ಹಿರಿಯೂರು :
ಕಳೆದ ಎರಡು ದಿನಗಳಿಂದ ಎರಡೂ ಸದನಗಳಲ್ಲಿ ಹನಿಟ್ರ್ಯಾಪ್ ಪ್ರಕರಣ ಚರ್ಚೆ ತೀವ್ರಗತಿ ಪಡೆದುಕೊಳ್ಳುತ್ತಿದ್ದರೂ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷ ವಿಷಯಾಂತರ ಹಾಗೂ ಮೌನಕ್ಕೆ ಜಾರುತ್ತಿರುವುದು ಸರ್ಕಾರದ ಪಾಳಯದಲ್ಲಿ ಎಲ್ಲೋ ಒಂದು ಕಡೆ ಪ್ರಮುಖ ಹುದ್ಧೆಗಳನ್ನು ಪಡೆಯಲು ಆಂತರಿಕ ಚಿತಾವಣೆ ಕಾರಣವಾಗಿರಬಹುದು ಎಂಬುದಾಗಿ ಬಿ.ಜೆ.ಪಿ. ಮುಖಂಡರು ಹಾಗೂ ನಗರಸಭೆ ಮಾಜಿ ಸದಸ್ಯರಾದ ಕೇಶವಮೂರ್ತಿ ಅವರು ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೆಲವು ಸ್ಥಾನಗಳಿಗೆ ಕಸರತ್ತು ನಡೆಯುತ್ತಲೇ ಇದೆ. ಬಾಯಿ ಮಾತಿನಲ್ಲಿ ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಮಾಮೂಲಿ ಡೈಲಾಗ್ ಹೇಳುವ ಮೂಲಕ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು, ಮತ್ತು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಹಾಗೂ ನಾಯಕರುಗಳ ಬಾಯಿಗೆ ಬೀಗ ಹಾಕಬೇಕು, ಎಂಬ ಷಡ್ಯಂತ್ರದಿಂದ ಕಾಂಗ್ರೆಸ್ ನಾಯಕರುಗಳು ಈ ಹನಿಟ್ರ್ಯಾಪ್ ದಾರಿಯನ್ನು ಕಂಡುಕೊಂಡಿದ್ದಾರೆ ಎಂಬ ಅನುಮಾನ ಬರುತ್ತಿದೆ ಎಂದಿದ್ದಾರೆ.
ಆಡಳಿತಾರೂಢ ಪಕ್ಷದ ಸಚಿವರು, ಶಾಸಕರು, ರಾಜ್ಯದಲ್ಲಿ ಹನಿಟ್ರ್ಯಾಪ್ ಕಾರ್ಖಾನೆ ಇದೆ ಎಂದು ಹೇಳಬೇಕಾದಲ್ಲಿ ರಾಜಕೀಯ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ, ಕೂಡಲೇ ಸರ್ಕಾರಕ್ಕೆ ನೈತಿಕತೆ ಇದ್ದರೆ ಅಥವಾ ಸಚ್ಚಾರಿತ್ರ್ಯರು ನಮ್ಮ ಶಾಸನಸಭೆಯಲ್ಲಿ ಇದ್ದಾರೆ ಎಂದು ಸಾರ್ವಜನಿಕರಿಗೆ ಅನಿಸಬೇಕಾದಲ್ಲಿ ಹಾಲಿ ನ್ಯಾಯಾಧೀಶರಿಗೋ ಅಥವಾ ಸಿಬಿಐಗೋ ಈ ಪ್ರಕರಣ ವಹಿಸಿಕೊಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.