
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:ಏಪ್ರಿಲ್ 16ನೇ ಬೆಳಿಗ್ಗೆ 8.30 ಕ್ಕೆ ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ಅವರ ಮೇಲೆ ಅಪರಿಚಿತರಿಂದ ನಡೆದ ಭೀಕರ ಹಲ್ಲೆ ಖಂಡಿಸಿ ಚಳ್ಳಕೆರೆ ವಕೀಲ ಸಂಘದಿಂದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸುವ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ನಗರದ ಕೋರ್ಟ್ ಆವರಣದಿಂದ ಮೌನ ಪ್ರತಿಭಟನೆಯನ್ನು ವಾಲ್ಮೀಕಿ ವೃತ್ತ ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಚೇರಿ ಮುಂಭಾಗ ಬಂದು ಮೌನ ಪ್ರತಿಭಟನೆ ನಡೆಸುವ ಮೂಲಕ ಶಿರಸ್ದಾರ್ ರವರಿಗೆ ಮನವಿಯನ್ನು ತಾಲ್ಲೂಕು ವಕೀಲ ಸಂಘದಿಂದ ನೀಡಿ
ಮಾತನಾಡಿದ ತಾಲೂಕು ವಕೀಲ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಅವರು ದಿನಾಂಕ ಏಪ್ರಿಲ್ 19 ರಂದು ರಾಜ್ಯ ವಕೀಲರ ಪರಿಷತ್ತಿನಲ್ಲಿ ತುರ್ತು ಸಭೆಯನ್ನು ಕರೆದು ಈ ದುರ್ಘಟನೆಯ ಬಗ್ಗೆ ದೀರ್ಘವಾಗಿ ಚರ್ಚಿಸಿ, ಸರ್ವ ಸದಸ್ಯರ ಅನುಮತಿಯ ಮೇರೆಗೆ ರಾಜ್ಯದ ಎಲ್ಲಾ ವಕೀಲರು ತಮ್ಮ ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ. ಸಾಂಕೇತಿವಾಗಿ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೆವೆ. ಹಾಗೂ ಈ ದುರ್ಘಟನೆಯ ಬಗ್ಗೆ ಚಳ್ಳಕೆರೆ ನ್ಯಾಯಾಲಯದಲ್ಲಿನ ಕಾರ್ಯಕಲಾಪಗಳನ್ನು ಸರ್ವಸದಸ್ಯರು ಬಹಿಷ್ಕರಿಸುವುದರೊಂದಿಗೆ, ಸದರಿ ಕೃತ್ಯವನ್ನು ಖಂಡಿಸಿ, ಚಳ್ಳಕೆರೆ ವಕೀಲರ ಸಂಘದಿಂದ ತೆಗೆದುಕೊಂಡ ನಿರ್ಧಾರವನ್ನು ತಹಶೀಲ್ದಾರ್ ರವರು ಸರ್ಕಾರಕ್ಕೆ ತಿಳಿಸುವುದರೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಬೇಕೆಂದು ಮೌನ ಪ್ರತಿಭಟನಾ ಮೆರವಣಿಗೆ ಮುಖಾಂತರ ಮನವಿ ಸಲ್ಲಿಸಿದ್ದೆವೆ.ಹಾಗೂ
ವಕೀಲರ ಮೇಲೆ ಸಾಕಷ್ಟು ಬಾರಿ ಹಲ್ಲೆಗಳನ್ನು ಕಂಡು ನೊಂದು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮಾಹಿತಿ ಕಳಿಸಿದ ನಂತರ ಈಗಿನ ಸರ್ಕಾರ ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತಂದಿರುವುದು ಬಿಟ್ಟರೆ ಕಾಯ್ದೆ ಪ್ರಕಾರ ಯಾವುದು ಜಾರಿಯಲಿ ಇಲ್ಲದೆ ಹಲ್ಲು ಕಿತ್ತಿರುವ ಹಾವಿನ ತರವಾಗಿದೆ ಇದರಿಂದ ರಾಜ್ಯದಲ್ಲಿ ಯಾವುದೇ ವಕೀಲರ ಮೇಲೆ ಹಲ್ಲೆ ಆಗದ ರೀತಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ದಾರ್ ಡಿ.ಗಿರೀಶ್ ರವರು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿಯನ್ನು ತಲುಪಿಸಿ ನಂತರ ಸರ್ಕಾರದಿಂದ ಬರುವ ಮಾಹಿತಿಯನ್ನು ವಕೀಲ ಸಂಘಕ್ಕೆ ತಿಳಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜು, ಸಹ ಕಾರ್ಯದರ್ಶಿ ಎ.ರಾಮಕೃಷ್ಣ, ಟಿ.ರುದ್ರಯ್ಯ, ಎನ್.ಬೀರಪ್ಪ, ಟಿ.ಬಿ.ಶ್ಯಾಮಲ, ಆರ್.ಪಿ.ತಿಪ್ಪೇಸ್ವಾಮಿ.ಇತರರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.