ನಾಯಕನಹಟ್ಟಿ-ಮಾ.21. ಪಟ್ಟಣದ ತೊರೆಕೋಲಮ್ಮನಹಳ್ಳಿ ರಸ್ತೆಯಲ್ಲಿರುವ ಈದ್ಗ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಮೈದಾನದಲ್ಲಿ ಸಾಮೂಹಿಕವಾಗಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು.



ಇದೆ ವೇಳೆ ಜಾಮಿಯಾ ಮಸೀದಿ ಅಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿದರು ರಂಜಾನ್ ಹಬ್ಬವು ತ್ಯಾಗ ಶಾಂತಿ ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳು ಸಂಕೇತವಾಗಿದ್ದು ಸಮಾಜದಲ್ಲಿ ಏಕತೆ ಬೆಳೆಸುವ ಹಬ್ಬವಾಗಿದೆ ಪ್ರತಿಯೊಬ್ಬರೂ ಉಪವಾಸದ ಮೂಲಕ ಆತ್ಮ ಶುದ್ಧಿ ಸಹನೆ ಅರಿತುಕೊಳ್ಳಬೇಕು ಬಡವರ ನೆರವಿಗೆ ಮುಂದಾಗುವುದು ಪರಸ್ಪರ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುವುದು ಈ ಹಬ್ಬದ ಸಾರವಾಗಿದೆ ಎಂದು ತಿಳಿಸಿದರು.
ಜಾಮಿಯ ಮಸೀದಿ ಗುರುಗಳಾದ ಅಫ್ಜಲ್ ಮಹಮ್ಮದ್ ಸುಹೇಬ್. ಮಹಮ್ಮದ್ ಮುಸೇಬ್.
ಉಪಾಧ್ಯಕ್ಷ ಮಹಮ್ಮದ್ ರಫೀಕ್ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.