ಚಳ್ಳಕೆರೆ:
ದೇಶದ ರಕ್ಷಣೆಗೆ ಅಮೂಲ್ಯ ಸೇವೆ ಸಲ್ಲಿಸಿದ ಯೋಧರ ಬದುಕು ಯುವ ಸಮುದಾಯಕ್ಕೆ ಆದರ್ಶವಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಹೇಳಿದರು.
ತಾಲೂಕಿನ ಚೌಳೂರು ಸಮೀಪದ ಜೆಜೆ ಕಾಲನಿಯಲ್ಲಿ ಶನಿವಾರ ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಮಾಜಿ ಯೋಧ ಡಿ.ಎಂ. ಯೋಗೇಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಆಧುನಿಕತೆಯ ಬೆಳವಣಿಗೆಯೊಂದಿಗೆ ಉದ್ಯೋಗದ ಆಶೆಗಳು ಬದಲಾಗುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ದಿಕ್ಕಿನಲ್ಲಿ ಯುವಕರು ಸಾಗುತ್ತಿರುವುದು ಸಮಾಜಕ್ಕೆ ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ನೆಲ, ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡುವ ಸಂಕಲ್ಪವನ್ನು ಯುವಕರು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಖಂಡೇನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ ಯೋಗೇಶ್ ಅವರು ದೇಶ ಸೇವೆಯ ಮೂಲಕ ಸಾರ್ಥಕ ಜೀವನ ನಡೆಸಿರುವುದು ಶ್ಲಾಘನೀಯ. ಅವರ ಸೇವಾ ಮೌಲ್ಯಗಳನ್ನು ಸಮಾಜ ಗುರುತಿಸಿ ಗೌರವಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯೆ ಶ್ರೀದೇವಿ ಪ್ರಕಾಶ್, ಎಸ್ಟಿ ನಿಗಮದ ಚೌಳೂರು ಲಿಂಗಪ್ಪ, ಡಿ.ಟಿ. ಶ್ರೀನಿವಾಸ್, ಶಿಕ್ಷಕ ಜೆ.ಎಂ. ವೆಂಕಟೇಶ್, ದಸಂಸ ಜಿಲ್ಲಾಧ್ಯಕ್ಷ ಎಚ್. ಮಂಜುನಾಥ್, ಎಂ.ಎನ್. ರಂಗಸ್ವಾಮಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.