September 14, 2025
CLK-KUVEMPU-20.jpeg

ಚಳ್ಳಕೆರೆ:
ರಾಷ್ಟ್ರಕವಿ ಕುವೆಂಪು ಅವರು ರೂಪಿಸಿರುವ ಮಂತ್ರ ಮಾಂಗಲ್ಯ ಎಂಬ ವಿವಾಹ ಪರಿಕಲ್ಪನೆ ಜಾತಿ, ಧರ್ಮ, ವರ್ಗ ಪ್ರಜ್ಞೆಗಳನ್ನು ಮೀರಿ ಸಾಮಾಜಿಕ ಬದಲಾವಣೆಯ ಪ್ರತೀಕವಾಗಿದೆ ಎಂದು ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದರು.
ಚಳ್ಳಕೆರೆ ತಾಲೂಕಿನ ಪಿ. ಓಬನಹಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದ ಸಂದೀಪ್, ಕೆ.ಸಿ. ರೋಜಾ ಅವರ ವಿವಾಹ ಮಹೋತ್ಸವವನ್ನು ಮಂತ್ರ ಮಾಂಗಲ್ಯ ಪರಿಕಲ್ಪನೆಯಲ್ಲಿ ಮಹೂರ್ತ ನೆರವೇರಿಸಿ ಮಾತನಾಡಿದರು.
ಸರಳ ವಿವಾಹ ತತ್ವವಾದ ಮಂತ್ರ ಮಾಂಗಲ್ಯ ಸಮಾಜದಲ್ಲಿ ಬಲವರ್ಧನೆ ಆಗಬೇಕು. ಸಂಪ್ರದಾಯಿಕ ಮೌಢಾಚಾರಗಳನ್ನು ಹೊರತಾಗಿ ಸಾಂಸಾರಿಕ ಬದುಕು ರೂಪಿಸಿಕೊಳ್ಳುವ ಚಿಂತನೆ ಬೆಳೆಯಬೇಕು. ಹಣಕಾಸಿನ ಮೌಲ್ಯತೆ ತಿಳಿಸುವ ಮತ್ತು ದುಂದುಗಾರಿಕೆ ತೊರೆಯುವ ಮನೋಭಾವನೆ ಮಂತ್ರ ಮಾಂಗಲ್ಯ ವಿವಾಹ ಕಾರ್ಯದ ಭೂಮಿಕೆಯಾಗಿದೆ. ಈ ವಿವಾಹ ಪರಿಕಲ್ಪನೆ ಜಾತ್ಯಾತೀತ ಒಲವುಳ್ಳ ಸಂಬAಧ ಬೆಸೆಯುವ ಸಮಾಜಿಕ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದರು.
ಶಾಸಕ ಟಿ. ರಘುಮೂರ್ತಿ ವಧು ವರರನ್ನು ಆಶೀರ್ವದಿಸಿ, ದಾರ್ಶನಿಕ ಕವಿ ಕುವೆಂಪು ಪ್ರತಿಪಾದಿತ ಮಂತ್ರ ಮಾಂಗಲ್ಯ ಮದುವೆ ಪ್ರಕಾರ ಸತಿಪತಿಗಳು ವಿಶ್ವಮಾನವತಾ ತತ್ವಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಈಗಾಗಲೇ ಪ್ರಗತಿಪರ ವಿಚಾರ ನೆಲೆಯಲ್ಲಿ ಮಂತ್ರ ಮಾಂಗಲ್ಯ ವಿವಾಹ ಕಾರ್ಯ ಜನಪ್ರಿಯವಾಗುತ್ತಿದೆ. ಈ ರೀತಿಯ ಬದಲಾವಣೆ ಚಿಂತನೆಯಲ್ಲಿ ಮದುವೆಗಳ ಮೌಲ್ಯತೆ ಜನತೆಗೆ ತಿಳಿಯಬೇಕಿದೆ ಎಂದು ಹೇಳಿದರು.
ವಿವಾಹ ಕಾರ್ಯದಲ್ಲಿ ಟಿ.ಡಿ. ರಾಜಗಿರಿ, ಬಿ.ಪಿ. ತಿಪ್ಪೇಸ್ವಾಮಿ, ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ಹುಚ್ಚವ್ವನಹಳ್ಳಿ ವೆಂಕಟೇಶ್, ಏಕಾಂತಪ್ಪ, ಗಿರಿಜಮ್ಮ, ಬಿ. ಲೋಕೇಶ್, ಹನುಮಂತರಾಯಪ್ಪ, ಚನ್ನಪ್ಪ, ಭಾಗ್ಯಮ್ಮ, ಗುರುಸ್ವಾಮಿ, ವೆಂಕಟೇಶ್, ಜಗನ್ನಾಥ್, ಪ್ರದೀಪ್, ಮಂಜುನಾಥ್, ಕೆ.ಆರ್. ತ್ರಿವೇಣಿ, ಸೀಗೆಹಟ್ಟಿ ಶಿವಶಂಕರ್, ಸೋಮಶೇಖರಪ್ಪ ಮತ್ತಿತರರಿದ್ದರು.
.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading