ಬೆಂಗಳೂರು, ಫೆಬ್ರವರಿ 21
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಅಂದಾಜು ರೂ. 55.02 ಕೋಟಿ ಮೌಲ್ಯದ 09 ಎಕರೆ 34.8 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ರಾಜಕಾಲುವೆ, ಕೆರೆ, ತೋಪು, ಗೋಮಾಳ, ಹಿಡುವಳಿ ಜಮೀನಿನ ಬಿ ಖರಾಬು, ಸರ್ಕಾರಿ ಕಟ್ಟೆ ಹಾಗೂ ಖರಾಬು ಜಾಗಗಳಿಗೆ ಭೇಟಿ ನೀಡಿ ಸಮನ್ವಯಿತ ಕಾರ್ಯಾಚರಣೆ ನಡೆಸಿದರು.
ಬೆಂಗಳೂರು ಪೂರ್ವ ತಾಲ್ಲೂಕು
ಕೆ.ಆರ್.ಪುರ ಹೋಬಳಿ – ನಲ್ಲೂರಹಳ್ಳಿ ಗ್ರಾಮ (ಸ.ನಂ 46) ಸ್ಮಶಾನ: 0.09 ಗುಂಟೆ – ರೂ. 2.50 ಕೋಟಿ
ಬಿದರಹಳ್ಳಿ ಹೋಬಳಿ – ಬಿದರೆ ಅಗ್ರಹಾರ (ಸ.ನಂ 52) ಸ್ಮಶಾನ: 0.04 ಗುಂಟೆ – ರೂ. 0.80 ಲಕ್ಷ
ವರ್ತೂರು ಹೋಬಳಿ – ಭೋಗನಹಳ್ಳಿ (ಸ.ನಂ 8) ಸ್ಮಶಾನ: 0.03 ಗುಂಟೆ – ರೂ. 0.60 ಲಕ್ಷ
ಆನೇಕಲ್ ತಾಲ್ಲೂಕು
ಅತ್ತಿಬೆಲೆ ಹೋಬಳಿ – ಇಂಡ್ಲಬೆಲೆ (ಸ.ನಂ 132 & 122) ರಾಜಕಾಲುವೆ: 0.20 ಗುಂಟೆ – ರೂ. 0.40 ಲಕ್ಷ
ಸರ್ಜಾಪುರ ಹೋಬಳಿ – ಸೋಂಪುರ-ಯಮರೆ (ಸ.ನಂ 82 & 48) ಕೆರೆ: 1 ಎಕರೆ 0.20 ಗುಂಟೆ – ರೂ. 6.00 ಕೋಟಿ
ದೊಡ್ಡತಿಮ್ಮಸಂದ್ರ (ಸ.ನಂ 144) ತೋಪು: 1 ಎಕರೆ 0.01 ಗುಂಟೆ – ರೂ. 2.00 ಕೋಟಿ
ಹಾರೋಹಳ್ಳಿ (ಸ.ನಂ 64) ಗೋಮಾಳ: 0.20 ಗುಂಟೆ – ರೂ. 2.00 ಕೋಟಿ
ಜಿಗಣಿ ಹೋಬಳಿ – ಮಾರಗೊಂಡನಹಳ್ಳಿ (ಸ.ನಂ 50 & 53) ರಾಜಕಾಲುವೆ: 1 ಎಕರೆ 0.20 ಗುಂಟೆ – ರೂ. 3.00 ಕೋಟಿ
ಬೆಂಗಳೂರು ದಕ್ಷಿಣ ತಾಲ್ಲೂಕು
ತಾವರೆಕೆರೆ ಹೋಬಳಿ – ಪುರದಪಾಳ್ಯ (ಸ.ನಂ 4) ಸ್ಮಶಾನ: 0.10 ಗುಂಟೆ – ರೂ. 0.09 ಲಕ್ಷ
ಉತ್ತರಹಳ್ಳಿ ಹೋಬಳಿ – ಹೊಸಕೆರೆಹಳ್ಳಿ (ಸ.ನಂ 75/2) ಬಿ ಖರಾಬು: 0.10 ಗುಂಟೆ – ರೂ. 10.00 ಕೋಟಿ
ತಟಗುಪ್ಪೆ (ಸ.ನಂ 16) ಸರ್ಕಾರಿ ಕಟ್ಟೆ: 0.11 ಗುಂಟೆ – ರೂ. 0.22 ಲಕ್ಷ
ಬೇಗೂರು ಹೋಬಳಿ – ಎಳೇನಹಳ್ಳಿ (ಸ.ನಂ 47) ಖರಾಬು: 2 ಎಕರೆ 0.38 ಗುಂಟೆ – ರೂ. 25.00 ಕೋಟಿ
ಕೆಂಗೇರಿ (ಸ.ನಂ 15): 0.3.8 ಗುಂಟೆ – ರೂ. 0.41 ಲಕ್ಷ
ಯಲಹಂಕ ತಾಲ್ಲೂಕು
ಜಾಲ ಹೋಬಳಿ – ಮಾರೇನಹಳ್ಳಿ (ಸ.ನಂ 167, 168 & 173): 0.10 ಗುಂಟೆ – ರೂ. 0.50 ಲಕ್ಷ
ಬೆಂಗಳೂರು ಉತ್ತರ ತಾಲ್ಲೂಕು
ದಾಸನಪುರ ಹೋಬಳಿ – ತೊರೆನಾಗಸಂದ್ರ (ಸ.ನಂ 20) ಸರ್ಕಾರಿ ಖರಾಬು: 0.15 ಗುಂಟೆ – ರೂ. 1.50 ಕೋಟಿ
ಈ ಕಾರ್ಯಾಚರಣೆಯಲ್ಲಿ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲಾಡಳಿತದ ಈ ಕ್ರಮ ಸಾರ್ವಜನಿಕ ಆಸ್ತಿ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.