March 21, 2026
IMG-20260321-WA0286.jpg

ನಾಯಕನಹಟ್ಟಿ- ಕ್ರೀಡಾಪಟುಗಳು ತಾಳ್ಮೆ ಹಾಗೂ ಸಮ್ಮೇಮದಿಂದ ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣ ಮಾಡಿದರೆ ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ. ಬಸಪ್ಪ ನಾಯಕ ಸಲಹೆ ನೀಡಿದರು.

ಶನಿವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾದಯ್ಯನಹಟ್ಟಿ ವಾಲ್ಮೀಕಿ ಕ್ರಿಕೆಟರ್ಸ್ ವತಿಯಿಂದ ಎಂ.ಪಿ. ಎಲ್. ಸೀಜನ್- 3 ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು ಕ್ರೀಡೆ ದೈಹಿಕವಾಗಿ ಬಲ ಮನಸ್ಸಿಗೆ ನೆಮ್ಮದಿ ನೀಡುತ್ತದೆ ತೀರ್ಪುಗಾರರು ಯಾವುದೇ ವ್ಯಕ್ತಿ ಒಬ್ಬನ ಪರವಾಗಿ ತಪ್ಪು ತೀರ್ಪು ನೀಡುವುದರ ಬದಲಾಗಿ ಕ್ರೀಡಾಪಟುವಿಗೆ ಉತ್ತೇಜನ ನೀಡುವ ದಿಕ್ಕಿನಲ್ಲಿ ತೀರ್ಪು ನೀಡಬೇಕು ಪ್ರತಿಯೊಬ್ಬ ಯುವಕರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದರು.

ಪಟ್ಟಣ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ ಮಾತನಾಡಿದರು ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಿದಾಗ ತಾವು ಏನನ್ನಾದರೂ ಸಾಧಿಸಬೇಕು ಎಂಬ ಛಲವನ್ನು ಇಟ್ಟುಕೊಳ್ಳಬೇಕು ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾದದ್ದು ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಎಂದರು.

ಯಜಮಾನ ಓಬಯ್ಯ, ಪೂಜಾರಿ ತಿಪ್ಪಯ್ಯ,ದಳಪತಿ ನಾಗರಾಜ್, ಯಜಮಾನ ಯರ್ರಯ್ಯ, ದೊಡ್ಡ ಪಾಲಯ್ಯ, ಕಾಮಯ್ಯ, ದಳಪತಿ ಮಹೇಶ್, ಅಂಗಡಿ ಮಹಾಂತೇಶ್, ಗಾರೆ ಓಬಣ್ಣ, ಆರ್ ಬಸಣ್ಣ, ಕೆ.ಪಿ. ತಿಪ್ಪೇಸ್ವಾಮಿ, ಜಯಣ್ಣ, ಬೋರಯ್ಯ, ಪೂಜಾರಿ ಬೋರಯ್ಯ, ಕೆ.ಪಿ. ಓಬಣ್ಣ ಕೆ.ಆರ್.ಟಿ. ಸಿ, ಕರವೇ ಕನ್ನಡ ಸೇನೆ ಹೋಬಳಿ ಉಪಾಧ್ಯಕ್ಷ ಕೆ.ಪಿ .ನಾಗರಾಜ್, ಪಾರಿತೋಷಕ ದಾನಿಗಳು ಎ.ಟಿ. ತಿಪ್ಪೇಸ್ವಾಮಿ, ಟಿ.ಶೇಖರಿ, ವೈ. ಸುರೇಶ್, ಎಸ್ ರಮೇಶ್, ಸೇರಿದಂತೆ ಸಮಸ್ತ ಮಾದಯ್ಯನಹಟ್ಟಿ ಗ್ರಾಮಸ್ಥರು ಕ್ರೀಡಪಟ್ಟುಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading