ಶಿವಮೊಗ್ಗ, ಫೆಬ್ರವರಿ 20: ನಗರದ ಹೊರವಲಯ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಪ್ರೆಸ್ ಕಾಲೋನಿ – ಶೋಭಾ ಬಡಾವಣೆ ನಡುವಿನ ರಸ್ತೆಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಬೀದಿ ದೀಪಗಳ ವ್ಯವಸ್ಥೆ ಮಾಡಿದ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಸಂತೋಷ್ ಕುಮಾರ್ ಹಾಗೂ ಪಿಡಿಓ ರಾಜಪ್ಪ ಅವರಿಗೆ ಸ್ಥಳೀಯ ನಿವಾಸಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸದರಿ ಬಡಾವಣೆಗಳ ನಡುವಿನ ರಸ್ತೆಯಲ್ಲಿ ಬೀದಿ ದೀಪಗಳ ವ್ಯವಸ್ಥೆಯಿರಲಿಲ್ಲ. ಪರಿಣಾಮವಾಗಿ ಕಾರ್ಗತ್ತಲು ಆವರಿಸುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮದ್ಯ ಹಾಗೂ ಗಾಂಜಾ ವ್ಯಸನಿಗಳು ಬೀಡುಬಿಡುತ್ತಿದ್ದರು. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು ಎಂಬುದು ನಿವಾಸಿಗಳ ಅಳಲು.
ಈ ಕುರಿತಂತೆ ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಪಿಡಿಓ ರಾಜಪ್ಪ ಅವರ ಗಮನಕ್ಕೆ ವಿಷಯ ತರಲಾಗಿತ್ತು. ಫೆಬ್ರವರಿ 19 ರಂದು ಸದರಿ ರಸ್ತೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ರಾತ್ರಿ ವೇಳೆ ಸಾರ್ವಜನಿಕರ ಸಂಚಾರಕ್ಕೆ ಹೆಚ್ಚಿನ ಭದ್ರತೆ ಮತ್ತು ಅನುಕೂಲ ಕಲ್ಪಿಸಲಾಗಿದೆ.
ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಸಂತೋಷ್ ಕುಮಾರ್ ಹಾಗೂ ಪಿಡಿಓ ರಾಜಪ್ಪ ಅವರ ತ್ವರಿತ ಕ್ರಮಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ. ರೇಣುಕೇಶ್ ತಿಳಿಸಿದ್ದಾರೆ.
ಗಮನಿಸಲಿ:
ಪಾರ್ಕ್‌ಗಳ ಸ್ವಚ್ಛತೆ, ಬಡಾವಣೆಗಳ ಮನೆಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹಣೆ ವ್ಯವಸ್ಥೆ, ಬೋರ್‌ವೆಲ್ ಮೋಟಾರ್ ದುರಸ್ತಿ, ಅಭಿವೃದ್ಧಿಗೊಂಡ ಪಾರ್ಕ್‌ಗಳಿಗೆ ಮಹಾಪುರುಷರ ಹೆಸರು ನಾಮಕರಣ, ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ದುರಸ್ತಿ ಹಾಗೂ ಯುಜಿಡಿ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತ ಬಿ. ರೇಣುಕೇಶ್ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.