ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಪಟ್ಟಣದ ಹೋಟೆಲ್ ಉದ್ಯಮಿ ದೇವಣ್ಣ ಎಂದೇ ಹೆಸರಾಗಿದ್ದ
ಕೆ.ಎನ್.ದೇವುಕುಮಾರ್ (68) ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದೇವಣ್ಣ ಅವರು ವಿಧಿವಶರಾಗಿದ್ದಾರೆ.
ಮೃತರು ಪತ್ನಿ ಲಕ್ಷ್ಮಿ, ಪುತ್ರರಾದ ಅರವಿಂದ, ಹರೀಶ ಹಾಗೂ ಪುತ್ರಿ ಆಶಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದೇವಣ್ಣ ಅವರು ಕಳೆದ 50 ವರ್ಷಗಳಿಂದಲೂ ಸಾಲಿಗ್ರಾಮ ಪಟ್ಟಣದಲ್ಲಿ ನಿರಂತರವಾಗಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದರು.
ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ದೇವಣ್ಣ ಅವರ ಕಾರ್ಯ ವೈಖರಿ ಹಾಗೂ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ದೇವಣ್ಣ ಅವರನ್ನು ಸನ್ಮಾನಿಸಿದ್ದವು.
ಮೃತರ ಅಂತ್ಯ ಕ್ರಿಯೆಯನ್ನು ದೇವಣ್ಣ ಅವರ ಹುಟ್ಟೂರಾದ ಕುಂದಾಪುರದಲ್ಲಿ ಶುಕ್ರವಾರ ನೆರವೇರಿಸಲಾಗುವುದೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.