆಸಿ ಖಾಸಗಿ ಕಂಪ್ಯೂಟರ್ ಆಪರೇಟರ್ ಗೆ ಇ ಸ್ವತ್ತು ತೆಗೆಯಲು  4 ಸಾವಿರ ರೂಗಳನ್ನು ಪಿ ಡಿ ಒ ವೇದವ್ಯಾಸಲು ಕೂಡಿಸಿದ್ದಾರೆ ಆದರೂ ಇ ‌ಸ್ವತ್ತು ಕೂಟ್ಟಿಲ್ಲ.
‌ಸರಕಾರ ಬಡವರ ಮನೆ ಬಾಗಿಲಿಗೆ ಈ ಸ್ವತ್ತು ಕೊಡಬೇಕೆಂಬ ನಿಯಮವಿದ್ದರೂ ದೇವರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಪಿ ಡಿ ಒ ವೇದವ್ಯಾಸಲುಗೆ ಮಾತ್ರ ಇದಕ್ಕು ನನಗೂ ಸಂಬಂಧವಿಲ್ಲ ಎಂಬಂತೆ ಬಡವರಿಗೆ ಹಾಗೂ  ವಿಕಲಚೇತನರಿಗೆ ಇ -ಸ್ವತ್ತು ಮಾಡಿಕೊಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿತ್ಯ ಕಚೇರಿಗೆ ಅಲೆದು ಅಲೆದು ವಿಕಲಚೇತನ ಯಶೋಧರ ಸುಸ್ತಾಗಿ ಆರೋಗ್ಯ ಕೆಡಿಸಿ ಕೊಂಡು ಆಸ್ಪತ್ರೆಗೆ ಸೇರಿ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಹ ಖರ್ಚು ಮಾಡಿಕೊಂಡಿದ್ದಾರೆ ಎಂಬ ಅಳಲು ತೋಡಿಕೊಂಡಿದ್ದಾರೆ.

ನಿವೇಶನ, ಕಟ್ಟಡ ಹಾಗೂ ಮನೆಗಳ ಮಾರಾಟ ಹಾಗೂ ಪರಭಾರೆ ಮಾಡಲು, ಆಸ್ತಿ ವಿಂಗಡಣೆ ಸೇರಿದಂತೆ ಆಸ್ತಿ ಅಡಮಾನವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆಯಲು ‘ಇ–ಸ್ವತ್ತು’ ಅತ್ಯಗತ್ಯವಾಗಿರುವುದರಿಂದ ಸಾರ್ವಜನಿಕರು ಇ–ಸ್ವತ್ತು ಕೋರಿ  ಗ್ರಾಮ ಪಂಚಾಯಿತಿಗೆ ನಿತ್ಯವೂ ಸಾವಿರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ಹೀಗೆ ಸಲ್ಲಿಕೆಯಾದ ಆರ್ಜಿಗಳಿಗೆ ಪೂರಕ ದಾಖಲೆಗಳ ಕೊರತೆಯ ನೆಪವೊಡ್ಡಿ ಇ– ಸ್ವತ್ತು ನೀಡಲು ಅಧಿಕಾರಿಗಳು ನಿರಾಕರಿಸಲಾಗುತ್ತಿದ್ದು, ಉಳ್ಳವರಿಗೆ ಮಾತ್ರ ಇ– ಸ್ವತ್ತು ಲಭ್ಯವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ದೇವರೆಡ್ಡಿಹಳ್ಳಿ ಗ್ರಾಮದ ವಿಕಲಚೇತನ ಯಶೋಧರ ತಾಯಿ ಲಕ್ಷ್ಮೀ ದೇವಿಗೆ ಈ ಸ್ವತ್ತು ಕೂಡಿಸುವ ರೇ ಕಾದು ನೋಡಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading