ನಾಯಕನಹಟ್ಟಿ- ಸಮೀಪದ ರೇಖಲಗೆರೆ- ಗ್ರಾಮದ ಮಸೀದಿ ಎ- ಗೌಸಿಯಾ ಅರೀಷ ಅಲಿ ಷಾ ಖಾದ್ರಿ ಆಸ್ಥಾನದಲ್ಲಿ ಶನಿವಾರ ನೂರಾರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಒಬ್ಬರಿಗೊಬ್ಬರು ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಇದೇ ವೇಳೆ ಹಬೀಬ್ ಗುರೂಜಿ ಮಾತನಾಡಿ,ರಂಜಾನ್ ಹಬ್ಬ ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ, ಬಡವರ ಇದರಿಂದ ಅಸವಿಕೆ ಒಳಗಾಗುವ ಸಂಕಷ್ಟಗಳನ್ನ ಅರ್ಥ ಮಾಡಿಕೊಳ್ಳುವುದು ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಕೆಟ್ಟ ವಿಚಾರಗಳನ್ನು ಕೆಟ್ಟ ಕೆಲಸಗಳನ್ನು ಮಾಡದಿರುವುದು ನಮ್ಮ ಸುತ್ತಮುತ್ತಲಿನ ವಾಸಿಸುತ್ತಿರುವ ಎಲ್ಲರನ್ನು ಸಹೋದರತ್ವ ಭಾವನೆಯಿಂದ ಕಾಣುವುದು ಮಾನವೀಯ ಮೌಲ್ಯಗಳನ್ನು ಬದುಕಿನದುಕ್ಕು ಅಳವಡಿಸಿಕೊಂಡು ಸಾಗುವುದು ಇದರ ಪ್ರಧಾನ ತಿರಳಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತುವಲ್ಲಿ ಯೂಖೂಬ್, ಉಪಾಧ್ಯಕ್ಷರು ಗೌಸಪೀರ್ ಖಾನ್, ಕಾರ್ಯದರ್ಶಿ ಅಪ್ಜಲ್ ಖಾನ್,ಸದಸ್ಯರಾದ ನೂರುಲ್ಲಾ,ಮುಸೂಪ್, ಮನ್ಸೂರ್ ಖಾನ್, ಇಬ್ರಾಹಿಂ, ಮೌಲಾನ್ ಜಾಫರ್ ಸಾಧಿಕ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.