ನಾಯಕನಹಟ್ಟಿ- ಸಮೀಪದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಶನಿವಾರ ಜರುಗಿತು.
ಶನಿವಾರ ಗ್ರಾಮಸ್ಥರು ರಥೋತ್ಸವದ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜೆ ವಿಧಿ ವಿಧಾನಗಳ ನೆರವೇರಿಸಲಾಯಿತು.








ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂವುಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿದ್ದರು.
ಗ್ರಾಮದ ಯಜಮಾನ ಬೊರಯ್ಯ ರವರ ವಂಶಸ್ಥರ ಮನೆಯಿಂದ ರಥೋತ್ಸವಕ್ಕೆ ಬಲಿಯನ್ನ ತರಲಾಯಿತು.
ಕಾಸು ಮೀಸಲು ಮೊಸರು ಕುಂಬಾ ಜಿನಗಿ ಹಾಲು ತಂದು ಶ್ರೀ ವೀರಾಂಜನೇಯ ಸ್ವಾಮಿ ರಥಕ್ಕೆ ಎಡೆ ಹಾಕಲಾಯಿತು.
ಇನ್ನೂ ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು ಗ್ರಾಮದ ಮಾಜಿ ಸೈನಿಕ ಬಿ ಬೋಸೆರಂಗಪ್ಪ₹ 40.000 ರೂ.ಗೆ ಹರಾಜಿನಲ್ಲಿ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.
ನಂತರ ಮಹಾಮಂಗಳಾರತಿ ಮಾಡಿ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಸಂಖ್ಯೆಯ ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ರಥ ಸಂಚರಿಸುವ ದಾರಿ ಇದ್ದಕ್ಕೂ ಭಕ್ತರು ಬಾಳೆಹಣ್ಣು ಮೆಣಸು ಮಂಡಕ್ಕಿ ಎರಚುತ್ತಿದ್ದರು..
ರಥೋತ್ಸವದಲ್ಲಿ ಡೊಳ್ಳು ಹಾಗೂ ನಂದಿಕೋಲು ಕುಣಿತ ಗಮನ ಸೆಳೆದವು.
ಇದೆ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬೋಸಮ್ಮ ಮಂಜುನಾಥ್, ಸದಸ್ಯರಾದ ಸುನಿತಾ ಜಿ.ಬಿ. ಮುದಿಯಪ್ಪ, ಪಿ.ಓಬಯ್ಯ ದಾಸ್, ಗ್ರಾಮಸ್ಥರಾದ ಬಿ.ಡಿ. ಧನುಜಯ, ಬಿ. ಎಲ್. ಬೋಸಯ್ಯ, ಜಿ.ಬಿ. ಮುದಿಯಪ್ಪ ಎಸ್ ಟಿ ಬಸವರಾಜ್, ಪಿ.ಬಿ. ಬೋಸಯ್ಯ, ಮಲ್ಲಕ್ ಬೋರಯ್ಯ, ಶಿಕ್ಷಕ ಡಿ ಬಿ ಬೋರಯ್ಯ, ಪ್ರಕಾಶ್, ಸೇರಿದಂತೆ ಸಮಸ್ತ ಬೋಸೆದೇವರಹಟ್ಟಿ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.