ಹಿರಿಯೂರು:
ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರವಾರು ಅನುದಾನ ಬಿಡುಗಡೆ ಆಗದೇ ತೊಂದರೆಯಲ್ಲಿರುವ ಸಚಿವರು-ಶಾಸಕರ ವೇತನವನ್ನು ಇಮ್ಮಡಿಗೊಳಿಸುವ ಮೂಲಕ ಮುಖ್ಯಮಂತ್ರಿ ಸಾಮಾಜಿಕ ನ್ಯಾಯ ರಕ್ಷಿಸಿದ್ದಾರೆ ಎಂಬುದಾಗಿ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ ಅವರು ವ್ಯಂಗ್ಯವಾಡಿದ್ದಾರೆ.
ಬಿ.ಜೆ.ಪಿ. ಸರ್ಕಾರವನ್ನು ಶೇ.40ರ ಸರ್ಕಾರ ಎಂಬುದಾಗಿ ಆರೋಪಿಸಿ ಬೀದಿಗಿಳಿದು ಪ್ರತಿಭಟಿಸಿದ್ದ ಕಾಂಗ್ರೆಸ್ ನವರು ತಮ್ಮ ಆಡಳಿತದಲ್ಲಿ ಕಮೀಷನ್ ಅನ್ನು ಹಿಂದಿಗಿಂತ ಹೆಚ್ಚು ಮಾಡಿಕೊಳ್ಳಲು ಗ್ಯಾರಂಟಿ ಯೋಜನೆಗಳೇ ಕಾರಣ. ಎಂದರಲ್ಲದೆ,
ಅಭಿವೃದ್ಧಿ ಯೋಜನೆಗಳಿಗೆ ಬರುತ್ತಿರುವ ಅನುದಾನವೇ ಕಡಿಮೆ ಆಗಿರುವ ಕಾರಣಕ್ಕೆ ಆದಾಯವನ್ನು ಸರಿದೂಗಿಸಿಕೊಳ್ಳಲು ಕಮೀಷನ್ ಹೆಚ್ಚಳ ಮಾಡಿಕೊಂಡಿರುವುದು ಕೂಡ ಸಾಮಾಜಿಕ ನ್ಯಾಯದ ಮತ್ತೊಂದು ಮುಖ ಎಂಬುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ದಿನನಿತ್ಯ ಬೆಳಗಾದರೆ ಯಾವ ವಸ್ತುವಿನ ಬೆಲೆ ಏರಿಸಿರಬಹುದು ಎಂಬ ಭಯ ಸಾರ್ವಜನಿಕರನ್ನು ಕಾಡತೊಡಗಿದೆ. ಪ್ರತಿ ಯೂನಿಟ್ ವಿದ್ಯುತ್ ದರವನ್ನು 35ರಿಂದ 36 ಪೈಸೆ ಹೆಚ್ಚಿಸಲು ಹೊರಟಿರುವ ಸರ್ಕಾರಕ್ಕೆ ನೈತಿಕತೆ, ಜನಪರ ಕಾಳಜಿ ಎಳ್ಳಷ್ಟೂ ಉಳಿದಂತೆ ಕಾಣುತ್ತಿಲ್ಲ.ಸಾರ್ವಜನಿಕರ ಸಹನೆಗೂ ಮಿತಿ ಇದೆ ಎಂಬುದನ್ನು ಅರಿತು ಮಾನ್ಯ ಮುಖ್ಯಮಂತ್ರಿಗಳು ಮುನ್ನೆಡೆಯಲಿ ಎಂಬುದಾಗಿ ಅವರು ಸಲಹೆ ನೀಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.